ಬೆಂಗಳೂರು,ನವೆಂಬರ್,2,2026 (www.justkannada.in): ಪ್ರಜ್ವಲ್ ಪೆನ್ ಡ್ರೈವ್ ಹಂಚಿದ್ದು ನಾನಲ್ಲ ಪ್ರಜ್ವಲ್ ಕಾರು ಚಾಲಕ ಹಂಚಿದ್ದು. ಪ್ರಜ್ವಲ್ ಕಾರು ಚಾಲಕನನ್ನು ಮನೆಗೆಕರೆಸಿಕೊಂಡು ಡಿಕೆ ಶಿವಕುಮಾರ್ ಷಡ್ಯಂತ್ರ ನಡೆಸಿದ್ದರು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಪ್ರಜ್ವಲ್ ಪೆನ್ ಡ್ರೈವ್ ಅನ್ನು ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ನಾನು ಇಂತಹ ಹಿನ್ನೆಲೆಯಿಂದ ಬಂದವನು ಅಲ್ಲ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನ ನಿಮ್ಮಿಂದ ನಾನು ಕಲಿಯಬೇಕಿಲ್ಲ. ಬಿಜೆಪ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ. ಜೆಡಿಎಸ್ ಪಕ್ಷ ಮುಗಿಸಲು ಮುಂದಾಗಿದ್ರು ರಾಹುಲ್ ಪ್ರಧಾನಿ ಆಗುವುದನ್ನು ತಪ್ಪಿಸದರೆಂದೆ ನನ್ನ ಕುಟುಂಬವನ್ನು ಕಾಂಗ್ರೆಸ್ ನಾಯಕರು ನಿರ್ನಾಮ ಮಾಡಲು ಮುಂದಾದರು ಎಂದು ಕಿಡಿಕಾರಿದರು.
ಪೆನ್ ಡ್ರೈವ್ ಹಂಚಿದ್ದು ನಾನಲ್ಲ ಪ್ರಜ್ವಲ್ ಕಾರು ಚಾಲಕ ಹಂಚಿದ್ದು .ಪ್ರಜ್ವಲ್ ಕಾರು ಚಾಲಕನನ್ನು ಮನೆಗೆಕರೆಸಿಕೊಂಡು ಡಿಕೆಶಿ ಷಡ್ಯಂತ್ರ ಮಾಡಿದ್ದರು. ಈಗ ಸ್ಟಿಂಗ್ ಕೇಸ್ ಅನ್ನು ನನ್ನ ಮನೆಗೂ ಲಿಂಕ್ ಮಾಡಿದ್ದಾರೆ ನನ್ನ ಮನೆಗೆ ದಿನವೂ ನೂರಾರು ಜನ ಬರುತ್ತಾರೆ. ನನ್ನ ಮನೆಯಲ್ಲೇ ಮೊಬೈಲ್ ಹಸ್ತಾಂತರ ಅಂತಾ ಆರೋಪಿಸಿದ್ದೀರಿ ನಾನು ತೊಡೆ ತಟ್ಟುತ್ತೇನೆ, ಈಗಲೂ ಪ್ರಾಮಾಣಿಕವಾಗಿ ತನಿಖೆ ನಡೆಸಿ ಎಂದು ಪ್ರಿಯಾಂಕ್ ಖರ್ಗೆಗೆ ಹೆಚ್ ಡಿಕೆ ನೇರ ಸವಾಲು ಹಾಕಿದರು.
Prajwal, pen drive, conspiracy, DK Shivakumar, Union Minister, HDK






