Friday, October 30, 2026

Dasara Wishes

Happy Dasara
Home Front Page ಐವರು IAS ಅಧಿಕಾರಿಗಳ ವರ್ಗಾವಣೆ : ಸರ್ಕಾರ ಆದೇಶ

ಐವರು IAS ಅಧಿಕಾರಿಗಳ ವರ್ಗಾವಣೆ : ಸರ್ಕಾರ ಆದೇಶ

ಐವರು IAS ಅಧಿಕಾರಿಗಳ ವರ್ಗಾವಣೆ : ಸರ್ಕಾರ ಆದೇಶ

ಬೆಂಗಳೂರು,ಅಕ್ಟೋಬರ್,30,2026 (www.justkannada.in): ರಾಜ್ಯ ಸರ್ಕಾರವು ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಹುದ್ದೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು ಈ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ.

ಈ ಕುರಿತು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR)  ಅಧಿಕೃತ ಆದೇಶ ಹೊರಡಿಸಿದೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾಗಿದ್ದ ಸುರಳ್ಕರ್ ವಿಕಾಸ್ ಕಿಶೋರ್ ಅವರನ್ನು ಹಿಂದುಳಿದ ವರ್ಗಗಳ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎ. ದಯಾನಂದ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ವೆಂಕಟ್ ರಾಜ್ ಅವರನ್ನು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರನ್ನಾಗಿ ನೇಮಕ  ಮಾಡಲಾಗಿದ್ದು ಈ ಮೂಲಕ ಪಾಟೀಲ್ ಯಲಗೌಡ ಶಿವನಗೌಡ ಅವರ ಬಳಿ ಇದ್ದ ಹೆಚ್ಚುವರಿ ಪ್ರಭಾರವನ್ನು ಹಿಂಪಡೆಯಲಾಗಿದೆ.ಐವರು IAS ಅಧಿಕಾರಿಗಳ ವರ್ಗಾವಣೆ : ಸರ್ಕಾರ ಆದೇಶ

ಕಲಬುರಗಿ ನಗರ ಪಾಲಿಕೆ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಶಿಂಧೆ ಅವಿನಾಶ್ ಸಂಜೀವನ್ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನ ಅವರಿಗೆ ವಹಿಸಲಾಗಿದೆ.Transfer jk02_new jk02 new

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಸಿ.ಟಿ. ಅವರನ್ನು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯೋಜನೆಗೆ ತೆರಳುತ್ತಿರುವ ಡಾ. ರಾಜೇಂದ್ರ ಕೆ.ವಿ. ಅವರನ್ನು ಈ  ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ.

 

English Summary
Title

Karnataka Government Transfers 5 IAS Officers in Administrative Shuffle (

Short Description
The State Government has issued an order transferring five IAS officers and reassigning their posts, effectively carrying out a major overhaul of the administrative machinery. The Department of Personnel and Administrative Reforms (DPAR) issued an official order regarding this today. Suralkar Vikas Kishore, who was serving as the Commissioner of the Department of School Education and Literacy, has been transferred as the Commissioner for Backward Classes. K.A. Dayanand, currently serving as the Commissioner of the Karnataka Housing Board, has been retained in the same position. Venkat Raj, an IAS officer of the 2013 batch, has been appointed as the Commissioner of the Panchayat Raj Department; consequently, the additional charge previously held by Patil Yalagouda Shivangouda has been withdrawn.
Keywords
Transfer, Five, IAS Officers, Government, Order