Saturday, October 24, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Crime ಅನೆ ದಂತ ಅಕ್ರಮ ಸಾಗಾಟ: ಇಬ್ಬರ ಬಂಧನ

ಅನೆ ದಂತ ಅಕ್ರಮ ಸಾಗಾಟ: ಇಬ್ಬರ ಬಂಧನ

ಅನೆ ದಂತ ಅಕ್ರಮ ಸಾಗಾಟ: ಇಬ್ಬರ ಬಂಧನ

ಮೈಸೂರು,ಅಕ್ಟೋಬರ್,24,2026 (www.justkannada.in):  ಅಕ್ರಮವಾಗಿ ಆನೆ ದಂತ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಹುಣಸೂರು ತಾಲ್ಲೂಕು ಬಲ್ಲೇನಹಳ್ಳಿ ಗ್ರಾಮದ ರವಿಚಂದ್ರ ಜೆ., ಕ್ಯಾತಮಾರನಹಳ್ಳಿ,ಯ ರಾಜೇಶ್ ಜೆ ಬಂಧಿತ ಆರೋಪಿಗಳು ಬಂಧಿತರು ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು, ಚಿಕ್ಕಹಳ್ಳಿ ಗ್ರಾಮ ವ್ಯಾಪ್ತಿಯ ಶ್ರೀರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಆನೆ ದಂತ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದುದ್ದನ್ನು ಪತ್ತೆಹಚ್ಚಿ ಆರೋಪಿಗಳಿಂದ ಒಂದು ಆನೆದಂತ, ಆನೆದಂತ ಸಾಗಾಣಿಕೆ ಮಾಡಲು ಬಳಸಿದ್ದ ಬಜಾಜ್ ಪಲ್ಸರ್ 220 SF ಬೈಕ್, ಬ್ಯಾಗ್‌ಗಳು ಮತ್ತು ಎರಡು ಮೊಬೈಲ್ ಪೋನ್ ಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.ಅನೆ ದಂತ ಅಕ್ರಮ ಸಾಗಾಟ: ಇಬ್ಬರ ಬಂಧನ

ಪ್ರಕರಣ ದಾಖಲಿಸಿ ಕೃತ್ಯದಲ್ಲಿ ಭಾಗಿಯಾದ ಇಬ್ಬರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.ಅನೆ ದಂತ ಅಕ್ರಮ ಸಾಗಾಟ: ಇಬ್ಬರ ಬಂಧನ

ಪ್ರಕರಣವನ್ನು ಚಾಮರಾಜನಗರ ಅರಣ್ಯ ವೃತ್ತದ ಮಾನ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ। ಮಾಲತಿಪ್ರಿಯ.ಎಂ ಹಾಗೂ ಮೈಸೂರು ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೈ ರಾಜು ರವರ ಮಾರ್ಗದರ್ಶನದಲ್ಲಿ ಆನೆ ಕಾರ್ಯಪಡೆಯ ಎ.ಸಿ.ಎಫ್ ರುದ್ರೇಶ್.ಜಿ, ವಲಯ ಅರಣ್ಯಾಧಿಕಾರಿ ಸುರೇಂದ್ರ ಕೆ. ಉಪ ವಲಯ ಅರಣ್ಯಾಧಿಕಾರಿಗಳಾದ ಕನ್ನಿಕಾ ಟಿ.ಸಿ, ಸುಮಲತ ಎ.ಎಂ, ಹೇಮಂತ್ ಕುಮಾರ್ ಹೆಚ್.ಬಿ, ಸುರೇಶ್ ಕೆ. ಗಸ್ತು ಅರಣ್ಯ ಪಾಲಕರಾದ ಶ್ರೀ ತಿರುಪತಿ ಪೂಜಾರ, ಸಿದ್ದರಾಜಶೆಟ್ಟಿ ಆರ್, ಇಮಾಮ ಸಾಬ ಸಗರಿ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.elephant tusks jk02_new jk02 new

 

English Summary
Title

Illegal trafficking of elephant tusks: Two arrested

Short Description
Forest officials have arrested two individuals for the illegal trafficking of elephant tusks. The arrested suspects are Ravichandra J. from Ballenahalli village in Hunsur taluk, and Rajesh J. from Kyathamaranahalli. They were apprehended while attempting to sell an elephant tusk on Mosambayanahalli Road, located in the Srirama Layout area of ​​Chikkahalli village (Mysuru taluk, Mysuru district). Authorities seized one elephant tusk, a Bajaj Pulsar 220 SF motorcycle used for transporting the tusk, bags, and two mobile phones from the suspects.
Keywords
Illegal trafficking, elephant tusks, Two arrested, Mysore