Saturday, August 22, 2026

BDA Apartments

Home Cinema ಐಶ್ವರ್ಯ ರೈ ವಿರುದ್ಧ ಅವಹೇಳನಕಾರಿ ಮೀಮ್ಸ್ ಶೇರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟ ವಿವೇಕ್‌ ಓಬೆರಾಯ್‌

ಐಶ್ವರ್ಯ ರೈ ವಿರುದ್ಧ ಅವಹೇಳನಕಾರಿ ಮೀಮ್ಸ್ ಶೇರ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟ ವಿವೇಕ್‌ ಓಬೆರಾಯ್‌

ಬೆಂಗಳೂರು, ಮೇ 21, 2019 (www.justkannada.in): ಮತದಾನೋತ್ತರ ಸಮೀಕ್ಷೆಯನ್ನು ನಟಿ ಐಶ್ವರ್ಯ ರೈ ವೈಯಕ್ತಿಕ ಜೀವನಕ್ಕೆ ಹೋಲಿಕೆ ಮಾಡಿ ಮಾಡಿದ್ದ ಮೀಮ್ಸ್​ ಶೇರ್‌ ಮಾಡಿದ್ದ ನಟ ವಿವೇಕ್‌ ಓಬೆರಾಯ್‌ಗೆ ರಾಷ್ಟ್ರೀಯ ಹಾಗೂ ಮಹಾರಾಷ್ಟ್ರ ಮಹಿಳಾ ಆಯೋಗ ನೋಟಿಸ್​ ನೀಡಿದೆ.

ಹಳೆಯ ಬಾಯ್​ ಫ್ರೆಂಡ್​ ಸಲ್ಮಾನ್​ ಖಾನ್​ನೊಂದಿಗಿರುವ ಐಶ್ವರ್ಯ ರೈ ಚಿತ್ರವನ್ನು ಒಪಿನಿಯನ್​ ಪೋಲ್​ಗೆ, ವಿವೇಕ್​ ಒಬೆರಾಯ್​ನೊಂದಿಗಿನ ಐಶ್ವರ್ಯ ಚಿತ್ರವನ್ನು ಎಕ್ಸಿಟ್​ ಪೋಲ್​ಗೆ ಹಾಗೂ ಅಭಿಷೇಕ್​ ಬಚ್ಚನ್​ನೊಂದಿಗಿನ ಚಿತ್ರವನ್ನು ಫಲಿತಾಂಶ ಎಂದು ಮತದಾನೋತ್ತರ ಸಮೀಕ್ಷೆಯನ್ನು ವ್ಯಂಗ್ಯ ಮಾಡಲಾಗಿರುವ ಮೀಮ್ಸ್​ ಅನ್ನು ತಮ್ಮ ಟ್ವಿಟರ್​ನಲ್ಲಿ ವಿವೇಕ್‌ ಹಂಚಿಕೊಂಡಿದ್ದರು.

ಇನ್ನು ನಟ ವಿವೇಕ್​ ಒಬೆರಾಯ್​ ವಿರುದ್ದ ಬಾಲಿವುಡ್ ನ ಹಲವು ಮಂದಿ ಕಿಡಿಕಾರಿ, ಇದೊಂದು ಅಹಸ್ಯದ ವಿಷಯವಾಗಿದೆ ಅಂತ ಆಕ್ತೋಶ ವ್ಯಕ್ತಪಡಿಸಿದ್ದರು.