Friday, August 21, 2026

BDA Apartments

Home Cinema ಕಾನ್ಸ್ ಚಿತೋತ್ಸವದಲ್ಲಿ ಲೈಮ್ ಗ್ರೀನ್ ಡ್ರೆಸ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿ ಗಮನ ಸೆಳೆದ...

ಕಾನ್ಸ್ ಚಿತೋತ್ಸವದಲ್ಲಿ ಲೈಮ್ ಗ್ರೀನ್ ಡ್ರೆಸ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿ ಗಮನ ಸೆಳೆದ ದೀಪಿಕಾ

ನವದೆಹಲಿ:ಮೇ-18;(www.justkannada.in) ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 72ನೇ ಕಾನ್ಸ್‌ ಚಿತ್ರೋತ್ಸವ 2019ರಲ್ಲಿ ಬಾಲಿವುಡ್ ತಾರೆಯರು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನಟಿ ದೀಪಿಕಾ ಪಡುಕೋಣೆ ಲೈಮ್ ಗ್ರೀನ್ ಬಣ್ಣದ ವಿಶೇಷವಾದ ಗೌನ್ ತೊಟ್ಟು ಎಲ್ಲರನ್ನು ಚಿತ್ತಾಕರ್ಷಕಗೊಳಿಸಿದರು.

ಲೈಮ್ ಗ್ರೀನ್ ಬಣ್ಣದ ಜಿಯಾಂಬಟ್ಟಿಸ್ಟಾ ವಲ್ಲಿ ಗೌನ್​ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಗಿದ ದೀಪಿಕಾ, ಎಲ್ಲರ ಗಮನ ಸೆಳೆದರು. ಲಿಂಬೆ ಹಸಿರು ಬಣ್ಣದ ಗೌನ್​ ಜತೆ ತಲೆಗೆ ಬೇಬಿ ಪಿಂಕ್​ ಬಣ್ಣದ ಬ್ಯಾಂಡ್​ ಹಾಗೂ ಅದೇ ಬಣ್ಣದ ಕೊರಳು ಪಟ್ಟಿಯನ್ನೂ ಧರಿಸಿ ಕೆಂಪು ಹಾಸಿನ ಮೇಲೆ ನಡೆಯುತ್ತ ಪೇನ್​ ಆ್ಯಂಡ್​ ಗ್ಲೋರಿ ಸ್ಪ್ಯಾನಿಶ್​ ಡ್ರಾಮಾ ಪ್ರದರ್ಶನಕ್ಕೆ ಕೂಡ ಭೇಟಿ ಕೊಟ್ಟರು.

ಕಾನ್ಸ್​ ಚಲನಚಿತ್ರೋತ್ಸವದ ಎರಡನೇ ದಿನದ ತಮ್ಮ ಹಲವು ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಈ ಎಲ್ಲಾ ಫೋಟೋಗಳಿಗೂ ಪತಿ ರಣವೀರ್​ ಸಿಂಗ್ ವಾವ್ ಎಂದು​ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೀಪಿಕಾ ಅವರ ವಿಭಿನ್ನ ಉಡುಪು, ಆಕರ್ಷಕ ಸೌಂದರ್ಯಕ್ಕೆ ರಣವೀರ್ ಫುಲ್ ಫಿದಾ ಆಗಿದ್ದಾರೆ.

ಕಾನ್ಸ್ ಚಿತೋತ್ಸವದಲ್ಲಿ ಲೈಮ್ ಗ್ರೀನ್ ಡ್ರೆಸ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿ ಗಮನ ಸೆಳೆದ ದೀಪಿಕಾ

Deepika Padukone wows Cannes in a lime green dress, Ranveer Singh calls her ‘nuts and un freaking real’

Actor Deepika Padukone walked the red carpet again at the 72nd Cannes Film Festival. She stunned in a ruffled lime green gown paired with a pink headband and bow.