Saturday, October 24, 2026

Dasara Wishes

Happy Dasara
Home Front Page ಅ.28 ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ: 72 ಗಂಟೆಗಳಲ್ಲಿ ಇ-ಖಾತಾ ಪಡೆಯಲು ಅವಕಾಶ

ಅ.28 ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ: 72 ಗಂಟೆಗಳಲ್ಲಿ ಇ-ಖಾತಾ ಪಡೆಯಲು ಅವಕಾಶ

ಅ.28 ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ: 72 ಗಂಟೆಗಳಲ್ಲಿ ಇ-ಖಾತಾ ಪಡೆಯಲು ಅವಕಾಶ

 ಮೈಸೂರು,ಅಕ್ಟೋಬರ್,24,2026 (www.justkannada.in)  ನಗರಾಭಿವೃದ್ಧಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ  ಅವರ ನಿರ್ದೇಶನದಂತೆ, ಆಡಳಿತಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಮಾರ್ಗದರ್ಶನದಲ್ಲಿ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಇ-ಖಾತಾ ಸೇವೆ ಒದಗಿಸುವ ಉದ್ದೇಶದಿಂದ ವಿಶೇಷ ಪ್ರಜಾಸೇವಾ ಇ-ಖಾತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ: 28-10-2026, ಬುಧವಾರ ದಂದು ಬೆಳಿಗ್ಗೆ 10.00 ಗಂಟೆ ಯಿಂದ  ಮಧ್ಯಾಹ್ನ 1.00 ಗಂಟೆ ವರೆಗೆ ಮೈಸೂರು ಮಹಾನಗರ ಪಾಲಿಕೆಯ  ಹಳೆಯ ಕೌನ್ಸಿಲ್ ಸಭಾಂಗಣ,ದಲ್ಲಿ ಇ-ಖಾತಾ ಆಂದೋಲನ ನಡೆಯಲಿದೆ.ಅ.28 ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ: 72 ಗಂಟೆಗಳಲ್ಲಿ ಇ-ಖಾತಾ ಪಡೆಯಲು ಅವಕಾಶ

ಪ್ರಮುಖ ಆಕರ್ಷಣೆಗಳು

* ನೋಂದಣಿ ಶುಲ್ಕ: ₹10 + ಸೇವಾ ಶುಲ್ಕ: ₹165 = ಒಟ್ಟು ₹175 ಶುಲ್ಕದಲ್ಲಿ ಇ-ಖಾತಾ!

* ಅರ್ಹ ಅರ್ಜಿಗಳಿಗೆ ದಾಖಲೆ ಪರಿಶೀಲನೆಯ ನಂತರ 72 ಗಂಟೆಗಳಲ್ಲಿ ಇ-ಖಾತಾ ಪಡೆಯುವ ಅವಕಾಶ.

* ಅರ್ಜಿ ಸಲ್ಲಿಕೆ ಹಾಗೂ ದಾಖಲೆಗಳ ಆನ್‌ ಲೈನ್ ಅಪ್‌ಲೋಡ್‌ ಗೆ ಪಾಲಿಕೆ ಸಿಬ್ಬಂದಿಯಿಂದ ಸಹಾಯ.

* ಅರ್ಜಿ ಸಲ್ಲಿಸಿದ ದಿನವೇ ಸ್ವೀಕೃತಿ ಪತ್ರ.

* ಇ-ಖಾತಾ ವಿತರಣೆ: 31-10-2026, ಶನಿವಾರ, ಸಂಜೆ 4.00 ಗಂಟೆ.

ಇ-ಖಾತಾಗೆ ಅಗತ್ಯವಿರುವ ದಾಖಲೆಗಳುಅ.28 ರಂದು ಪ್ರಜಾಸೇವಾ ವಿಶೇಷ ಇ-ಖಾತಾ ಆಂದೋಲನ: 72 ಗಂಟೆಗಳಲ್ಲಿ ಇ-ಖಾತಾ ಪಡೆಯಲು ಅವಕಾಶ

ಎ-ಖಾತಾ (A-Khata):

  1. ನೋಂದಾಯಿತ ಕ್ರಯಪತ್ರ, ದಾನಪತ್ರ ಅಥವಾ ಇತರೆ ನೋಂದಾಯಿತ ಮಾಲೀಕತ್ವದ ದಾಖಲೆ.

