Tuesday, November 10, 2026

Dasara Wishes

Happy Dasara
Home Front Page ತಾಕತ್ತಿದ್ರೆ ಉಡಾನ್ ಯೋಜನೆ ಅವಧಿಯನ್ನ ವಿಸ್ತರಿಸಿ-ಸಂಸದ ಬಿವೈ ರಾಘವೇಂದ್ರಗೆ ಸಚಿವ ಎಂ.ಬಿ ಪಾಟೀಲ್ ಸವಾಲು

ತಾಕತ್ತಿದ್ರೆ ಉಡಾನ್ ಯೋಜನೆ ಅವಧಿಯನ್ನ ವಿಸ್ತರಿಸಿ-ಸಂಸದ ಬಿವೈ ರಾಘವೇಂದ್ರಗೆ ಸಚಿವ ಎಂ.ಬಿ ಪಾಟೀಲ್ ಸವಾಲು

ಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ನವೆಂಬರ್,10,2026 (www.justkannada.in): 5 ವರ್ಷ ಉಡಾನ್ ಸ್ಕೀಂ ಅವಧಿ ವಿಸ್ತರಿಸಿ ಅಂತಾ ಹೇಳಿದ್ದವು. ಅದರೆ ಅವಧಿ ವಿಸ್ತರಣೆ ಮಾಡಲಿಲ್ಲ. ನಿಮಗೆ ತಾಕತ್ತಿದ್ದರೇ ಉಡಾನ್ ಯೋಜನೆ ಅವಧಿಯನ್ನ ವಿಸ್ತರಿಸಿ ಎಂದು ಸಂಸದ ಬಿವೈ ರಾಘವೆಂದ್ರರಿಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸವಾಲು ಹಾಕಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಾರಾಟ ಸ್ಥಗಿತ ವಿಚಾರ ಕುರಿತು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಮಿಸ್ಟರ್ ಬಿವೈ ರಾಘವೇಂದ್ರ ಉಡಾನ್ ಸ್ಕೀಂ ಯಾರದ್ದು?  ಮೂರು ವರ್ಷದಲ್ಲಿ 17 ಏರ್ ಪೋರ್ಟ್ ಬಂದ್ ಆಗಿವೆ. ಯಾಕೆ ಬಂದ್ ಆಗಿವೆ ಎಂದು ಬಿವೈ ರಾಘವೇಂದ್ರರನ್ನೇ ಕೇಳಿ.  5 ವರ್ಷ ಉಡಾನ್ ಸ್ಕೀಂ ಅವಧಿ ವಿಸ್ತರಿಸಿ ಅಂತಾ ಹೇಳಿದ್ದವು. ಅದರೆ ಅವಧಿ ವಿಸ್ತರಣೆ ಮಾಡಲಿಲ್ಲ  ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಖಾಸಗಿಯವರಿಗೆ ಕೊಡುತ್ತಿದ್ದಾರೆ. ಉಡಾನ್ ಸ್ಕೀಂ ತಂದಿರುವುದು ನಿಮ್ಮ ಕೇಂದ್ರ ಸರ್ಕಾರ ಅಲ್ವೇ?  ನಿಮಗೆ ತಾಕತ್ತಿದ್ದರೇ ಉಡಾನ್ ಯೋಜನೆ ಅವಧಿಯನ್ನ ವಿಸ್ತರಿಸಿ ಎಂದು ಸವಾಲೆಸೆದರು.ಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ- ಸಚಿವ ಎಂ.ಬಿ ಪಾಟೀಲ್

ಇದಕ್ಕಾಗಿಯೇ ನಮ್ಮದೇ ವಿಮಾನಯಾನ ಪಾಲಿಸಿ ತರುತ್ತಿದ್ದೇವೆ.  ಈ ರೀತಿಯ ಸಮಸ್ಯೆ ಪರಿಹಾರಕ್ಕಾಗಿ ಸ್ಟೇಟ್ ಪಾಲಿಸಿ ತರುತ್ತಿದ್ದೇವೆ.  ಮುಂದಿನ ಸಂಪುಟ ಸಭೆಯಲ್ಲಿ ಸಿವಿಲಿಷೇಯನ್ ಮಾಡಿಸುತ್ತೇವೆ . ಕಲಬುರಗಿ ಏರ್ ಪೋರ್ಟ್ ಗೆ 80% ಕೆಕೆಆರ್ ಡಿಬಿ ನಾವು 20% ಕೊಡುತ್ತೀವಿ ಎಂದರು.Extend jk02_new jk02 new

 

English Summary
Title

"If you have the guts, extend the duration of the UDAN scheme" – Minister M.B. Patil challenges MP B.Y. Raghavendra.

Short Description
"We had requested an extension of the UDAN scheme's duration to five years, but it was not extended. If you have the mettle, get the duration of the UDAN scheme extended," challenged Industries Minister M.B. Patil to MP B.Y. Raghavendra. Addressing the issue of the suspension of flights at the Shivamogga Airport, Minister M.B. Patil asked, "Mr. B.Y. Raghavendra, whose scheme is this UDAN scheme? Seventeen airports have shut down in the last three years. Ask B.Y. Raghavendra himself why they closed. We had requested that the UDAN scheme's duration be extended to five years, but it was not extended. Furthermore, the Hubballi Airport is being handed over to private entities. Isn't it your central government that introduced the UDAN scheme? If you have the mettle, get the duration of the UDAN scheme extended," he challenged.
Keywords
Extend, period, Udan Yojana, Minister, MB Patil, challenges, MP, BY Raghavendra