Monday, November 2, 2026

Dasara Wishes

Happy Dasara
Home Front Page ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ನವೆಂಬರ್,2,2026 (www.justkannada.in): ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನ ನೀಡಲು ಸರ್ಕಾರ ಚಿಂತನೆ ನಡೆಸಿದ್ದು, ಈ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ತಿಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಗೂ ಸದಾಶಿವನಗರ ನಿವಾಸ ಮತ್ತು ವಿಧಾನಸೌಧದ ಭುವನೇಶ್ವರಿ ಪ್ರತಿಮೆ ಬಳಿ ಸಿಎಂ ಡಿ.ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಈ ವಿಚಾರ ತಿಳಿಸಿದರು.

“ನಾನು ಈಗಷ್ಟೇ ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜ ಹಾರಿಸಿದ್ದೇನೆ. ಈ ಕನ್ನಡ ಬಾವುಟಕ್ಕೆ ಅಧಿಕೃತ ಸ್ಥಾನಮಾನ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಆದರೆ ನಮಗೆ ಈವರೆಗೂ ಮಾನ್ಯತೆ ಸಿಕ್ಕಿಲ್ಲ” ಎಂದರು.

ಅಧಿಕೃತ ನಾಡಧ್ವಜಕ್ಕೆ ಕಾನೂನುಬದ್ಧ ಅಡಿಪಾಯ:

“ನಾಡಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಿ, ರಾಷ್ಟ್ರಧ್ವಜದ ಪಕ್ಕದಲ್ಲೇ ಗೌರವಯುತವಾಗಿ ಹಾರಿಸಲು ಅಗತ್ಯವಿರುವ ಕಾನೂನು, ನೀತಿ ನಿಯಮಗಳ ರೂಪುರೇಷೆ ಸಿದ್ಧಪಡಿಸಿ, ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು. ಆ ಮೂಲಕ ನಾಡಧ್ವಜಕ್ಕೆ ಕಾನೂನಾತ್ಮಕ ಅಡಿಪಾಯ ಹಾಕಲಾಗುವುದು” ಎಂದರು.

ಕನ್ನಡ ಬಾವುಟಕ್ಕೆ ನೀಡಬೇಕಾದ ಗೌರವ, ರಾಷ್ಟ್ರಧ್ವಜದ ಪಕ್ಕದಲ್ಲಿ ಅದನ್ನು ಹಾರಿಸುವಾಗ ಪಾಲಿಸಬೇಕಾದ ನಿಯಮಗಳು ಹಾಗೂ ಅದಕ್ಕೆ ಅಗತ್ಯವಿರುವ ಕಾನೂನು ಅವಕಾಶಗಳ ಕುರಿತು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಕನ್ನಡಿಗರು ಕನ್ನಡ ಬಾವುಟವನ್ನು ಯಾವ ರೀತಿಯಲ್ಲಿ ಗೌರವದಿಂದ ಕಾಣಬೇಕು ಎಂಬುದಕ್ಕೆ ಮಾರ್ಗಸೂಚಿ ಸಿದ್ಧಪಡಿಸುತ್ತೇವೆ” ಎಂದು ಹೇಳಿದರು.ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

“ಮತ್ತೊಮ್ಮ ಸಂಪುಟದಲ್ಲಿ ತೀರ್ಮಾನ ಮಾಡಿ ಕಾನೂನು ತಂದು ರಾಷ್ಟ್ರಧ್ವಜದ ಪಕ್ಕ ಕನ್ನಡ ಧ್ವಜವನ್ನು ಹಾರಿಸಲು ತೀರ್ಮಾನ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಒಳಗಡೆ ಮಾತ್ರವಲ್ಲ, ವಿಧಾನಸೌಧದಲ್ಲೂ ಈ ಧ್ವಜವನ್ನು ಹಾರಿಸಲು ಸಾರ್ವಜನಿಕ ಚರ್ಚೆಗೆ, ಶಾಸಕರ ಚರ್ಚೆಗೆ ಇನ್ನು ಮುಂದೆ ಅವಕಾಶ ಮಾಡಿಕೊಟ್ಟು ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಹೊಸ ರೂಪ ಕೊಡಲು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ಣಯ ಮಾಡಿ ಕಾನೂನುಬದ್ಧವಾಗಿ ಏನೆಲ್ಲ ರಕ್ಷಣೆ ಮಾಡಬೇಕು ಆ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದು ನಮ್ಮದಲ್ಲ, ನಿಮ್ಮ ಸರ್ಕಾರ. ಕನ್ನಡಿಗರ ಭಾವನೆಯ ಹೆಗ್ಗುರುತಾಗಿರುವ ಕೆಂಪು ಹಳದಿ ಬಾವುಟಕ್ಕೆ ಗೌರವ ನೀಡಲಾಗುವುದು. ಕನ್ನಡದ ಜ್ಞಾನ, ಪರಂಪರೆ, ಸಂಸ್ಕೃತಿ, ಸರ್ವಧರ್ಮ ಪರಂಪರೆ ಸಮಾನತೆ, ಶಾಂತಿಯ ಸಂದೇಶ ಸಾರುವ ಈ ಬಾವುಟವನ್ನು ನಾಡಧ್ವಜವಾಗಿ ಅಧಿಕೃತಗೊಳಿಸಲು ಮುಂದಾಗಿದ್ದೇವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಹೆಗ್ಗುರತನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಈ ತೀರ್ಮಾನ ಮಾಡಲಾಗುವುದು” ಎಂದು ವಿವರಿಸಿದರು.

ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ

“ಕನ್ನಡ ರಾಜ್ಯೋತ್ಸವದ 71ನೇ ವರ್ಷದಿಂದ ಮುಂದಿನ ಒಂದು ವರ್ಷದ ಅವಧಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಹಿರಿಮೆ ಸಾರಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದರ ಜತೆಗೆ, ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಚಿಂತನೆ ಇದೆ. ಖಾಸಗಿ ಸಂಸ್ಥೆಗಳೂ ಕನ್ನಡ ಧ್ವಜ ಹಾರಿಸುವಂತೆ ಈ ತಿಂಗಳಲ್ಲೇ ಸರ್ಕಾರದ ಆದೇಶ ಹೊರಡಿಸಲು ಸಿದ್ಧತೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಭಾಷೆ ಸಂಸ್ಕೃತಿ, ಜ್ಞಾನದ ಪ್ರತಿಬಿಂಬ

“ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ನಮ್ಮ ನುಡಿ ಬಹಳ ಚೆಂದ, ಅದರಲ್ಲಿ ಏನೇ ಗೀಚಿದರೂ ಆಗುವುದು ಶ್ರೀಗಂಧ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ, ನಡೆ ಕನ್ನಡ. ಅದನ್ನು ಆಚರಿಸಲು ನಾವು ಸೇರಿದ್ದೇವೆ. ಜಗದ ಏಳಿಗೆಗೆ ದಾ ರಾ ಬೇಂದ್ರೆ ಅವರು ಕನ್ನಡ ಕರ್ನಾಟಕದ ದಿಕ್ಸೂಚಿ, ಕರ್ನಾಟಕ ಭಾರತದ ಭವಿಷ್ಯ. ಮಾತೃಭಾಷೆ ಮೂಲಕ ಜ್ಞಾನದ ಸಂಸ್ಕೃತಿ ಹರಿಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಭಾಷೆ ಸಂಸ್ಕೃತಿ, ಜ್ಞಾನದ ಪ್ರತಿಬಿಂಬ, ಹೆತ್ತ ತಾಯಿ, ಹುಟ್ಟಿದ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಬೇರೆಯವರ ಮನಸ್ಸನ್ನು ಕನ್ನಡದಿಂದಲೇ ಗೆಲ್ಲಬೇಕು. ನಾವು ಯಾವುದೇ ದೇಶದಲ್ಲಿದ್ದರೂ ನಮ್ಮ ಉಸಿರು ಕನ್ನಡವಾಗಿರಬೇಕು” ಎಂದು ಕರೆಕೊಟ್ಟರು.

ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಾಗಿರುತ್ತದೆ

“ಈ ದೇಶದಿಂದ ಹೊರಗಿರುವ ಕನ್ನಡಿಗರು ಕನ್ನಡ ಸಂಘಟನೆ ಕಟ್ಟಿಕೊಂಡು ಮಾತೃಭಾಷೆ ಉಳಿಸಲು ಶ್ರಮಿಸುತ್ತಿದ್ದಾರೆ. ಅವರಿಗೆ ನಾನು ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ. ನುಡಿ ಉಳಿದರೆ ನಾಡು ಉಳಿಯುತ್ತದೆ. ನಾಡು ಉಳಿದರೆ ನುಡಿ ಉಳಿಯುತ್ತದೆ. ನಾವು ಇಲ್ಲಿ ರಾಜ್ಯೋತ್ಸವ ಮಾತ್ರ ಆಚರಿಸುತ್ತಿಲ್ಲ. ಕನ್ನಡ ತಾಯಿ ಭುವನೇಶ್ವರಿ ಸೇವೆ. ಇದು ಮಾತೃಭಾಷೆಯ ಪೂಜೆ. ತಾಯಿ ನುಡಿ ಸೇವೆಗಿಂದ ದೊಡ್ಡ ಧರ್ಮ ಮತ್ತೊಂದಿಲ್ಲ. ಮಗು ಹುಟ್ಟಿದಾಗ ತಾಯಿ ಮಗುವನ್ನು ಪ್ರೀತಿಸಿದಂತೆ ನಾವು ನಮ್ಮ ತಾಯಿ ಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ಪ್ರೀತಿಸುವುದು, ತಾಯಿಯನ್ನು ಪ್ರೀತಿಸಿದಂತೆ. ಮಾತೃಭಾಷೆಯಲ್ಲಿ ಕಲಿಯುವ ಜ್ಞಾನ ಗಟ್ಟಿಯಗಾರುತ್ತದೆ. ಕನ್ನಡಕಕ್ಕೆ ಕಿರುಬೆರಳು ಎತ್ತಿದರೂ ಸಾಕು, ಅದು ಗೋವರ್ಧನಗಿರಿಯಾಗುತ್ತದೆ ಎಂದು ಕುವೆಂಪು ಅವರು ಹೇಳಿದ್ದಾರೆ. ಕುವೆಂಪು ಅವರು ಕನ್ನಡದಲ್ಲಿ ವಿಶ್ವಮಾನವ ಸಂದೇಶ ಸಾರಿದ್ದಾರೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ನಮ್ಮ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಸಂದಿದೆ” ಎಂದು ತಿಳಿಸಿದರು.Contemplation jk02_new jk02 new

“ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸರು, ಪುರಂದರ ದಾಸರು, ಸರ್ವಜ್ಞ, ಬಸವಣ್ಣ ಹುಟ್ಟಿದ ನಾಡು. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಗೋಕಾಕ್, ಅನಂತಮೂರ್ತಿ, ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹ್ಮದ್ ರಂತಹ ದಿಗ್ಗಜರು ಮಾಡಿರುವ ಸೇವೆ, ನಮ್ಮ ಶ್ರೀಮಂತ ಭಾಷೆಗೆ ಕೊಟ್ಟಿರುವ ಗೌರವವನ್ನು ನಾವು ಸ್ಮರಿಸಬೇಕು. ಭಾರತ ಜನನಿಯ ತನುಜಾತೆ ಕನ್ನಡಮ್ಮನ ನಾಡಗೀತೆ ಕನ್ನಡಿಗನ ಸ್ವಾಭಿಮಾನ ಗೀತೆಯನ್ನು ಪ್ರತಿ ಕಾರ್ಯಕ್ರಮದಲ್ಲಿ ಹಾಡುತ್ತೇವೆ” ಎಂದರು.

“ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟಿದ್ದು ಕನ್ನಡ ನಾಡು. ಈ ನಾನು ನುಡಿಯನ್ನು ಪ್ರೀತಿಸುವಂತೆ ನಾವು ಮಕ್ಕಳಿಗೆ ಕಲಿಸಬೇಕಿದೆ. ನಾವು ಭಾಷೆ ಪ್ರೀತಿಸಿದರೆ ಭಾಷೆ ನಮ್ಮನ್ನು ಕಾಪಾಡುತ್ತದೆ. ಭಾಷೆಗೆ ಗಡಿಯಿಲ್ಲ. ಡಿಜಿಟಲ್ ಯುಗದಲ್ಲಿ ಮೊಬೈಲ್ ನಲ್ಲಿ ನಾವು ಎಲ್ಲಾ ಭಾಷೆ ಬಳಸಬಹುದು. ಕಲಿಕೆ ಬಹಳ ವಿಸ್ತಾರವಾಗಿದೆ. ಭಾಷೆಗಳ ಸ್ಪರ್ಧೆಗಳ ಮಧ್ಯೆ ಕನ್ನಡ ಬೆಳೆಯಬೇಕು. ಅದಕ್ಕಾಗಿ ನಮ್ಮ ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರಷ್ಟೇ ಸಾಲದು, ದಿನನಿತ್ಯ ಕನ್ನಡ ಭಾಷೆ ಬಳಸಬೇಕು” ಎಂದು ಸಂದೇಶ ನೀಡಿದರು.

ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ, ಹೃದಯದ ಭಾಷೆಯಾಗಬೇಕು

“ನಮ್ಮ ಸರ್ಕಾರಿ ಶಾಲೆಗಳ ಜತೆ ಖಾಸಗಿ ಶಾಲೆ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಆ ಶಾಲೆ ಶಿಕ್ಷಕರು ಹಾಗೂ ಸಂಸ್ಥೆಯವರಿಗೆ ಅಭಿನಂದಿಸುತ್ತೇನೆ. ಕನ್ನಡ ಕೇವಲ ಸರ್ಕಾರಿ ಭಾಷೆ ಮಾತ್ರವಲ್ಲ, ಹೃದಯದ ಭಾಷೆಯಾಗಬೇಕು. ಭಾಷೆ ಎಂಬುದು ಬದುಕು. ಭಾಷೆ ಇಲ್ಲದ ಬದುಕು ಮೂಕಿಚಿತ್ರದಂತಾಗುತ್ತದೆ. ಕನ್ನಡದ ಬೇರು ಕರ್ನಾಟಕದಲ್ಲಿದ್ದರೂ ಅದರ ರೆಂಬೆ ಕೊಂಬೆ, ರುಚಿ ಇಡೀ ಪ್ರಪಂಚಕ್ಕೆ ವಿಸ್ತರಿಸಿದೆ. ಸಾವಿರಾರು ಕನ್ನಡಿಗರು ವಿಶ್ವದ ನಾನಾ ಕಡೆ ನೆಲೆಸಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕಲೆ ಕ್ರೀಡೆ, ವಿಜ್ಞಾನ ಐಟಿ ಬಿಟಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಾದರೂ ಕನ್ನಡದ ಸಾರ್ವಭೌಮತೆ ಬೆಳಎಯಬೇಕು. ಕನ್ನಡ ಎನ್ನುವುದು ಆಭರಣ ಇದ್ದಂತೆ. ಈ ಆಭರಣ ಕಳೆಯದಂತೆ ಕಾಪಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ” ಎಂದರು.

“ನಮ್ಮ ಸರ್ಕಾರ ಕನ್ನಡ, ನೆಲ, ಜಲ, ಸಂಸ್ಕೃತಿ ರಕ್ಷಣೆಗೆ ಬದ್ಧವಾಗಿದೆ. ಮಕ್ಕಳ ಜಾಗತಿಕ ಸ್ಪರ್ಧೆಗೆ ಎಲ್ಲಾ ರೀತಿ ಸಿದ್ಧರಾಗಿ. ಇದಕ್ಕಾಗಿ ಕನ್ನಡದ ಬೇರು ಗಟ್ಟಿಯಾಗಬೇಕು. ಇದಕ್ಕಾಗಿ ನಮ್ಮ ಜವಾಬ್ದಾರಿ ಅರಿಯಬೇಕು. ಸರ್ಕಾರಿ ಶಾಲೆಗಳ ಮಕ್ಕಳು ನಮ್ಮ ರಾಜ್ಯಕ್ಕೆ ಹೆಮ್ಮೆತರುತ್ತಿದ್ದಾರೆ. ನಮ್ಮ ಕನ್ನಡದ ಬೇರುಗಳು ಇರುವುದು ನಮ್ಮ ಕನ್ನಡ ಸರ್ಕಾರಿ ಶಾಲೆಗಳಲ್ಲಿ. ಎಸ್ಎಸ್ಎಲ್ ಸಿ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ಮಕ್ಕಳು ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿಮಗೆ ಅಭಿನಂದನೆ ಸಲ್ಲಿಸುವೆ. ಕನ್ನಡದ ಅಳಿವು, ಉಳಿವು ಈ ವಿದ್ಯಾರ್ಥಿಗಳ ಕೈಯಲ್ಲಿದೆ. 6ನೇ ತರಗತಿಯಿಂದ ಎಐ ತರಬೇತಿ ನೀಡಲು ನಾವು ಮುಂದಾಗಿದ್ದೇವೆ. 12ನೇ ತರಗತಿವರೆಗೂ ಮುಂದುವರಿಸುತ್ತೇವೆ. ನಮ್ಮ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಬಳಸಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೊಸ ರೂಪ ನೀಡಲಾಗುತ್ತಿದೆ” ಎಂದು ವಿವರಿಸಿದರು.

ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳಿಗೆ ವೃತ್ತಿಪರ ಶಿಕ್ಷಣದಲ್ಲಿ ಶೇ.7ರಷ್ಟು ಮೀಸಲಾತಿ

“ಪಂಚಾಯ್ತಿ ಮಟ್ಟದ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಶಾಲೆಗಳಂತೆ ರೂಪಿಸಲಾಗುತ್ತಿದೆ. ಈಗಾಗಲೇ 15 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ 25,498 ದ್ವಿಭಾಷಾ ಶಾಲೆಗಳು ಆರಂಭವಾಗಿದೆ. 250 ಸರ್ಕಾರಿ ಶಾಲೆಗಳನ್ನು ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ. 6ನೇ ತರಗತಿಯಿಂದ ಕೌಶಲ್ಯ ಆಧಆರಿತ ಶಿಕ್ಷಣ ಆರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿ, ಪಿಯು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದಲ್ಲಿ ವ್ಯಾಸಂಗಕ್ಕೆ ಶೇ.7ರಷ್ಟು ಮೀಸಲಾತಿ ನೀಡಲಾಗಿದೆ. ಈ ಮೀಸಲಾತಿ ಉದ್ದೇಶ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಇಂಜಿನಿಯರ್, ವೈದ್ಯ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಸಿಗುವಂತೆ ಮಾಡುವುದಾಗಿದೆ” ಎಂದು ತಿಳಿಸಿದರು.

ನಗರದ ಮಕ್ಕಳಿಗೆ ಗ್ರಾಮಾನುಭವ ಕಾರ್ಯಕ್ರಮ

“ನಗರದ ವಿದ್ಯಾರ್ಥಿಗಳಿಗೆ ಹಳ್ಳಿಗಳ ಬದುಕಿನ ಪರಿಚಯಕ್ಕೆ ಗ್ರಾಮಾನುಭವ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಬೆಂಗಳೂರು ಹಾಗೂ 10 ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಮಕ್ಕಳಿಗೆ 2-3 ದಿನಗಳ ಗ್ರಾಮವಾಸ್ತವ್ಯ ಪರಿಚಯಿಸಿ ಗ್ರಾಮದ ಬದುಕು ಏನು ಎಂದು ತಿಳಿಸುವುದಾಗಿದೆ. ಗ್ರಾಮಾನುಭವ ಯೋಜನೆ ಮೂಲಕ ವಿದ್ಯಾರ್ಥಿಗಳನ್ನು ಕೊಠಡಿಯಿಂದಾಚೆ ತಂದು ಹಳ್ಳಿಗಳಲ್ಲಿ ಕೃಷಿ, ತೋಟಗಾರಿಕೆ, ಗ್ರಾಮೀಣ ಸಂಸ್ಕೃತಿ ಪರಿಚಯಿಸುವ ಉದ್ದೇಶವಿದೆ” ಎಂದರು.ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

“ನಮ್ಮ ಮಕ್ಕಳು ಏಷ್ಯನ್ ಗೇಮ್ಸ್ ನಲ್ಲಿ 8 ಪದಕ ಗೆದ್ದಿದ್ದಾರೆ. ನಮ್ಮ ಸರ್ಕಾರ ಚಿನ್ನದ ಪದಕ ವಿಜೇತರಿಗೆ 1 ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ, ಕಂಚು ಗೆದ್ದವರಿಗೆ 50 ಲಕ್ಷ ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ 5 ಲಕ್ಷ ನೀಡಲಾಗಿದೆ. ಪ್ಯಾರಾಲಿಂಪಿಕ್ಸ್ ಗೆ ತಯಾರಾಗುತ್ತಿರುವ ಕ್ರೀಡಾಪಟುಗಳ ಸಿದ್ಧತೆಗೆ ತಲಾ 10 ಲಕ್ಷ ನೀಡಲಾಗುತ್ತಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ಕೆಲಸಗಳಲ್ಲಿ ಶೇ.2ರಷ್ಟು, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಮೀಸಲಾತಿ ನೀಡಿದ್ದೇವೆ. ಒಲಿಂಪಿಕ್ಸ್ ನಿಮ್ಮ ಗುರಿಯಾಗಿ ತಯಾರಾಗಬೇಕು. ಓದಿನ ಜತೆಗೆ ಕ್ರೀಡಾ, ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಹಿಂದೆ ನಾವಿದ್ದೇವೆ. ನೀವು ಧೈರ್ಯವಾಗಿ ಹೊಸ ನಕ್ಷೆ ತಯಾರಿಸಿ ಸಿದ್ಧರಾಗಿ” ಎಂದು ಕರೆ ನೀಡಿದರು.

