Friday, August 14, 2026

BDA Apartments

Home Front Page ಸಿಎಎ ಹೆಸರಲ್ಲಿ ಎನ್ ಆರ್ ಸಿ ದುರುಪಯೋಗ ಎಂಬುದು ಸುಳ್ಳು: ಕಾಂಗ್ರೆಸ್ ನಿಂದ ಈ ಬಗ್ಗೆ...

ಸಿಎಎ ಹೆಸರಲ್ಲಿ ಎನ್ ಆರ್ ಸಿ ದುರುಪಯೋಗ ಎಂಬುದು ಸುಳ್ಳು: ಕಾಂಗ್ರೆಸ್ ನಿಂದ ಈ ಬಗ್ಗೆ ಗೊಂದಲ ಸೃಷ್ಠಿ- ಕೇಂದ್ರ ಸಚಿವ ಸದಾನಂದಗೌಡ ಕಿಡಿ….

ಬೆಂಗಳೂರು,ಜ,5,2020(www.justkannada.in):  ಸಿಎಎ ಹೆಸರಿನಲ್ಲಿ ಎನ್ ಆರ್ ಸಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದು ಸುಳ್ಳು ಕಾಂಗ್ರೆಸ್ ಈ ಬಗ್ಗೆ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಕಿಡಿಕಾರಿದರು.

ನಗರದ ದಾಸರಹಳ್ಳಿಯಲ್ಲಿ ಸಿಎಎ ಪರ ಜಾಗೃತಿ ಅಭಿಯಾನಕ್ಕೆ ಕೇಂದ್ರ ಸಚಿವ ಸದಾನಂದಗೌಡ ಚಾಲನೆ ನೀಡಿದರು. ಮನೆ ಮನೆಯಲ್ಲಿ ಸಿಎಎ ಬಗ್ಗೆ ಅರಿವು ಮೂಡಿಸಲು ಜಾಗೃತಿ ಅಭಿಯಾನಕ್ಕೆ ಚಾಲನೆ ದೊರೆಯಿತು.

ಚಾಲನೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಭಾರತದಲ್ಲಿ ಮುಸ್ಲೀಂ ಸಮುದಾಯಕ್ಕೆ ಸ್ಥಾನಮಾನ ಗೌರವ ನೀಡಲಾಗಿದೆ. ಜಡ್ಜ್ , ರಾಷ್ಟ್ರಪತಿ ಸೇರಿ ಎಲ್ಲಾ ಸ್ಥಾನಮಾನ ನೀಡಲಾಗಿದೆ. ಮುಸ್ಲೀಂರನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಮುಸ್ಲೀಂರ ತಲೆ ಹಾಳುಮಾಡುವವರ ಬಗ್ಗೆ ನಿಗಾವಹಿಸಬೇಕು. ಸಿಎಎ ವಿಚಾರದಲ್ಲಿ ಕಾಂಗ್ರೆಸ್ ಸುಮ್ಮನೆ ಸುಳ್ಳು ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಅಲ್ಪಸಂಖ್ಯಾತರು ಸಿಎಎ ಜಾರಿಯನ್ನ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಗೊಂದಲ ಸೃಷ್ಠಿಸುತ್ತಿದೆ. ಸಿಎಎ ಹೆಸರಲ್ಲಿ ಎನ್ ಆರ್ ಸಿ ದುರುಪಯೋಗ ಎಂಬುದು ಸುಳ್ಳು. ನಾವು ನಮ್ಮ ನಿಲುವು ಹಿಂಪಡೆಯುವುದಿಲ್ಲ. ಜಾರಿ ಮಾಡುತ್ತೇವೆ ಎಂದು ಡಿ.ವಿ ಸದಾನಂದಗೌಡರು ತಿಳಿಸಿದರು.

Key words: NRC -abuse – name -CAA – lie- Union Minister- Sadananda Gowda