Thursday, November 5, 2026

Dasara Wishes

Happy Dasara
Home Front Page ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

ಬೆಂಗಳೂರು, ನವೆಂಬರ್,4,2026 (www.justkannada.in): ‘ನಮ್ಮ ಸರ್ಕಾರ ಸಿಎಸ್ ಆರ್ ಹೊಸ ನೀತಿ ಜಾರಿ ಮಾಡಿದೆ. ನಾಡಿನ ಎಲ್ಲಾ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಅಥವಾ ಅವುಗಳ ಅಭಿವೃದ್ಧಿಗೆ ಕೈ ಜೋಡಿಸಬೇಕು’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕರೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ‌ಬುಧವಾರ ನಡೆದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕಾ ಪ್ರತಿನಿಧಿಗಳ ಸಭೆಯಲ್ಲಿ ‘ನಮ್ಮ ಶಾಲೆ ನಮ್ಮ‌ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.

1 ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಜೊತೆ ಜೋಡಿಸುವ ಗುರಿ

‘ನಮ್ಮ ಗ್ರಾಮೀಣ ಪ್ರದೇಶದ ಶಾಲೆಯ ಮಕ್ಕಳನ್ನು ನಿಮ್ಮ ಶಾಲೆಯ ಮಕ್ಕಳ ಜೊತೆಗೆ ಸೇರಿಸಿಕೊಂಡು ಗುಣಮಟ್ಟದ ಶಿಕ್ಷಣ ನೀಡಿ ಬದುಕಲ್ಲಿ ಅವರು ಮೇಲೆ ಬರುವುದಕ್ಕೆ ನೆರವಾಗಬೇಕು.  ಒಟ್ಟು 2 ಸಾವಿರ ಸರ್ಕಾರಿ ಶಾಲೆಗಳನ್ನು ಈ ರೀತಿ ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. 6 ಸಾವಿರ ಪಂಚಾಯಿತಿಗಳಲ್ಲಿ  ಮೂರು ವಿಭಾಗ ಮಾಡಿದ್ದೇವೆ. ಆರಂಭದಲ್ಲಿ 1 ಸಾವಿರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳ ಜೋಡಿಸುವ ಗುರಿ ಹೊಂದಿದ್ದೇವೆ. ಇದು ಕೇವಲ ಆರಂಭ 4-5 ವರ್ಷದ ಹೊತ್ತಿಗೆ ನಮ್ಮ ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿದೆ’ ಎಂದರು.

‘ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಯಾವ ಶಾಲೆಗಳನ್ನು ಪಡೆಯಬೇಕು ಎನ್ನುವ ಆಯ್ಕೆ ಸರ್ಕಾರ ಮಾಡುವುದಿಲ್ಲ. ನಿಮ್ಮಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡಿ. 5-10 ಕೋಟಿ ರೂ. ಕೊಟ್ಟು ಕಟ್ಟಡಗಳನ್ನು ಕಟ್ಟಿಕೊಡಲು ಆಗದೇ ಇದ್ದರೆ ಪರವಾಗಿಲ್ಲ, ನಿಮ್ಮ ನೈಪುಣ್ಯ ಇರುವ ಶಿಕ್ಷಕರನ್ನು ಸರ್ಕಾರಿ ಶಾಲೆಗೆ ಕಳುಹಿಸಿಕೊಡಿ. ನಿಮ್ಮಶಾಲೆಯಿಂದ 10 ಜನ ಶಿಕ್ಷಕರನ್ನು ಕೊಡಿ. ಅವರಿಗೆ ಸಂಬಳ ನೀವು ಕೊಡಿ. ಖಾಸಗಿ ಶಾಲೆಯ ಬಸ್ಸನ್ನು ಮಾರಲು ಹೋಗಬೇಡಿ. ಸರ್ಕಾರಿ ಶಾಲೆಗೆ ಕೊಡಿ. ಲ್ಯಾಬ್ ವಸ್ತುಗಳು, ಕಂಪ್ಯೂಟರ್ ಗಳನ್ನು ಕೊಟ್ಟರೆ, ಅನುಕೂಲ ಆಗುತ್ತದೆ. ಇದೊಂದು ರೀತಿ ಜ್ಞಾನ ವಿನಿಮಯ’ ಎಂದು ಹೇಳಿದರು.

