Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Cinema ಹಸೆಮಣೆ ಏರಿದ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್

ಹಸೆಮಣೆ ಏರಿದ ಹಿತಾ ಚಂದ್ರಶೇಖರ್-ಕಿರಣ್ ಶ್ರೀನಿವಾಸ್

ಬೆಂಗಳೂರು, ಡಿಸೆಂಬರ್ 02, 2019 (www.justkannada.in): ಹಿರಿಯ ನಟ, ನಿರ್ದೇಶಕ ಸಿಹಿ ಕಹಿ ಚಂದ್ರು ಪುತ್ರಿ, ನಟಿ ಹಿತಾ ಚಂದ್ರಶೇಖರ್ ತಮ್ಮ ಬಹುಕಾಲದ ಗೆಳೆಯ ಕಿರಣ್ ಶ್ರೀನಿವಾಸ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿನ್ನೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಹಿತಾ ಹಾಗೂ ನಟ ಕಿರಣ್ ಶ್ರೀನಿವಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವಿವಾಹ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ಎರಡೂ ಕುಟುಂಬ ವರ್ಗದವರು ಭಾಗವಹಿಸಿದ್ದರು.

ನಟಿ ಅನುಪಮಾ ಗೌಡ, ಕೃಷಿ ತಾಪಂಡ ಮುಂತಾದವರೂ ಮದುವೆಗೆ ಆಗಮಿಸಿ ಶುಭ ಹಾರೈಸಿದ್ದಾರೆ.