Sunday, August 23, 2026

BDA Apartments

Home Election News and Analysis ಲೋಕಸಭಾ ಫಲಿತಾಂಶ ಹಿನ್ನೆಲೆ: ಇಂದು ಜೆಡಿಎಸ್ ನಾಯಕರ ಸಭೆ…

ಲೋಕಸಭಾ ಫಲಿತಾಂಶ ಹಿನ್ನೆಲೆ: ಇಂದು ಜೆಡಿಎಸ್ ನಾಯಕರ ಸಭೆ…

ಬೆಂಗಳೂರು,ಮೇ,21,2019(www.justkannada.in):  ಮೇ 23ರಂದು ಚುನಾವಣಾ ಫಲಿತಾಂಶ ಹಿನ್ನೆಲೆ ಇಂದು ಜೆಡಿಎಸ್ ನಾಯಕರ ಸಭೆ ಕರೆಯಲಾಗಿದೆ.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಜೆಡಿಎಸ್ ಶಾಸಕರು, ಸಚಿವರು ಹಾಗೂ ಮುಖಂಡರು ಭಾಗಿಯಾಗಲಿದ್ದಾರೆ.

ಸಭೆಯಲ್ಲಿ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶ, ಬಸವರಾಜ ಹೊರಟ್ಟಿ ಅವರ ಹೇಳಿಕೆ ವಿಚಾರ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವಿನ ವಾಕ್ ಸಮರ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

Key words: Lok Sabha result background:  Today is a meeting of JDS leaders.

#politicalnews #jds #meeting