ಸರ್ಕಾರಿ ಶಾಲೆ ಮೊದಲ ಆದ್ಯತೆಯಾಗಲಿ

‘ರಾಜ್ಯದಲ್ಲಿ ವಾರ್ಷಿಕ ಒಟ್ಟು 8,800 ಕೋಟಿ ಸಿಎಸ್ ಆರ್ ನಿಧಿ ಇದೆ. ರಾಜ್ಯದ ಎಲ್ಲಾ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿ, ಸಿಎಸ್ ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ವಿನಿಯೋಗವೇ ಮೊದಲ ಆದ್ಯತೆ ಆಗಬೇಕು ಎಂದು ಮನವಿ ಮಾಡಿದ್ದೇನೆ.  ಅವರು ಈಗಾಗಲೇ ಕೆಲಸ ಆರಂಭಗೊಳಿಸಿದ್ದಾರೆ. ಈಗ ನಿಮ್ಮ ಸರದಿ ಎಂದು ಆಗಮಿಸಿದ್ದ ಖಾಸಗಿ ಆಡಳಿ ಮಂಡಳಿಯವರಿಗೆ’ ವಿವರಿಸಿದರು.

‘ಈ ಸಿಎಸ್ ಆರ್ ವಿಚಾರವಾಗಿ ನಾನು ಸರ್ಕಾರ ಮುಖ್ಯಕಾರ್ಯದರ್ಶಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದೇವೆ. ಕೆಲವರು ಮುಂಬಯಿಯಲ್ಲಿ  ಕಚೇರಿ ತೆರೆದು, ಇಲ್ಲಿ ಕಂಪನಿಯ ನೋಂದಣಿ ಮಾಡಿಸಿ, ಇಲ್ಲಿ ಗಳಿಸಿದ ಹಣವನ್ನು ಅಲ್ಲಿ ವಿನಿಯೋಗ ಮಾಡುತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಿ, ಹಾಗೇ ಶೇ.50ರಷ್ಟು ಹಣ ವಾಪಸ್ಸು ತೆದುಕೊಳ್ಳುತ್ತಾರೆ. ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದೇನೆ’ ಎಂದರು.

ನಿಮ್ಮ ಹೆಸರನ್ನು ಹಾಕಿಕೊಳ್ಳಬಹುದು

‘ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳಲ್ಲಿ ಕಂಪೆನಿಗಳ ಸಿಎಸ್ ಆರ್ ನಿಧಿ ಬಳಸಿ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಅದರಲ್ಲಿ ಶೇ. 10 ಶಾಲೆಗಳ ಕಾರ್ಯ ಪೂರ್ಣಗೊಂಡಿದೆ. 8 ಶಾಲೆಗಳಲ್ಲಿ ಕೆಲಸ ನಡೆಯುತ್ತಿದೆ. 12 ಶಾಲೆಗಳೊಂದಿಗೆ ಒಪ್ಪಂದ ಮುಗಿದಿದೆ.  ಟೊಯೆಟೋ ಕಂಪನಿ ರಾಮನಗರದ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣಕ್ಕೆ ನೆರವಾಗಿದೆ.  ಒಂದೊಂದು ಶಾಲೆಗೆ 10ರಿಂದ 15 ಕೋಟಿ ಹೂಡಿಕೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದಲೇ ಪ್ಲಾನ್ ಕೊಟ್ಟಿದ್ದೇವೆ. ಆದರೆ,ಯಾವುದೇ ಕಾರಣಕ್ಕೆ ಸಿಎಸ್ ಆರ್ ಹಣವನ್ನು ಸರ್ಕಾರ ಪಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದರೆ ತಮ್ಮ ಶಾಲೆಯ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದು.  ತಮಿಳುನಾಡಿನ ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ, ಹೆಗ್ಗನೂರು ಸರ್ಕಾರಿ ಟೊಯೊಟೋ ಶಾಲೆ ಅಂತ ಹೆಸರಿಡುವುದಕ್ಕೆ ಅವಕಾಶ ಕೊಟ್ಟಿದ್ದೇವೆ’ ಎಂದು ವಿವರಿಸಿದರು.