ಭಾರತ ಜೋಡೋ ಯುವ ಸಂಘಗಳ ಮೂಲಕ ಯುವಕರ ಪ್ರತಿಭೆಗಳಿಗೆ ಪ್ರೋತ್ಸಾಹ

“ಕರ್ನಾಟಕವನ್ನು ನಶೆಮುಕ್ತ ರಾಜ್ಯವನ್ನಾಗಿ ಮಾಡಬೇಕು. ಕರ್ನಾಟಕ ಪ್ರಾದೇಶಿಕ ಯೋಜನೆ ರೂಪಿಸಿ 2047ರ ವೇಳೆಗೆ ರಾಜ್ಯಕ್ಕೆ ಹೊಸ ರೂಪ ನೀಡಲು ಹೆಜ್ಜೆ ಹಾಕುತ್ತಿದ್ದೇವೆ. ಇದರಿಂದ ಮುಂದಿನ 20 ವರ್ಷಗಳಲ್ಲಿ 5 ಲಕ್ಷ ಕೋಟಿ ಹೂಡಿಕೆಗೆ ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ಸರ್ಕಾರ ಭಾರತ ಜೋಡೋ ಯುವಕರ ಸಂಘ ಸ್ಥಾಪಿಸುತ್ತಿದೆ. ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಕ್ರೀಡೆ, ಕಲೆ, ಸಂಸ್ಕೃತಿ ವಿಚಾರವಾಗಿ ಯುವಕರ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರಲ್ಲಿ ನಾಯಕತ್ವದ ಗುಣ ಬೆಳೆಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯದಲ್ಲಿ 10 ಸಾವಿರ ಭಾರತ ಜೋಡೋ ಸಂಘಗಳನ್ನು ಸ್ಥಾಪಿಸಿ 16-35 ವರ್ಷದೊಳಗಿನ ಯುವಕರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಈ ಸಂಘಗಳಿಗೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುವುದು” ಎಂದು ವಿವರಿಸಿದರು.

“ಈಗಾಗಲೇ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಆದೇಶ ಮಾಡಲಾಗಿದ್ದು, 66 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗಿದೆ. ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಯುವನಿಧಿ ಯೋಜನೆ ಜತೆಗೆ ಖಾಸಗಿ ಉದ್ಯೋಗ ವಿನಿಮಯಕ್ಕಾಗಿ ಉದ್ಯೋಗ ಸೇತು ವ್ಯವಸ್ಥೆ ರೂಪಿಸಿದೆ. ಇದಕ್ಕಾಗಿ 100 ಐಟಿಐ ಸಂಸ್ಥೆಗಳನ್ನು ಅತ್ಯುತಮ ಕೈಗಾರಿಕಾ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಡಲಾಗಿದೆ” ಎಂದರು.

ರೈತರಿಗೆ ಶಕ್ತಿ ತುಂಬಲು ಹಾಲಿನ ದರ ಏರಿಕೆ

“ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ರೈತರು ಸಕಷ್ಟದಲ್ಲಿದ್ದಾರೆ. ಅವರಿಗೆ ಶಕ್ತಿ ತುಂಬಲು ಪ್ರತಿ ಲೀಟರ್ ಹಾಲಿನ ಬೆಲೆಯನ್ನು 8 ರೂ. ಹೆಚ್ಚಿಸಿದ್ದೇವೆ. ಇದರಲ್ಲಿ ರೈತರಿಗೆ 7 ಹಾಗೂ ಒಕ್ಕೂಟಗಳಿಗೆ ಸೊಸೈಟಿಗಳಿಗೆ ತಲುಪಲಿದೆ. ಇದರಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ. ಮುಖ್ಯಮಂತ್ರಿ ರಸ್ತೆ ಸಂಪರ್ಕ ಯೋಜನೆಗೆ 10 ಸಾವಿರ ಕೋಟಿ ನೀಡಿದ್ದು, 20 ಸಾವಿರ ಕಿ.ಮೀ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಪಂಚಾಯ್ತಿಗೆ 6 ಸಾವಿರ ಕೋಟಿ ಹಣ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆ ದತ್ತು ಯೋಜನೆ ಪ್ರಾರಂಭಿಸಿದ್ದು, 11 ವೈದ್ಯಕೀಯ ಕಾಲೇಜುಗಳು ಇದಕ್ಕೆ ಸಹಿ ಮಾಡಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 100 ಹೊಸ ಆಂಬುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಲಾಗುವುದು ” ಎಂದು ತಿಳಿಸಿದರು.

“ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ 1995ರ ನಂತರ ಪ್ರಾರಂಭವಾದ ಸರ್ಕಾರಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಕೆಲವು ದಿನಗಳಲ್ಲಿ ಅವರೊಂದಿಗೆ ಚರ್ಚೆ ಮಾಡಿ ಸಹಾಯ ಮಾಡಲಾಗುವುದು. ಇನ್ನು ಬಡ ರೈತರಿಗಾಗಿ ಸರ್ಕಾರ ನೇಗಿಲ ಯೋಗಿ ಯೋಜನೆ ರೂಪಿಸಿದ್ದು, 3 ಎಕರೆವರೆಗೂ ಹೊಲವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ಸರ್ಕಾರ ಪ್ರಜಾಸೇವೆ ಇಲಾಖೆ ರೂಪಿಸಿದೆ. ಎಲ್ಲರ ಆಸ್ತಿ ದಾಖಲೆಗಳ ಮೂಲಕ ಮಾಲೀಕತ್ವ ಗಟ್ಟಿಗೊಳಿಸಲು ಭೂಗ್ಯಾರಂಟಿ ಜಾರಿಗೆ ತಂದಿದೆ. ರೈತರಿಗಾಗಿ ತೇಗದ ಸಿರಿ ಯೋಜನೆ ರೂಪಿಸಿದೆ. ಮಲೆನಾಡಿನ ಪ್ರದೇಶದ ರೈತರಿಗೆ ಅರಣ್ಯ ಇಲಾಖೆಯಿಂದ ಆಗುತ್ತಿದ್ದ ತೊಂದರೆ ಹಾಗೂ ರಸ್ತೂರಿ ರಂಗನ್ ವರದಿ ತಿರಸ್ಕರಿಸಲು ವಿಶೇಷ ಅಧಿವೇಶನ ನಡೆಸಿದ್ದೇವೆ. ಇನ್ನು ರಾಜ್ಯದಲ್ಲಿ 5 ಲಕ್ಷ ನಿವೇಶನಗಳನ್ನು ವಿತರಣೆ ಮಾಡಲು ಕಾರ್ಯಕ್ರಮ ನೀಡಲಾಗಿದೆ” ಎಂದು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡಲು ಚಿಂತನೆ: ಸಿಎಂ ಡಿ.ಕೆ ಶಿವಕುಮಾರ್

“3 ಕೋಟಿ 32 ಲಕ್ಷ ವೆಚ್ಚದಲ್ಲಿ 1,000 ಚದರ ಕಿಲೋಮೀಟರ್ ಬಿತ್ತನೆ ಪ್ರದೇಶದಲ್ಲಿ ಡ್ರೋನ್ ಮತ್ತು ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಲಾಗುವುದು. 12 ಕೋಟಿ ವೆಚ್ಚದಲ್ಲಿ ಐದು ಜಿಲ್ಲೆಗಳ ಐದು ಹೋಬಳಿಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ ನಡೆಸಲಾಗುವುದು. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತು ಉತ್ತೇಜನ. ರಫ್ತುದಾರರಿಗೆ ತರಬೇತಿ ಕಾರ್ಯಕ್ರಮ ಜಾರಿ ಮಾಡಲಾಗುವುದು. ಕರ್ನಾಟಕ ಪ್ರೋಟೀನ್ ಮಿಷನ್, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ. ಸಾವಯವ ಪದ್ಧತಿ ಪ್ರೋತ್ಸಾಹಿಸಲು ವಸುಧಾಮೃತ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ರೈತರ ಆದಾಯ ಹೆಚ್ಚಿಸಲು ತೇಗ ಸಿರಿ ಯೋಜನೆ ಅನುಷ್ಟಾನಕ್ಕೆ ಸರ್ಕಾರ ಮುಂದಾಗಿದೆ. 37 ಲಕ್ಷದ 32 ಸಾವಿರ ರೈತರನ್ನ ಬೆಳೆ ವಿಮೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. 38 ಲಕ್ಷ ರೈತರಿಗೆ 30,000 ಕೋಟಿ ಸಾಲ ವಿತರಣೆ ಮಾಡಲಾಗಿದೆ. 3 ಲಕ್ಷ 41 ಸಾವಿರ ಜನ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗಿದೆ. 32,138 ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ 363 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. 2,825 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಯೋಜನೆ ಅಳವಡಿಕೆ ಮಾಡಲು ಮುಂದಾಗಿದ್ದೇವೆ” ಎಂದು ವಿವರಿಸಿದರು.

