Thursday, July 30, 2026

BDA Apartments

Home Front Page ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ಕುಸ್ತಿಪಟು ಗೀತಾ ಫೋಗಾಟ್

ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ಕುಸ್ತಿಪಟು ಗೀತಾ ಫೋಗಾಟ್

ನವದೆಹಲಿ, ಡಿಸೆಂಬರ್ 25, 2019 (www.justkannada.in): ಭಾರತೀಯ ಮಹಿಳಾ ಕುಸ್ತಿಪಟು ಗೀತಾ ಫೋಗಾಟ್ ಗಂಡು ಮಗುವಿಗೆ ತಾಯಿಯಾಗಿದ್ದಾರೆ.

31 ವರ್ಷದ ಗೀತಾ ಫೋಗಾಟ್ ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕುಸ್ತಿ ಪಂದ್ಯಲೋಕದ ಜೋಡಿ ಗೀತಾ ಫೋಗಟ್ ಮತ್ತು ಪವನ್ ಕುಮಾರ್ 2017ರ ಜನವರಿ 29ರಂದು ಹರ್ಯಾಣದಲ್ಲಿ ವಿವಾಹವಾಗಿದ್ದರು.

ಗೀತಾ ಮತ್ತು ಅವರ ಸೋದರಿ ಬಬಿತಾ ಫೋಗಟ್ ಭಾರತದ ಹೆಸರಾಂತ ಕುಸ್ತಿಪಟುಗಳಾಗಿದ್ದು ಇವರ ಜೀವನಾಧಾರಿತ ಚಿತ್ರ 2016ರಲ್ಲಿ ಬಿಡುಗಡೆಯಾಗಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.