ನಮ್ಮ ನೆರವನ್ನು ನೀವು ಮರೆಯದಿರಿ

‘ಸರ್ಕಾರವು ಖಾಸಗಿ ಶಾಲೆಗಳ ವಿಚಾರವಾಗಿ ಮೃದು ಧೋರಣೆ ಹೊಂದಿದೆ. ಎಲ್ಲವೂ ನಿಮ್ಮಆರ್ಥಿಕತೆಯನ್ನು ಉತ್ತಮಪಡಿಸುತ್ತಿದೆ. ಖಾಸಗಿ ಶಾಲೆಗಳನ್ನು ನಿರ್ಮಾಣ ಮಾಡುವುದು ಸುಲಭವಲ್ಲ. ಆ ಕಷ್ಟ ನನಗೆ ತಿಳಿದಿದೆ. ಖಾಸಗಿ ಶಾಲೆಗಳು 50 ಸಾವಿರದಿಂದ 2 ಲಕ್ಷದ ತನಕ ಫೀಸು ಪಡೆಯುತ್ತಿರುವುದರ ಬಗ್ಗೆ ನನಗೆ ಮಾಹಿತಿ ಇದೆ. ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಆರ್ಥಿಕವಾಗಿ ಸದೃಢವಾಗಿವೆ ಎನ್ನುವ ವಿಚಾರ ನನ್ನ ಗಮನದಲ್ಲಿದೆ’ ಎಂದರು. Private schools dk shivakumar-dks dk shivakumar dks

‘ಖಾಸಗಿ ಶಾಲೆಗಳು ಈ ರಾಜ್ಯಕ್ಕೆ ಕೀರ್ತಿ ತಂದಿದೆ. ಅಲ್ಲಿನ ಗುಣಮಟ್ಟದ ಶಿಕ್ಷಣ, ಸಾಮರ್ಥ್ಯ ಬಹಳ ಚೆನ್ನಾಗಿದೆ. ಅದರ ಸ್ವಲ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬಹುದು. ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದು, ಅದರ ಪುರೋಭಿವೃದ್ಧಿಗೆ ಕೈ ಜೋಡಿಸುವುದು ನಿಮ್ಮೆಲ್ಲರ ಕರ್ತವ್ಯ. ನೀವು ಕೂಡ ಹಳ್ಳಿಯಿಂದ ಬಂದವರು. ನಿಮ್ಮ ಹಳ್ಳಿಯ ಶಾಲೆಗೆ ಏನಾದರು ಕೊಡುಗೆ ಕೊಡಬೇಕಲ್ಲವೇ’ ಎಂದು ಹೇಳಿದರು.

