Sunday, August 9, 2026

BDA Apartments

Home Front Page ಸೂರ್ಯಗ್ರಹಣ: 26ರಂದು ಚಾಮುಂಡಿ ಬೆಟ್ಟದಲ್ಲಿ ಡಿ.26ರಂದು ಮಧ್ಯಾಹ್ನದವರೆಗೆ ಚಾಮುಂಡೇಶ್ವರಿ ದರ್ಶನವಿಲ್ಲ

ಸೂರ್ಯಗ್ರಹಣ: 26ರಂದು ಚಾಮುಂಡಿ ಬೆಟ್ಟದಲ್ಲಿ ಡಿ.26ರಂದು ಮಧ್ಯಾಹ್ನದವರೆಗೆ ಚಾಮುಂಡೇಶ್ವರಿ ದರ್ಶನವಿಲ್ಲ

ಮೈಸೂರು, ಡಿಸೆಂಬರ್ 21, 2019 (www.justkannada.in): ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಡಿ.26ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1 ಗಂಟೆವರೆಗೆ ಚಾಮುಂಡಿ ದೇವಿಯ ದರ್ಶನ ಭಕ್ತರಿಗೆ ಲಭ್ಯವಿರುವುದಿಲ್ಲ.

ಸೂರ್ಯಗ್ರಹಣದ ನಿಮಿತ್ತ ಅಂದು ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಸ್ಪರ್ಶಕಾಲ ಹಾಗೂ ಮೋಕ್ಷಕಾಲ ಗ್ರಹಣದ ಶಾಂತಿಗಾಗಿ ನಡೆಯುವ ವಿಶೇಷ ಪೂಜೆ ಇರುವುದರಿಂದ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಬೆಳಗ್ಗೆ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯೂ ಇರುವುದಿಲ್ಲ. ಮಧ್ಯಾಹ್ನ 1ರ ನಂತರ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಮಾಹಿತಿ ನೀಡಲಾಗಿದೆ.