ಬೆಂಗಳೂರು,ನವೆಂಬರ್,9,2026 (www.justkannada.in): ಪೆಟ್ರೋಲ್ ಗೆ ಶೇ 30 ರಷ್ಟು ಎಥೆನಾಲ್ ಮಿಕ್ಸ್ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ರಿಪೋರ್ಟ್ ಸರಿಯಿದೆ. ಎಥೆನಾಲ್ ಬಗ್ಗೆ ಕೇಂದ್ರ ಸರ್ಕಾರ ನೇರ ಉತ್ತರ ಕೊಟ್ಟಿಲ್ಲ ಎಂದು ಆಹಾರ ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷಾದ್, ತೈಲಕಂಪನಿಗಳ ಮೂಲಕ ಮಾತ್ರ ಉತ್ತರ ಕೊಡಸಿದ್ದಾರೆ. ಎಥನಾಲ್ ಬಗ್ಗೆ ಕೇಂದ್ರ ಸರ್ಕಾರ ನೇರ ಉತ್ತರ ಕೊಟ್ಟಿಲ್ಲ. ನಮ್ಮ ರಿಪೋರ್ಟ್ ಸರಿ. ನಾವು ಜನರ ಪರವಾಗಿ ಧ್ವನಿ ಎತ್ತಿದ್ದೇವೆ. ಚುನಾಯಿತ ಸರ್ಕಾರ ಕೇಳಿದ ಪ್ರಶ್ನೆಗೆ ಕೇಂದ್ರವೇ ನೇರ ಉತ್ತರ ಕೊಡಬೇಕಿತ್ತು. ಶೇ.30ರಷ್ಟು ಎಥೆನಾಲ್ ಮಿಕ್ಸ್ ಮಾಡಿದ್ರೆ ಸಮಸ್ಯೆ ಆಗುತ್ತದೆ. ಎಥೆನಾಲ್ ಮಿಕ್ಸ್ ನಿಂದ ಸಮಸ್ಯೆ ಎಂದು ಬಿಎಂಡಬ್ಲ್ಯು ಹೇಳಿದೆ ಎಂದರು.
ನಿಮ್ಮ ಸ್ಯಾಂಪಲ್ಸ್ ಸರಿಯಿಲ್ಲ ಎಂದು ತೈಲ ಮಾರಾಟ ಕಂಪನಿ ಹೇಳಿದೆ. ನಮ್ಮ ಸ್ಯಾಂಪಲ್ ಸರಿ ಇದೆ. ಎಥೆನಾಲ್ ಮಿಶ್ರಣ ಆಟೋ ಮ್ಯಾಟಿಕ್ ಎಂದು ಹೇಳುತ್ತಾರೆ. ನಾವು ನಮ್ಮ ವರದಿ ಬಗ್ಗೆ ಗಟ್ಟಿಯಾಗಿ ನಿಂತಿದ್ದೇವೆ. ವರದಿ ಸರಿ ಇದೆ. ತೈಲ ಕಂಪನಿಗಳು ತಾಂತ್ರಿಕ ಉತ್ತರಿಸಿದ್ದಾರೆ. ನೇರ ಉತ್ತರ ಕೊಟ್ಟಿಲ್ಲ. 6 ಕಡೆ ಕಂಪನಿಗಳೇ ಹೆಚ್ಚುವರಿ ಎಥೆನಾಲ್ ಮಿಶ್ರಣ ಮಾಡುತ್ತಿವೆ ಎಂದು ಸಚಿವ ರಿಜ್ವಾನ್ ಅರ್ಷಾದ್ ತಿಳಿಸಿದರು.










