Wednesday, August 19, 2026

BDA Apartments

Home Front Page ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ನಿಧನ…

ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ನಿಧನ…

ಬೆಂಗಳೂರು, ಜ.6,2020(www.justkannada.in):  ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಟಿ.ಎನ್ ಚತುರ್ವೇದಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಚತುರ್ವೇದಿ ಅವರು 2002ರಿಂದ 2007ರವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.

ಜನವರಿ 18, 1929ರಂದು ಜನಿಸಿದ ಚತುರ್ವೇದಿ ಅವರು 2004ರಲ್ಲಿ ಕೇರಳದ ರಾಜ್ಯಪಾಲರಾಗಿ ಕೂಡಾ ಕಾರ್ಯ ರ್ನಿವಹಿಸಿದ್ದರು. ಭಾರತದ ಮಹಾಲೇಖಪಾಲರಾಗಿ 1984 ರಿಂದ 1989ರವರೆಗೆ ಕಾರ್ಯನಿರ್ವಹಿಸಿದ್ದರು. 1990ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Key words: Karnataka- Former Governor – TN Chaturvedi- dies