ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ವ್ಯಂಗ್ಯವಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ….

ಬೆಂಗಳೂರು,ನ,28,2019(www.justkannada.in):  ಲೋಕಸಭೆ ಚುನಾವಣೆಯಲ್ಲಿ ಪುತ್ರನ ಸೋಲನ್ನ ನೆನೆದು ನಿನ್ನೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಈ ಬಗ್ಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ವ್ಯಂಗ್ಯವಾಡಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಮಾಡೋದೆ ಎರಡು ಕೆಲಸ ಒಂದು ಕಣ್ಣೀರು ಹಾಕೋದು ಮತ್ತೊಂದು ಭವಿಷ್ಯ ಹೇಳೋದು ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸದಾನಂದಗೌಡರು, ಹೆಚ್.ಡಿ ಕುಮಾರಸ್ವಾಮಿ ಭವಿಷ್ಯ ಹೇಳೋದು ಮತ್ತು ಕಣ್ಣೀರು ಹಾಕೋದು ಬಿಟ್ಟು ಏನು ಮಾಡಲ್ಲ. ಮೊದಲು ಅವರ ತಂದೆ ಕಣ್ಣೀರು ಹಾಕುತ್ತಿದ್ದರು. ಈಗ ಇವರು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಭವಿಷ್ಯ ಹೇಳ್ತಾರೆ.  ಯಾವ ಸೀಮೆ ಭವಿಷ್ಯ ಗೊತ್ತಿಲ್ಲ ಎಂದು ಟೀಕಿಸಿದರು.

ನಿನ್ನೆ ಕೆ.ಆರ್ ಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡುತ್ತ ತಮ್ಮ ಮಗನ ಸೋಲಿನ್ನ ನೆನೆದು ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಮಂಡ್ಯ ಜನರು ನನ್ನ ಕೈ ಬಿಟ್ಟರು. ನಾನೇನು ತಪ್ಪು ಮಾಡಿದ್ದೆ ಎಂದು ಭಾವುಕರಾಗಿದ್ದರು.

Key words: Union Minister -DV Sadananda Gowda – former CM -HD Kumaraswamy’s -tears.