Friday, August 21, 2026

BDA Apartments

Home Front Page ಕಾಂಗ್ರೆಸ್ ಮುಕ್ತ ಅನ್ನೊದು ಭ್ರಮೆ- ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು….

ಕಾಂಗ್ರೆಸ್ ಮುಕ್ತ ಅನ್ನೊದು ಭ್ರಮೆ- ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು….

ಬೆಳಗಾವಿ,ಡಿ,8,2019(www.justkannada.in): ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮುಗಿದು ಹೋಗುತ್ತೆ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ಮುಕ್ತ ಅನ್ನೊದು ಬಿಜೆಪಿ ನಾಯಕರ ಭ್ರಮೆ ಎಂದು ಟಾಂಗ್ ನೀಡಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ಯಾರಿಂದಲೂ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಅನ್ನೋದು ಭ್ರಮೆ. ಜಗದೀಶ್ ಶೆಟ್ಟರ್. ಈಶ್ವರಪ್ಪ ಭ್ರಮೆಯಲ್ಲಿದ್ದಾರೆ. ನೆರೆ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ತಲುಪಿಲ್ಲ. ಕೇವಲ 10 ಸಾವಿರ  1 ಲಕ್ಷ ಕೊಟ್ಟಿ ಸುಮ್ಮನಾಗಿದ್ದಾರೆ. ಆದರೆ ನೆರೆ ಸಂತ್ರಸ್ತರಿಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಜೆಡಿಎಸ್ ಗೆ ನನ್ನ ಕಂಡರೆ ಭಯ. ಹೀಗಾಗಿ ನನ್ನ ಬಗ್ಗೆ ಹೇಳ್ತಾರ. ಸಮೀಕ್ಷೆಗಳನ್ನ ನಾನು ನಂಬಲ್ಲ. ಅಂದಾಜಿನ ಮೇಲೆ ಸಮೀಕ್ಷೆ ಮಾಡ್ತಾರೆ. ಮಹಾರಾಷ್ಟ್ರ ಮತ್ತು ಪಂಜಾಬ್ ನಲ್ಲಿ ಸಮೀಕ್ಷೆ ಏನಾಯ್ತು. ಹೀಗಾಗಿ ಸಮೀಕ್ಷೆಗಳನ್ನ ನಾನು ನಂಬುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ನುಡಿದರು.

Key words: Congress – Can’t- finish- Former CM -Siddaramaiah -BJP leaders