Tuesday, August 18, 2026

BDA Apartments

Home Crime ಮೈಸೂರು: ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದ ಯುವಕ ಶವವಾಗಿ ಪತ್ತೆ…

ಮೈಸೂರು: ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದ ಯುವಕ ಶವವಾಗಿ ಪತ್ತೆ…

ಮೈಸೂರು,ಜ,1,2020(www.justkannada.in): ನಿನ್ನೆ ರಾತ್ರಿ ಮನೆಯಿಂದ ಹೊರ ಹೋಗಿದ್ದ ಯುವಕ ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕಡಕೊಳ ಬಳಿ ಯುವಕನ ಶವ ಪತ್ತೆಯಾಗಿದೆ. ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ (22) ಮೃತ ಯುವಕ. ಯುವಕ ಕೃಷ್ಣನ ಶವ ಸ್ಕೂಟರ್‌ ಮೇಲೆ ಬಿದ್ದಿದ್ದು, ಸುಮಾರು ಒಂದು ಕಿಲೋ ಮೀಟರ್ ಸ್ಕೂಟರ್ ಎಳೆದು ತಂದಿರುವ ಗುರುತು ಪತ್ತೆಯಾಗಿದೆ. ಕೃಷ್ಣನ ಮೈ ಮೇಲೆ ಗಾಯದ ಗುರುತುಗಳು ಕಂಡು ಬಂದಿದ್ದು  ಯಾರೋ ಕೊಲೆ ಮಾಡಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಕೃಷ್ಣ ನಿನ್ನೆ ರಾತ್ರಿ ಮನೆಯಿಂದ ಹೊರ ಹೋಗಿ  ವಾಪಸ್ಸು ಬಂದಿರಲಿಲ್ಲ. ಆದರೆ ಇವತ್ತು ಬೆಳಗ್ಗೆ ಕೃಷ್ಣ ಶವವಾಗಿ ಪತ್ತೆಯಾಗಿದ್ದಾನೆ. ನಂಜನಗೂಡು ಗ್ರಾಮಾಂತರ ಪೊಲೀಸರು, ಮೈಸೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: mysore – young man – dead body- found- last night