Friday, November 13, 2026

Dasara Wishes

ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ? DasraWishes_JK DasraWishes JK
Happy Dasara
Home Front Page ಡಾ. ಪ್ರಸನ್ನ ಸಂತೇಕಡೂರು ಅವರ ‘ಸು’ಕಾದಂಬರಿ ಇಟಲಿ ಭಾಷೆಗೆ

ಡಾ. ಪ್ರಸನ್ನ ಸಂತೇಕಡೂರು ಅವರ ‘ಸು’ಕಾದಂಬರಿ ಇಟಲಿ ಭಾಷೆಗೆ

ಡಾ. ಪ್ರಸನ್ನ ಸಂತೇಕಡೂರು ಅವರ ‘ಸು’ಕಾದಂಬರಿ ಇಟಲಿ ಭಾಷೆಗೆ

ಮೈಸೂರು,ನವೆಂಬರ್,13,2026 (www.justkannada.in):  ಹಿರಿಯ ವಿಜ್ಞಾನಿ, ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಪ್ರಸನ್ನ ಸಂತೇಕಡೂರು ಅವರ ಪ್ರಸಿದ್ಧ ಕನ್ನಡ ಕಾದಂಬರಿ ‘ಸು’ ಇದೀಗ ಇಟಲಿ ಭಾಷೆಗೆ ಅನುವಾದಗೊಂಡಿದೆ. ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಪ್ರಸನ್ನ ಅವರ ಕೃತಿ ಈಗಾಗಲೇ ಮಲಯಾಳಂ, ತೆಲುಗು ಮತ್ತು ಮರಾಠಿ ಭಾಷೆಗಳಿಗೂ ಅನುವಾದಗೊಂಡಿದೆ.

ವಿಜ್ಞಾನ ಮತ್ತು ಸಾಹಿತ್ಯದ ಅಪರೂಪದ ಸಮ್ಮಿಶ್ರಣವಾಗಿರುವ ‘ಸು’ ಕಾದಂಬರಿ ಕ್ಯಾನ್ಸರ್, ಮಾನವ ದೇಹ-ಮನಸ್ಸು, ಅಸ್ತಿತ್ವ, ವಿಜ್ಞಾನ, ಆಧ್ಯಾತ್ಮ ಹಾಗೂ ಜಾಗತಿಕ ರಾಜಕಾರಣ ಸೇರಿದಂತೆ ಹಲವು ವಿಚಾರಗಳನ್ನು ಒಳಗೊಂಡಿದೆ. ಕಾದಂಬರಿಯ ಕಥಾನಾಯಕ ಚೀನಾದ ಕ್ಯಾನ್ಸರ್ ಸಂಶೋಧನಾ ವಿಜ್ಞಾನಿ ಝವ್ ಜೋಂಗ್ ಸು ಅವರ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಡಲಾಗಿದೆ.ಡಾ. ಪ್ರಸನ್ನ ಸಂತೇಕಡೂರು ಅವರ ‘ಸು’ಕಾದಂಬರಿ ಇಟಲಿ ಭಾಷೆಗೆ

ಮೈಸೂರಿನವರೇ ಆದ, ಇಟಲಿಯ ಪಿಸಾದಲ್ಲಿ ನೆಲೆಸಿರುವ ಹಿರಿಯ ಲೇಖಕಿ ಹಾಗೂ ಅನುವಾದಕಿ ಡಾ. ಜಯಾ ಮೂರ್ತಿ ಅವರು ‘ಸು’ ಕಾದಂಬರಿಯನ್ನು ಇಟಲಿ ಭಾಷೆಗೆ ಅನುವಾದಿಸಿದ್ದಾರೆ. ಅವರು ಈ ಹಿಂದೆ ತ್ರಿವೇಣಿ ಅವರ ಶರಪಂಜರ, ಸುಧಾಮೂರ್ತಿ ಅವರ ಡಾಲರ್ ಸೊಸೆ ಸೇರಿದಂತೆ ಹಲವು ಕನ್ನಡ ಕೃತಿಗಳನ್ನು ಇಟಲಿಗೆ ಅನುವಾದಿಸಿದ್ದಾರೆ.ಡಾ. ಪ್ರಸನ್ನ ಸಂತೇಕಡೂರು ಅವರ ‘ಸು’ಕಾದಂಬರಿ ಇಟಲಿ ಭಾಷೆಗೆ

2020ರಲ್ಲಿ ಪ್ರಕಟಗೊಂಡಿದ್ದ ‘ಸು’ ಕಾದಂಬರಿಯ ಎರಡನೇ ಮುದ್ರಣವೂ ಇದೀಗ ಹೊರಬಂದಿದೆ. ಕ್ಯಾನ್ಸರ್ ಸಂಶೋಧನೆಯಲ್ಲಿ ಹಲವು ರಾಷ್ಟ್ರೀಯ-ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಡಾ. ಪ್ರಸನ್ನ ಸಂತೇಕಡೂರು ಅವರಿಗೆ ಡಾ. ಸಿ.ವಿ. ರಾಮನ್ ಯುವ ವಿಜ್ಞಾನಿ ರಾಜ್ಯ ಪ್ರಶಸ್ತಿ, ರಾಮಲಿಂಗಸ್ವಾಮಿ ಫೆಲೋಶಿಪ್ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಅವರ ‘ಸು’ ಕಾದಂಬರಿಗೆ 2021ರ ಅವ್ವ ಪುರಸ್ಕಾರವೂ ದೊರೆತಿದೆ.novel jk02_new jk02 new

 

English Summary
Title

Kannada Novel ‘Su’ by Mysuru Scientist Dr. Prasanna Santhekadur Translated into Italian

Short Description
Mysuru-based cancer researcher and author Dr. Prasanna K. Santhekadur’s acclaimed Kannada novel ‘Su’ has been translated into Italian by Pisa-based writer Dr. Jaya Murthy. Originally published in 2020, this moving biographical novel chronicles the real-life journey of Chinese-American scientist Dr. Zao-Zhong Su. After losing his wife and fiancée to cancer, he dedicated his life to finding a cure before succumbing to liver cancer himself. Blending science, realism, and philosophy, ‘Su’ has already been translated into Malayalam, Telugu, and Marathi. This new Italian edition brings an inspiring story of grief, resilience, and scientific devotion to global readers.
Keywords
Dr. Prasanna Santekaduru’s, novel, ‘Su’, translated, Italian