Thursday, September 17, 2026

BDA Apartments

ದಿನೇಶ್ ಗುಂಡೂರಾವ್ ಪ್ಲಾಪ್ ಶೋ ಎಂದ ಕೈ ನಾಯಕ ರೋಷನ್ ಬೇಗ್: ಮಾಜಿ ಸಿಎಂ ಸಿದ್ದರ...
Home Front Page ದಿನೇಶ್ ಗುಂಡೂರಾವ್ ಪ್ಲಾಪ್ ಶೋ ಎಂದ ಕೈ ನಾಯಕ ರೋಷನ್ ಬೇಗ್: ಮಾಜಿ ಸಿಎಂ ಸಿದ್ದರಾಮಯ್ಯ...

ದಿನೇಶ್ ಗುಂಡೂರಾವ್ ಪ್ಲಾಪ್ ಶೋ ಎಂದ ಕೈ ನಾಯಕ ರೋಷನ್ ಬೇಗ್: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಆಕ್ರೋಶ

ಬೆಂಗಳೂರು, ಮೇ 21, 2019 (www.justkannada.in): ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಕೈ ಪಕ್ಷದಲ್ಲಿ ಕಿತ್ತಾಟ ಶುರುವಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕರ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.

ಅಲ್ಪ ಸಂಖ್ಯಾತ ಸಮುದಾಯದ ನಾಯಕರಿಗೆ ಟಿಕೆಟ್ ನೀಡದ ಸಂದರ್ಭದಲ್ಲಿಯೇ ಅವರು ಸರಿಯಾಗಿ ರಾಜಕೀಯ ಮಾಡುತ್ತಿಲ್ಲ ಎನಿಸಿತ್ತು. ದಿನೇಶ್ ಗುಂಡೂರಾವ್ ಅವರ ಪ್ಲಾಪ್ ಶೋ ಇದು ಎಂದು ರೋಷನ್ ಬೇಗ್ ಕಿಡಿಕಾರಿದ್ದಾರೆ. ಇದರ ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.