50 ವರ್ಷಗಳ ಹಳೆಯ ನೆನಪು ಮರುಕಳಿಸುತ್ತಿದೆ

“ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮಕ್ಕಳನ್ನು ನೋಡಿದರೆ, 50 ವರ್ಷಗಳ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ಇಲ್ಲಿ ಕನ್ನಡರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬಂದ ನೆನಪು ಮರುಕಳಿಸುತ್ತಿದೆ. ನಾನು ಕೂಡ ಪ್ರಾಥಮಿಕ ಶಾಲೆಯಲ್ಲಿ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಭಾಗವಹಿಸುತ್ತಿದ್ದೆ. ಪ್ರೌಢಶಾಲೆಯಲ್ಲಿದ್ದಾಗ ಬೇಸ್ ಡ್ರಬ್ ಬಾರಿಸುತ್ತಿದೆ. ಈಗ ನಿಮ್ಮನ್ನು ನೋಡಿ ನಿಮ್ಮ ಸ್ಥಾನದಲ್ಲಿ ನಾನು ಇದ್ದೆ, ಇಂದು ರಾಜ್ಯದ ಪ್ರಜಾಸೇವಕನಾಗಿದ್ದೇನೆ. ನೀವು ಕೂಡ ಬೆಳೆದು ಉತ್ತಮ ಸ್ಥಾನಕ್ಕೆ ಏರಬೇಕು” ಎಂದು ಶುಭಕೋರಿದರು.Kannada flag jk02_new jk02 new

ಬಾವುಟದ ಬಣ್ಣ ಬದಲಾವಣೆ ಇಲ್ಲ

ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಕನ್ನಡ ಬಾವುಟದ ಬಣ್ಣಗಳಲ್ಲಿ ಬದಲಾವಣೆ ಅಥವಾ ಹೆಚ್ಚುವರಿ ಬಣ್ಣಗಳನ್ನು ಸೇರಿಸುವ ಉದ್ದೇಶವಿದೆಯೇ ಎಂದು ಕೇಳಿದಾಗ, “ಯಾವುದೇ ಹೆಚ್ಚುವರಿ ಬಣ್ಣ ಇರುವುದಿಲ್ಲ. ಈಗಿರುವ ಬಣ್ಣಗಳೇ ಮುಂದುವರಿಯಲಿವೆ. ನಮ್ಮ ಬಾವುಟದ ಬಣ್ಣಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಮೂರು ಬಣ್ಣಗಳ ಧ್ವಜಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ ಎಂಬ ಪ್ರಶ್ನೆಗೆ, “ಈಗಿರುವ ಬಾವುಟ ಮುಂದುವರಿಯಲಿದೆ. ನಮ್ಮ ಭಾಷೆ ಮತ್ತು ಜನರ ಮನಸ್ಸಿಗೆ ಒಪ್ಪಿಗೆಯಾಗಿರುವ, ಜನರು ಪ್ರೀತಿಯಿಂದ ಸ್ವೀಕರಿಸಿರುವ ಬಣ್ಣಗಳಿವು. ನಾವು ಬೇರೆ ಯಾವುದೇ ಬಣ್ಣವನ್ನು ಸೇರಿಸಲು ಹೋಗುವುದಿಲ್ಲ” ಎಂದು ತಿಳಿಸಿದರು.

 

English Summary
Title

Karnataka Government Moves to Grant Official State Flag Status to Kannada Flag

Short Description
The Karnataka government plans to grant official state flag status to the red-and-yellow Kannada flag. During the 71st Karnataka Rajyotsava, Deputy Chief Minister DK Shivakumar announced that a formal proposal will be introduced during the winter legislative session in Belagavi starting November 30, 2026. The proposed legal framework intends to mandate hoisting the flag at government offices alongside the Indian national Tricolour, while permitting private establishments to display it. Originating from 1960s cultural movements, this historic shift aims to elevate the flag into an official emblem of regional identity and Kannadiga pride.
Keywords
Contemplation, official flag, status, Kannada flag, CM DK Shivakumar