ಮೈಸೂರು, ಅಕ್ಟೋಬರ್, 28,2026 (www.justkannada.in): ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸಾರ್ವಜನಿಕರಿಗೆ ಇ-ಖಾತಾ ಸೇವೆಯನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಗರದ 9 ವಲಯಗಳಿಂದ ಒಟ್ಟು 708 ಅರ್ಜಿಗಳು ಸ್ವೀಕೃತವಾಗಿವೆ.
ವಲಯವಾರು ಸ್ವೀಕೃತ ಅರ್ಜಿಗಳ ವಿವರ:
- ವಲಯ 1 – 55 ಅರ್ಜಿಗಳು
- ವಲಯ 2 – 124 ಅರ್ಜಿಗಳು
- ವಲಯ 3 – 144 ಅರ್ಜಿಗಳು
- ವಲಯ 4 – 44 ಅರ್ಜಿಗಳು
- ವಲಯ 5 – 48 ಅರ್ಜಿಗಳು
- ವಲಯ 6 – 44 ಅರ್ಜಿಗಳು
- ವಲಯ 7 – 82 ಅರ್ಜಿಗಳು
- ವಲಯ 8 – 69 ಅರ್ಜಿಗಳು
- ವಲಯ 9 – 91 ಅರ್ಜಿಗಳು
ಒಟ್ಟು – 708 ಅರ್ಜಿಗಳು
ಸ್ವೀಕೃತವಾದ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಅಗತ್ಯ ದಾಖಲೆಗಳು ಲಭ್ಯವಿಲ್ಲದ ಅಥವಾ ದಾಖಲೆಗಳಲ್ಲಿ ಲೋಪಗಳಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಲಾಗುವುದು. ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಹೊಂದಿರುವ ಮತ್ತು EC ಹಾಜರುಪಡಿಸಿರುವ ಅರ್ಹ ಅರ್ಜಿಗಳಿಗೆ ದಿನಾಂಕ 31-10-2026 ಶನಿವಾರ ಸಂಜೆ 4 ಗಂಟೆಗಳೊಳಗೆ ಇ-ಖಾತಾ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಇ-ಖಾತಾ ಸೇವೆಯನ್ನು ಸರಳೀಕರಿಸಿ, ತ್ವರಿತವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಈ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದ್ದು, ನಾಗರಿಕರಿಗೆ ಪರಿಣಾಮಕಾರಿ ಸೇವೆ ಒದಗಿಸಲು ಕ್ರಮವಹಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂಕೆ ಸವಿತಾ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಾಲಿಕೆಯ ಎಲ್ಲಾ ವಲಯ ಆಯುಕ್ತರು , ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರುಗಳು ಮತ್ತು ಪಾಲಿಕೆ ಸಿಬ್ಬಂದಿಗಳು ಹಾಜರಿದ್ದರು.






