Wednesday, July 29, 2026

BDA Apartments

Home Front Page ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಡಿ,27,2019(www.justkannada.in): ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ನನಗೇನು ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ನನಗೇನು ಗೊತ್ತಿಲ್ಲ. ಹೈಕಮಾಂಡ್ ನಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ. ದೆಹಲಿಗೆ ಹೋಗು ಕುರಿತು ಯೋಚನೆ ಮಾಡಿಲ್ಲ. ಜಾರಿ ನಿರ್ದೇಶನಾಲಯ ಮತ್ತೆ ಎರಡು ನೋಟೀಸ್ ಬಂದಿದೆ ಎಂದು ತಿಳಿಸಿದರು.

ಯೇಸುಕ್ರಿಸ್ತ ನಿರ್ಮಾಣಕ್ಕೆ ಶಿಲಾನ್ಯಾಸ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಯೇಸುಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದ ಭೂಮಿ ಕೊಡ್ತಿಲ್ಲ. ನನ್ನ ಸ್ವಂತ ಜಮೀನು ನೀಡಿತ್ತಿದ್ದೇನೆ.  ಏಸು ಪ್ರತಿಮೆ ನಿರ್ಮಾಣ ಎರಡು ವರ್ಷದ ಹಿಂದಿನ ಪ್ಲಾನ್ ಆಗಿತ್ತು. ಈ ಬಗ್ಗೆ ಅಲ್ಲಿನ ಜನರಿಗೆ ಭರವಸೆ ಸಹ ನೀಡಿದ್ದೆ. ಹಿಂದೂ ದೇಗುಲ ನಿರ್ಮಾಣಕ್ಕೂ ನಾನು  ಸಹಾಯ ಮಾಡಿದ್ದೇನೆ. ನನಗೆ ಪ್ರಚಾರದ ಅಗತ್ಯ ಇಲ್ಲ ಎಂದು ತಿಳಿಸಿದರು.

Key words: Former minister -DK Sivakumar – reacted – appointment – KPCC president