Sunday, September 20, 2026

BDA Apartments

ಜಿಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿಚಾರ: ಪ್ರತಿಭಟನೆಯಲ್ಲಿ ಪಾಲ್ಗೊಂಡ ...
Home Front Page ಜಿಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿಚಾರ: ಪ್ರತಿಭಟನೆಯಲ್ಲಿ ಪಾಲ್ಗೊಂಡ ನಟಿ ದೀಪಿಕಾ ಪಡುಕೋಣೆಗೆ ಸಂಸದ...

ಜಿಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿಚಾರ: ಪ್ರತಿಭಟನೆಯಲ್ಲಿ ಪಾಲ್ಗೊಂಡ ನಟಿ ದೀಪಿಕಾ ಪಡುಕೋಣೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು….

ಮೈಸೂರು,ಜ,8,2020(www.justkannada.in): ಜಿಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಟಿ ದೀಪಿಕಾ ಪಡುಕೋಣೆಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಮುಂದಿನ ವಾರ ನಿಮ್ಮ ಸಿನಿಮಾ ಬಿಡುಗಡೆ ಆಗುತ್ತಿದೆ. ನಿಮಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಸಿನಿಮಾ ಚೆನ್ನಾಗಿದ್ದರೇ ಜನ ನೋಡುತ್ತಾರೆ. ಒಳ್ಳೆ ವಿಚಾರ ಇದ್ದರೆ ಜನ ಬೆಂಬಲ ನೀಡ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ಜೆಎನ್ ಯು ಗಲಾಟೆ ವಿಚಾರ ದಿನಕೊಂದು ಮಾಹಿತಿ ಬರ್ತಾ ಇದೆ. ಎಬಿವಿಪಿಯವರ ಮೇಲೆ ಹಲ್ಲೆ ಮಾಡಿರೊ ವೀಡಿಯೋ ಬಿಡುಗಡೆ ಅಗ್ತಾ ಇದೆ‌. ಈಗ ಪ್ರತಿಭಟನೆಗೆ ಸಿನಿಮಾದವರನ್ನ ಕರೆದುಕೊಂಡು ಹೋಗಿ ಬೇರೆ ಬಣ್ಣ ಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಜೆಎನ್ ಯು ವಿವಿಗೆ ಇಂದಿರಾಗಾಂಧಿ 45 ದಿನ ಬೀಗ ಹಾಕಿಸಿದ್ದರು. ಇಂದಿರಾ ಗಾಂಧಿ ಮಾಡಿದ್ದು ತಪ್ಪು ಅಂತ ಕಾಂಗ್ರೆಸ್ ನವರು ಹೇಳ್ತಾರಾ.? ಎಂದು ಪ್ರಶ್ನಿಸಿದ ಸಂಸದ  ಪ್ರತಾಪ್ ಸಿಂಹ, ಇಡಿದೇಶದಲ್ಲಿ  600 ಕ್ಕೂ ಹೆಚ್ಚು ಯುನಿವರ್ಸಿಟಿ ಇದ್ದಾವೆ. ಜಿನ್ ಯು, ಜಾಮಿಯಾ ಆಮೀಯಾ  ಇವೆರಡೆ  ಅಲ್ಲ. ಎಲ್ಲಾ ಕಡೆ ಪಾಠ ಪ್ರವಚನಗಳ ಚೆನ್ನಾಗೆ ನಡಿತಾ ಇದಾವೆ. ಅಂದರೆ ದೇಶ ವಿರೋಧಿ ಚಟುವಟಿಕೆ ಎಲ್ಲಿ ಇದಾವೆ ಎಂದು ಇದರಿಂದನೇ ಅರ್ಥ ಆಗುತ್ತದೆ ಎಂದು ಸಂಸದಪ್ರತಾಪ್ ಸಿಂಹ ತಿಳಿಸಿದರು.

Key words: Attack -JNU students- protest- Actress- Deepika Padukone – mysore MP- Pratap Sinha