Friday, August 21, 2026

BDA Apartments

Home Front Page ಜಾರ್ಜ್, ಕೆಂಪಯ್ಯರನ್ನ ಮಂಪರು ಪರೀಕ್ಷೆಗೊಳಪಡಿಸಿದ್ರೆ ಸಿದ್ಧರಾಮಯ್ಯ ಬಳಿಯ ಹುಂಡಿ ಬಗ್ಗೆ ಗೊತ್ತಾಗುತ್ತೆ-ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್…

ಜಾರ್ಜ್, ಕೆಂಪಯ್ಯರನ್ನ ಮಂಪರು ಪರೀಕ್ಷೆಗೊಳಪಡಿಸಿದ್ರೆ ಸಿದ್ಧರಾಮಯ್ಯ ಬಳಿಯ ಹುಂಡಿ ಬಗ್ಗೆ ಗೊತ್ತಾಗುತ್ತೆ-ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್…

ಹಾವೇರಿ,ನ,28,2019(www.justkannada.in): ಸಿದ್ದರಾಮಯ್ಯಗೆ  ಹುಂಡಿ ಇದೆ. ಅದು ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಮಹದೇವಪ್ಪ ಮತ್ತು ಕೆಂಪಯ್ಯ ಅವರ ಬಳಿ ಇದ್ದು, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಎಲ್ಲವೂ ತಿಳಿಯುತ್ತದೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್  ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ಬಿ.ಸಿ ಪಾಟೀಲ್, ಸಿದ್ಧರಾಮಯ್ಯನ ಆಟ ಕಾಂಗ್ರೆಸ್ ಗೂಟ. ಸಿದ್ಧರಾಮಯ್ಯರಿಂದಲೇ ಕಾಂಗ್ರೆಸ್ ನಿರ್ನಾಮವಾಗುತ್ತದೆ. ಸಿದ್ಧರಾಮಯ್ಯರನ್ನ ನಂಬಿಕೊಂಡವರು ಕೆಟ್ಟರು. ಮಾಜಿ ಸಚಿವ ಜಾರ್ಜ್, ಹೆಚ್.ಸಿ ಮಹದೇವಪ್ಪ ಕೆಂಪಯ್ಯರನ್ನು  ಮಂಪರು ಪರೀಕ್ಷೆಗೊಳಪಡಿಸಿದರೇ ಎಲ್ಲವೂ ತಿಳಿಯುತ್ತದೆ ಎಂದು ಗುಡುಗಿದರು.

ಕುರುಬ ನಾಯಕರಾಗಿದ್ದ ಸಿದ್ಧರಾಮಯ್ಯ ನಾಲ್ವರು ಕುರುಬ ಶಾಸಕರನ್ನು ನಾಲಾಯಕ್ ಮಾಡಿದ್ದರು. ಬಾಂಬೆ ನೋಟ್ ಇರಲ್ಲ, ನೋಟ್ ಪ್ರಿಂಟ್ ಮಾಡುವುದು ರಿಸರ್ವ್ ಬ್ಯಾಂಕ್.  ನಾವು ಸಿದ್ದರಾಮಯ್ಯ ಜೊತೆಗೆ ಇದ್ದಾಗ ಹೊಗಳುತ್ತಿದ್ದರು. ಆಗ ನಾನು ಪೊಲೀಸ್ ಇಲಾಖೆಯಲ್ಲಿದ್ದೆ ಎನ್ನುವುದು ಅವರಿಗೆ ಗೊತ್ತಿರಲಿಲ್ಲವೇ? ಎಂದು ಬಿ.ಸಿ ಪಾಟೀಲ್ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ

ಸಿದ್ದರಾಮಯ್ಯನವರೇ ಪೊಲೀಸರನ್ನು ಹಗುರವಾಗಿ ಕಾಣಬೇಡಿ. ಅವರ ಕ್ಷಮೆ ಕೇಳಿ. ಪೊಲೀಸರ ಕ್ಷಮೆ ಕೇಳದಿದ್ದರೆ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಎಲುಬಿಲ್ಲದ ನಾಲಗೆಯಲ್ಲಿ ಏನೇನೋ ಮಾತನಾಡಬೇಡಿ ಎಂದು ಕಿಡಿಕಾರಿದ ಬಿ.ಸಿ ಪಾಟೀಲ್ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.

Key words: BJP candidate -BC Patil-outrage- against- former cm-siddaramaiah