Thursday, August 13, 2026

BDA Apartments

Home Cinema ಕ್ರೇಜಿಸ್ಟಾರ್ ‘ರವಿ ಬೋಪಣ್ಣ’ ಜತೆಯಾದ ಡಿಂಪಲ್ ಕ್ವೀನ್ ರಚಿತಾ

ಕ್ರೇಜಿಸ್ಟಾರ್ ‘ರವಿ ಬೋಪಣ್ಣ’ ಜತೆಯಾದ ಡಿಂಪಲ್ ಕ್ವೀನ್ ರಚಿತಾ

ಬೆಂಗಳೂರು, ಡಿಸೆಂಬರ್ 31, 2019 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ರವಿ ಬೋಪಣ್ಣ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ, ಶ್ರೀ ಮುರಳಿ ಅಭಿನಯದ ಭರಾಟೆಯಲ್ಲಿ ರಚಿತಾ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅದಾದ ಬಳಿಕ ಇದೀಗ ಮತ್ತೊಂದು ಸಿನಿಮಾಗೆ ಗೆಸ್ಟ್ ಅಪಿಯರೆನ್ಸ್ ಕೊಡಲಿದ್ದಾರೆ.

ಆದರೆ ಅವರ ಪಾತ್ರವೇನೆಂದು ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ರವಿ ಬೋಪಣ್ಣ ಸಿನಿಮಾಗೆ ಕಾವ್ಯಾ ಶೆಟ್ಟಿ ಮತ್ತು ಸಂಚಿತಾ ಪಡುಕೋಣೆ ನಾಯಕಿಯರಾಗಿದ್ದಾರೆ.