ಬೆಂಗಳೂರು,ಅಕ್ಟೋಬರ್,29,2026 (www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಇಂದಿಗೆ (ಅಕ್ಟೋಬರ್ 29) ಐದು ವರ್ಷಗಳಾಗಿದ್ದು ಇಂದು ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಢಿದರು.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ದಿವಂಗತ ನಟ ಅಪ್ಪು ಅವರ ಸ್ಮಾರಕಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು ಅವರ ಸಮಾಧಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ , ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸೇರಿ ಕುಟುಂಬದವರು ಆಗಮಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಇನ್ನು ಪುನೀತ್ ಅವರ ಅಭಿಮಾನಿಗಳು ಇಂದು ಎಲ್ಲೆಡೆ ಅನ್ನದಾನ ರಕ್ತದಾನವನ್ನ ಆಯೋಜಿಸಿದ್ದಾರೆ. ಪುನೀತ್ ಅವರು 2021ರ ಅಕ್ಟೋಬರ್ 29ರಂದು ನಿಧನರಾಗಿದ್ದು 5 ವರ್ಷ ಕಳೆದಿದೆ.






