Monday, October 12, 2026

Dasara Wishes

Happy Dasara
Home Front Page ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆಯಿಲ್ಲ: ನಮ್ಮ 15 ಕುದುರೆಗಳು ಚುನಾವಣೆಯಲ್ಲಿ ಗೆಲ್ಲಲಿವೆ- ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ….

ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆಯಿಲ್ಲ: ನಮ್ಮ 15 ಕುದುರೆಗಳು ಚುನಾವಣೆಯಲ್ಲಿ ಗೆಲ್ಲಲಿವೆ- ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ….

ಬೆಂಗಳೂರು,ನ,29,2019(www.justkannada.in): ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಹಿನ್ನೆಲೆ 15 ಕ್ಷೇತ್ರಗಳಲ್ಲೂ ನಮ್ಮ ಕುದುರೆಗಳು ಗೆಲ್ಲಲಿವೆ ಎಂದು ಸಂಸೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ರಾಮಮೂರ್ತಿ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ರಾಜ್ಯಸಭೆಯಲ್ಲಿ ರಾಜ್ಯಸಭೆ ಸ್ಥಾನ ಹೆಚ್ಚಾಗುತ್ತಿದೆ. ರಾಮಮೂರ್ತಿಗೆ ಯಾವುದೇ ಸವಾಲು ಇಲ್ಲ. ಯಾವುದೇ ಚುನಾವಣೆಯಿಲ್ಲದೆ ಅವರು ಜಯಿಸುತ್ತಾರೆ. ರಾಜ್ಯಸಭೆಯಿಂದ ಬಿಲ್ ಪಾಸ್ ಗೆ ಹಿನ್ನಡೆಯಾಗುತ್ತಿತ್ತು. ಈಗ ನಮ್ಮ ಸದಸ್ಯರು ಹೆಚ್ಚಾಗುವುದರಿಂದ ಲಾಭವಾಗಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನಲ್ಲಿ ಹಿರಿಯನಾಯಕರ ಹೊಂದಾಣಿಕೆ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ,  ಕಾಂಗ್ರೆಸ್ ಪಕ್ಷದಲ್ಲಿ ಹೊಂದಾಣಿಕೆಯಿಲ್ಲ. ಕಾಂಗ್ರೆಸ್ ನವರು ಯುದ್ಧಕ್ಕೆ ಮೊದಲೇ ಶಸ್ತ್ರ ಕೆಳಗಿಟ್ಟಿದ್ದಾರೆ. ಹೀಗಾಗಿ ನಮ್ಮ 15 ಕುದುರೆಗಳು ಚುನಾವಣೆಯಲ್ಲಿ ಗೆಲ್ಲಲಿವೆ ಎಂದು ನುಡಿದರು.

ಆಡಿಯೋ ಬಿಡ್ತೇನೆ ಎಂಬ ಹೆಚ್. ಡಿ ಕುಮಾರಸ್ವಾಮಿ  ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿಯವರ ಸ್ಟೇಟ್ ಮೆಂಟ್ ಗೆ ಹೆದರಲ್ಲ. ಬಿಜೆಪಿ ಗೆಲ್ಲಿಸೋಕೆ ಜನ ತೀರ್ಮಾನಿಸಿದ್ದಾರೆ. ಏಕೋಪಾಧ್ಯಾಯ ಶಾಲೆಯ ಮುಖ್ಯಸ್ಥ ಸಿದ್ದರಾಮಯ್ಯ ಆಗಿದ್ದಾರೆ ಎಂದರು.

ರಾಮಮೂರ್ತಿ ಅವರು ಅಭೂತಪೂರ್ವವಾಗಿ ಗೆಲುವು ಸಾಧಿಸುತ್ತಾರೆ- ನಳೀನ್ ಕುಮಾರ್ ಕಟೀಲ್…

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ರಾಮಮೂರ್ತಿ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ರು. ಈಗ ಬಿಜೆಪಿಯಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಅಭೂತಪೂರ್ವವಾಗಿ ಗೆಲುವು ಸಾಧಿಸುತ್ತಾರೆ ಎಂದು ನುಡಿದರು.

Key words: Bangalore-shobha karandlaje-bjp-president- nalin kumar katil- kc ramamurthi