ಚಿಕ್ಕಮಗಳೂರು,ಅಕ್ಟೋಬರ್,28,2026 (www.justkannada.in): ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಹಿನ್ನೆಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಮಾಜಿ ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಸಿ.ಟಿ ರವಿ, ಹೊಸದಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದರು. ಡಿಕೆ ಶಿವಕುಮಾರ್ ಸರ್ಕಾರಕ್ಕೆ ಹನಿಮೂನ್ ಪಿರಿಯೆಡ್ ಮುಗಿದಿರಲಿಲ್ಲ. ಅದಕ್ಕೂ ಮೊದಲೇ ಡಿಕೆ ಶಿವಕುಮಾರ್ ಸರ್ಕಾರಕ್ಕೆ ಮರ್ಮಾಘಾತವಾಗಿದೆ ಎಂದು ಟೀಕಿಸಿದರು.
ಪರಿಷತ್ ಚುನಾವಣೆಯಲ್ಲಿ ಮತದಾರ ಒಂದು ಸಂದೇಶ ನೀಡಿದ್ದಾನೆ. ನೀವು ಜನರ ಹಿತ ಮರೆತು ಬೆಲೆ ಏರಿಕೆ ನೀತಿ ಅನುಸರಿಸುತ್ತಿದ್ದೀರಿ. ಭ್ರಷ್ಠಾಚಾರದಲ್ಲಿ ತೊಡಗಿದ್ದೀರಿ. ಸ್ಟಿಂಗ್ ಆಪರೇಷನ್ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದೀರಿ. ಅದಕ್ಕೆ ವಿದ್ಯಾವಂತ ಮತದಾರರು ಕಾಂಗ್ರೆಸ್ ಗೆ ಸಂದೇಶ ನೀಡಿದ್ದಾರೆ. ಇದು 2028ರ ಚುನಾವಣೆಗೆ ಕೊಟ್ಟ ಸಂದೇಶ ಎಂದು ಭಾವಿಸುತ್ತೇನೆ ಎಂದು ಸಿ.ಟಿ ರವಿ ಹೇಳಿದರು.
MLC Election, Congress, Defeat, DK Shivakumar, government, MLC, CT Ravi, criticism







