Wednesday, August 19, 2026

BDA Apartments

Home Front Page ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾದ ಬ್ರಿಯಾನ್ ಲಾರಾ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾದ ಬ್ರಿಯಾನ್ ಲಾರಾ

ನವದೆಹಲಿ, ಡಿಸೆಂಬರ್ 17, 2019 (www.justkannada.in): ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಭೇಟಿಯಾಗಿದ್ದಾರೆ.

ಬ್ರಿಯನ್ ಲಾರ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಿರುವ ಕುರಿತು ರಾಷ್ಟ್ರಪತಿಗಳ ಅಧಿಕೃತ ಟ್ವೀಟರ್ ಖಾತೆಯಲ್ಲಿ ತಿಳಿಸಲಾಗಿದೆ.

ಟ್ವೀಟರ್ ನಲ್ಲಿ, ಆಧುನಿಕ ಯುಗದ ಶ್ರೇಷ್ಟ ಬ್ಯಾಟ್ಸ್ ಮೆನ್ ಗಳಲ್ಲಿ ಒಬ್ಬರಾಗಿರುವ ಬ್ರಿಯಾನ್ ಲಾರಾ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿದ್ದಾರೆ. ಲಕ್ಷಾಂತರ ಕ್ರೀಡಾಪಟುಗಳಿಗೆ ಲಾರಾ ಸ್ಪೋರ್ತಿಯಾಗಿದ್ದಾರೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.