ಕೆಪಿಎಸ್ ಶಾಲಾ ಅಭಿವೃದ್ಧಿಗೆ ಪಣ

‘ವಿಶ್ವಬ್ಯಾಂಕ್ ನಿಂದ 2 ಸಾವಿರ ಕೋಟಿ ಸಾಲ ಮಾಡಿ ಕೆಪಿಎಸ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲೆಯ ಶಿಕ್ಷಕರಿಗೆ 70ಸಾವಿರದಿಂದ 1.5 ಲಕ್ಷ ಸಂಬಳ ಕೊಡುತ್ತಿದೆ. ಆದರೆ ಗಣಮಟ್ಟ ಇನ್ನೂ ಸುಧಾರಿಸಬೇಕಿದೆ. ಈಗ ಆಯ್ಕೆ ಮಾಡುವ ಸಂದರ್ಭದಲ್ಲೇ ಶಿಕ್ಷಕರ ಗುಣಮಟ್ಟ ಹೆಚ್ಚು ಒತ್ತು ಕೊಟ್ಟಿದ್ದೇವೆ.  ಒಂದು ಸತ್ಯ ಏನಂದರೆ, ಶಾಲಾ ಸಂಸ್ಥೆಗಳಲ್ಲಿ ನಾವು ನೀವೆಲ್ಲರೂ ಟ್ರಸ್ಟಿಗಳು ಮಾತ್ರ. ಇವತ್ತು ನಾವು ಇರುತ್ತೇವೆ, ನಾಳೆ ಇನ್ನೊಬ್ಬರು ಬರುತ್ತಾರೆ. ನಾವು ಮಾಡುವ ಕೆಲಸ ಮಾತ್ರ ಶಾಶ್ವತವಾಗಿರುತ್ತದೆ. ಹಾಗಾಗಿ, ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಯೊಂದಿಗೆ ಪಾಲುದಾರರಾಗಬೇಕು. ಇದೊಂದು ಒಳ್ಳೆಯ ಕಾರ್ಯ’ ಎಂದರು.ಈ ನೆಲದಲ್ಲಿರುವವರು ಈ ಭೂಮಿಗೆ ಗೌರವ ನೀಡಬೇಕು: ಸಿಎಂ ಡಿ.ಕೆ ಶಿವಕುಮಾರ್

‘ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು ಒಳ್ಳೆ ಮಕ್ಕಳನ್ನು ರೂಪಿಸಿ ರಾಜ್ಯಕ್ಕೆ ಆಸ್ತಿ ಮಾಡುತ್ತಿವೆ.  ನಿಮ್ಮ ಸ್ಕೂಲ್ ಗುಣಮಟ್ಟಕ್ಕೆ ನಮ್ಮ ಸರ್ಕಾರಿ ಶಾಲೆಗಳನ್ನು ತೆಗೆದುಕೊಂಡು ಹೋಗಬೇಕು. ಇದು ನಿಮ್ಮ ಪ್ರಾಥಮಿಕ ಕರ್ತವ್ಯ. ಒಂದು ಖಾಸಗಿ ಶಾಲೆಯು 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಅವಕಾಶವಿದೆ. ನಮ್ಮ ಸರ್ಕಾರ ಜಾಗತಿಕ ಹೂಡಿಕೆಗಾಗಿ ಪ್ರತ್ಯೇಕ ಇಲಾಖೆ ಆರಂಭಿಸಿದೆ. ಆಗಾಗಲೇ, ವಿದೇಶದಲ್ಲಿರುವವರು ತಮ್ಮ ಹಳ್ಳಿಗಳಲ್ಲಿರುವ ಶಾಲೆಗಳ ಅಭಿವೃದ್ಧಿ ಮಾಡಲು ಮುಂದೆ ಬಂದಿದ್ದಾರೆ’ ಎಂದು ಹೇಳಿದರು.

ಬೆಂಗಳೂರಿನ ಮೇಲೆ ಒತ್ತಡ

‘ಬೆಂಗಳೂರಲ್ಲಿ ರಸ್ತೆ ವಿಸ್ತರಣೆ ಶೇ.8ರಷ್ಟು, ಮೈಸೂರಲ್ಲಿ 18-20ರಷ್ಟಿದೆ. ಬೆಂಗಳೂರಿನಲ್ಲಿ 1.40ಕೋಟಿ ಜನಸಂಖ್ಯೆಗೆ, 1,20ಲಕ್ಷ ವಾಹನಗಳಿವೆ. ಮಕ್ಕಳು ಶಾಲೆಗೆ ತಲುಪುವುದಕ್ಕೆ 1ಗಂಟೆ ಬೇಕು. ಬೆಂಗಳೂರ ದಟ್ಟಣೆಗೆ ಕಾರಣ ಉದ್ಯೋಗ ಮತ್ತು ಶಿಕ್ಷಣ. ಪ್ರತಿ ತಂದೆ ತನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಏನು ಬೇಕಾದರು ತ್ಯಾಗ ಮಾಡಲು ಸಿದ್ದನಾಗುತ್ತಾನೆ. ಆ ಮಕ್ಕಳಿಗೆ ಆ ಹಳ್ಳಿಯಲ್ಲೇ ಶಿಕ್ಷಣ ದೊರೆತರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ’ ಎಂದರು.

