Sunday, October 25, 2026

Dasara Wishes

Happy Dasara
Home Front Page ಕಬ್ಬುಬೆಳೆಗಾರರ ವಿಚಾರದಲ್ಲಿ ಸಿಎಂ ಡಿಕೆಶಿ ಕಪಟ ನಾಟಕ- ಬಿವೈ ವಿಜಯೇಂದ್ರ ಟೀಕೆ

ಕಬ್ಬುಬೆಳೆಗಾರರ ವಿಚಾರದಲ್ಲಿ ಸಿಎಂ ಡಿಕೆಶಿ ಕಪಟ ನಾಟಕ- ಬಿವೈ ವಿಜಯೇಂದ್ರ ಟೀಕೆ

ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಬೆಂಗಳೂರು,ಅ‍ಕ್ಟೋಬರ್,25,2026 (www.justkannada.in):  ಬೆಳಗಾವಿಯಲ್ಲಿ ಕಬ್ಬುಬೆಳಗಾರರ ಜೊತೆ ಸಿಎಂ ಡಿಕೆ ಶಿವಕುಮಾರ್ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಕಬ್ಬುಬೆಳೆಗಾರರ ವಿಚಾರದಲ್ಲಿ ಡಿಕೆ ಶಿವಕುಮಾರ್ ಕಪಟ ನಾಟಕ ಮಾಡುತ್ತಿದ್ದಾರೆ.  ದೆಹಲಿಯಲ್ಲಿ ಇದೆಲ್ಲ ಕೇಂದ್ರದ ಜವಾಬ್ದಾರಿ ಅಂತಾ ನಾಟಕ ಆಡಿದರು.  ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಬರುತ್ತಿದೆ.   ಬೇರೆ ಬೇರೆ ರಾಜ್ಯಗಳು ಕಬ್ಬುಬೆಳೆಗಾರರಿಗೆ ಎಸ್ ಎಪಿ ಕೊಟ್ಟಿವೆ. ರಾಜ್ಯ ಸರ್ಕಾರ ಸಹ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಬೇಕು  ಎಂದು ಆಗ್ರಹಿಸಿದರು.ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಬೆಳೆಪರಿಹಾರವಾಗಿ ಎರಡುವರೆ ಸಾವಿರ ಕೊಡುತ್ತೀವಿ ಅಂತಾ ಹೇಳಿ ಇನ್ನೂ ಕೊಟ್ಟಿಲ್ಲ.  ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಖಜಾನೆ ಖಾಲಿ ಆಗಿದೆ.  ರಾಜ್ಯ ಸರ್ಕಾರ ದಿವಾಳಿ ಆಗಿದೆ. ಬರ ಪರಿಹಾರಕ್ಕೆ ಪರಮೇಶ್ವರ್ ಅವರೇ ಒತ್ತಾಯಿಸ್ತೇನೆ ಅಂದಿದ್ದಾರೆ. ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದು ಗೊತ್ತಾಗುತ್ತೆ. ಇದು ರಾಜ್ಯದ ವಾಸ್ತವ ಸ್ಥಿತಿ. ಬರಗಾಲದ ವೇಳೆ ರಾಜ್ಯ ಸರ್ಕಾರ ತನ್ನ  ಜವಾಬ್ದಾರಿ ನಿಭಾಯಿಸಲಿ.  ಎಲ್ಲದಕ್ಕೂ ಕೇಂದ್ರ ಸರ್ಕಾರ ಅನ್ನೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.CM DK Shivakumar jk02_new jk02 new

 

English Summary
Title

CM and DK Shivakumar's 'deceptive drama' regarding sugarcane farmers – BY Vijayendra's criticism

Short Description
BJP State President B.Y. Vijayendra has criticized the meeting held by Deputy Chief Minister D.K. Shivakumar with sugarcane farmers in Belagavi. Speaking on the matter, B.Y. Vijayendra alleged that D.K. Shivakumar is engaging in a "deceptive drama" regarding the sugarcane farmers. He pointed out that while in Delhi, Shivakumar had feigned that the entire issue was the responsibility of the Central government. Vijayendra emphasized that the state receives significant tax revenue from sugar factories linked to sugarcane cultivation. He further urged the state government to provide a support price (SAP) to the sugarcane farmers.
Keywords
CM DK Shivakumar, deceptive drama, regarding, sugarcane farmers, BY Vijayendra