Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಕೊನೆ ಅವಧಿಯಲ್ಲಿ ಬಿಎಸ್ವೈಗೆ ಶಕ್ತಿ ತುಂಬಿದ ಹುಟ್ಟೂರಿನ ಜನ: ಹಾಸನ ಶಾಸಕ ಪ್ರೀತಮ್ ಗೌಡ

ಕೊನೆ ಅವಧಿಯಲ್ಲಿ ಬಿಎಸ್ವೈಗೆ ಶಕ್ತಿ ತುಂಬಿದ ಹುಟ್ಟೂರಿನ ಜನ: ಹಾಸನ ಶಾಸಕ ಪ್ರೀತಮ್ ಗೌಡ

ಕೆಆರ್ ಪೇಟೆ (ಮಂಡ್ಯ), ಡಿಸೆಂಬರ್ 12, 2019 (www.justkannada.in):  ಕೆಆರ್ ಪೇಟೆಯ ಈ ಗೆಲುವು ಹುಟ್ಟೂರು ಹಾಗೂ ಜಿಲ್ಲೆಯ ಗೆಲುವು. ಈ ಮೂಲಕ ಜಿಲ್ಲೆಯ ಜನತೆ ಯಡಿಯೂರಪ್ಪನವರಿಗೆ ಶಕ್ತಿ ತುಂಬಿದ್ದಾರೆ ಎಂದು ಹಾಸನ ಶಾಸಕ ಪ್ರೀತಮ್ ಗೌಡ ಬಣ್ಣಿಸಿದ್ದಾರೆ.

ಯಡಿಯೂರಪ್ಪನವರ ರಾಜಕೀಯ ಕೊನೆಯ ಅವಧಿಯಲ್ಲಿ ಅವರ ಹುಟ್ಟೂರು ಗೆಲುವು ಮೂಲಕ ಅವರ ರಾಜಕೀಯ ಆಸೆ ಈಡೇರಿದೆ. ಕೆಆರ್ ಪೇಟೆ ಅಭಿವೃದ್ಧಿ ಮಾಡುವ ಯಡಿಯೂರಪ್ಪ ಅವರ ಕನಸನ್ನು ಇಲ್ಲಿಯ ಮತದಾರರು ನನಸ್ಸು ಮಾಡಿದ್ದಾರೆ. ಕೆಆರ್ ಪೇಟೆಯ ಈ ಗೆಲುವಿನ ಮೂಲಕ ಮೈಸೂರು ಭಾಗದ ಬಿಜೆಪಿಗೆ ಶಕ್ತಿ ಬಂದಂತಾಗಿದೆ ಎಂದು ಅವರು ಹೇಳಿದ್ದಾರೆ.

ಈ ಗೆಲುವು ವಿಜಯೇಂದ್ರ ಅವರ ಪರಿಶ್ರಮ. ಮುಂದಿನ 2023ರ ಚುನಾವಣೆಯಲ್ಲಿ ಮೈಸೂರು ವಿಭಾಗದ 35 ಶಾಸಕರಲ್ಲಿ 5ಜನ ಶಾಸಕರು ಮಾತ್ರ ಬಿಜೆಪಿ ಇಂದು ಗೆದ್ದಿದ್ರು. ಮುಂದಿನ ಚುನಾವಣೆಯಲ್ಲಿ 20 ಶಾಸಕರು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಡಾಕ್ಟರ್ ಅಶ್ವತ್ ನಾರಾಯಣ್ ನೇತೃತ್ವದಲ್ಲಿ ವಿಜಯ ಪಡೆದಿದ್ದೇವೆ. ಎಲ್ಲಾ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯ ನಿರ್ವಹಿಸಿದ್ದರಿಂದ ಈ ಗೆಲುವು ಲಭಿಸಿದೆ. ಎಲ್ಲರೂ ಸೇರಿ ತಂತ್ರವನ್ನು ರೂಪಿಸುತ್ತಿವೆ ಕಾರ್ಯಕರ್ತರು ಅದನ್ನು ಜನರೇಟ್ ಮಾಡುತ್ತಾರೆ ಎಂದು ತಿಳಿಸಿದ್ದಾರೆ.