ಶಿಕ್ಷಕ ಸಮಾಜದ ಸ್ತಂಭ

‘ಪ್ರಜಾಪ್ರಭುತ್ವದಲ್ಲಿ ನಾಲ್ಕು ಸ್ತಂಭಗಳಿವೆ. ಹಾಗೆಯೇ, ಸಮಾಜದ ನಾಲ್ಕು ಸ್ತಂಭಗಳು, ಕೃಷಿಕ, ಕಾರ್ಮಿಕ, ಸೈನಿಕ ಹಾಗೂ ಶಿಕ್ಷಕ. ನೀವು ಕೂಡ ಸಮಾಜ ಸ್ತಂಭ. ತಾವು ರಾಜ್ಯಸೇವೆ, ದೇಶ ಸೇವೆ ಮಾಡಬೇಕು. ಇದೇ ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಂದು ಮಾತು ಹೇಳಿದ್ದರು, ವಿಶ್ವದ ನಾಯಕರು ದೆಹಲಿಗೆ ಬಂದು ದೇಶದ ವಿವಿಧ ಭಾಗಗಳಿಗ ಹೋಗುತ್ತಿದ್ದರು.  ಆದರೆ, ಈಗ ಕಾಲ ಬದಲಾಗಿದೆ. ಎಲ್ಲಾ ವಿಶ್ವ ನಾಯಕರು ಬೆಂಗಳೂರಿಗೆ ಬಂದು ದೆಹಲಿಗೆ ಬರುವ ಕಾಲ ಈಗ ಶುರುವಾಗಿದೆ ಅಂತ. ದೇಶದಲ್ಲಿ 140ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳಿವೆ. ಅದರಲ್ಲಿ 38 ಕರ್ನಾಟಕದಲ್ಲಿದೆ’ ಎಂದರು.ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿ: ಸಿಎಂ ಡಿ.ಕೆ ಶಿವಕುಮಾರ್ ಕರೆ

‘ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಸರ್ಕಾರಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಬೆರಗಾದೆ. ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆ ಇಲ್ಲ. ಅವರ ಸಾಮರ್ಥ್ಯ, ಶಿಸ್ತು ನೋಡಿ ಸಂತೋಷವಾಯಿತು. ಇವರನ್ನು ರಾಜ್ಯೋತ್ಸವ ಅಲ್ಲ, ದಸರಾ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದೇನೆ. ಈಗಿನ ಕಾಲದ ಮಕ್ಕಳ ಸಾಮರ್ಥ್ಯ, ಬುದ್ಧಿ ಮತ್ತೆ ಬಹಳ ಅದ್ಬುತವಾಗಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಎಲ್ಲಾ ಖಾಸಗಿ ಆಡಳಿ ಶಾಲಾ ಆಡಳಿತ ಮಂಡಳಿಗೆ ಈ ರಾಜ್ಯದ ಅಭಿವೃದ್ಧಿ, ಗ್ರಾಮೀಣ ಭಾಗದ ಪುರೋಭಿವೃದ್ಧಿಯ ಪಾಲುದಾರರಾಗಬೇಕು’ ಎಂದು ಕರೆ ನೀಡಿದರು.development jk02_new jk02 new

 

English Summary
Title

D.K. Shivakumar Urges Private Schools to Adopt Karnataka Government Schools

Short Description
Karnataka Chief Minister D.K. Shivakumar has urged resource-rich private schools and corporate giants to adopt rural government schools through a CSR-backed development model. This initiative aims to upgrade primary school infrastructure, build modern classrooms, and improve rural education standards to curb family migration to Bengaluru. While successful in his own constituency with support from major groups, the school adoption policy faces pushback from private school associations and educationists concerned about institutional autonomy and state public funding duties.
Keywords
Private schools, assist, development, government schools, CM, D.K. Shivakumar