ಬೆಂಗಳೂರು,ನವೆಂಬರ್,3,2026 (www.justkannada.in): ಅಪರೇಷನ್ ಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸ್ಟಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನ ಬಹಳ ದಿನದಿಂದ ಗಮನಿಸಿರುವೆ. ಅವರ ಪುತ್ರ ಯತೀಂದ್ರ ಮಾತನಾಡಿರುವುದನ್ನೂ ನೋಡಿದ್ದೇನೆ. ಕೇಂದ್ರ ಸಚಿವ ಹೆಚ್ ಡಿಕೆ ಹೇಳಿಕೆಯನ್ನೂ ನೋಡಿದ್ದೇನೆ. ರಾಜ್ಯ ಸರ್ಕಾರ ಕುಮಾರಸ್ವಾಮಿ ಅವರನ್ನ ಟಾರ್ಗೆಟ್ ಮಾಡಿದೆ. ಅದರೆ ಸ್ಟಿಂಗ್ ಮಾಡಿದವರು ಯಾರು ಉದ್ದೇಶ ಏನು ಅಂತಾ ತನಿಖೆ ಆಗುತ್ತಿಲ್ಲ. ಇದರಿಂದ ಸಿದ್ದರಾಮಯ್ಯ ಬೇಸರಗೊಂಡು ಹೈಕಮಾಂಡ್ ಗೆ ದೂರು ನೀಡಿದ್ದಾರೆ. ಸ್ಟಿಂಗ್ ಮುನ್ನೆಲೆಗೆ ತಂದು ತಮ್ಮ ಬುಡಕ್ಕೆ ಬೆಂಕಿ ಇಟ್ಟುಕೊಂಡಿದ್ದಾರೆ ಎಂದರು.
ಮೋದಿ ಪ್ರಧಾನಿ ಆಗಿರುವುದರಿಂದ ಕಾಂಗ್ರೆಸ್ಸಿಗರು ಸಹಿಸುತ್ತಿಲ್ಲ. ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳದೆ ರಾಹುಲ್ ಗಾಂಧಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.
Sting operation, issue, State government, target, HDK, BY Vijayendra