2. ಋಣಭಾರ ಪ್ರಮಾಣಪತ್ರ  –                                                                                                               ಅ)   ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಯ ಖಾತಾ ನೋಂದಣಿಯಾಗಿದ್ದಲ್ಲಿ ಮಹಾನಗರ ಪಾಲಿಕೆಯಲ್ಲಿ ಆಸ್ತಿಯ ಖಾತಾ ನೋಂದಣಿಯಾದ ದಿನಾಂಕದಿಂದ 31-03-2026ರವರೆಗಿನ ಅವಧಿಗೆ ಸಂಬಂಧಿಸಿದ ಋಣಭಾರ ಪ್ರಮಾಣಪತ್ರ (Encumbrance Certificate – EC).  ಆ)  ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಯ ಖಾತಾ ನೋಂದಣಿಯಾಗದೇ ಇದ್ದಲ್ಲಿದಾಖಲೆ  ನೋಂದಣಿಯಾದ ದಿನಾಂಕದಿಂದ ಈ ತಹಲ್ ವರೆಗಿನ ಅವಧಿಗೆ ಸಂಬಂಧಿಸಿದ ಋಣಭಾರ ಪ್ರಮಾಣಪತ್ರ (Encumbrance Certificate – EC).

  1. ಪ್ರಸ್ತುತ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
  2. ಆಸ್ತಿ ಮಾಲೀಕರ ಭಾವಚಿತ್ರ ಹಾಗೂ ಆಸ್ತಿಯ ಭಾವಚಿತ್ರ.
  3. ಆಸ್ತಿ ಮಾಲೀಕರ ಆಧಾರ್ ಕಾರ್ಡ್.

ಬಿ-ಖಾತಾ (B-Khata):

  1. ದಿನಾಂಕ 10-09-2024ಕ್ಕಿಂತ ಪೂರ್ವದ ನೋಂದಾಯಿತ ಮಾಲೀಕತ್ವದ ದಾಖಲೆಗಳು.
  2. 2. ಋಣಭಾರ ಪ್ರಮಾಣಪತ್ರ  –                                                                                                              ಅ)   ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಯ ಖಾತಾ ನೋಂದಣಿಯಾಗಿದ್ದಲ್ಲಿ ಮಹಾನಗರ ಪಾಲಿಕೆಯಲ್ಲಿ ಆಸ್ತಿಯ ಖಾತಾ ನೋಂದಣಿಯಾದ ದಿನಾಂಕದಿಂದ 31-03-2026ರವರೆಗಿನ ಅವಧಿಗೆ ಸಂಬಂಧಿಸಿದ ಋಣಭಾರ ಪ್ರಮಾಣಪತ್ರ (Encumbrance Certificate – EC).  ಆ)  ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಯ ಖಾತಾ ನೋಂದಣಿಯಾಗದೇ ಇದ್ದಲ್ಲಿ  ದಾಖಲೆ  ನೋಂದಣಿಯಾದ ದಿನಾಂಕದಿಂದ ಈ ತಹಲ್ ವರೆಗಿನ ಅವಧಿಗೆ ಸಂಬಂಧಿಸಿದ ಋಣಭಾರ ಪ್ರಮಾಣಪತ್ರ (Encumbrance Certificate – EC).
  1. ಪ್ರಸ್ತುತ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿ ರಸೀದಿ.
  2. ಆಸ್ತಿಗೆ ಸಂಬಂಧಿಸಿದ ಆರ್‌ಟಿಸಿ (RTC).
  3. ಆಸ್ತಿ ಮಾಲೀಕರ ಭಾವಚಿತ್ರ ಹಾಗೂ ಆಸ್ತಿಯ ಭಾವಚಿತ್ರ.
  4. ಆಸ್ತಿ ಮಾಲೀಕರ ಆಧಾರ್ ಕಾರ್ಡ್.

ಮುಖ್ಯ ಸೂಚನೆ –

ಆಸ್ತಿ ಮಾಲೀಕರು ತಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯ ಫೋನ್‌ ಅನ್ನು ಕಡ್ಡಾಯವಾಗಿ ತರಬೇಕು. ಇ-ಖಾತಾ ಅರ್ಜಿ ಪ್ರಕ್ರಿಯೆಯಲ್ಲಿ OTP ಸ್ವೀಕರಿಸಿ ದೃಢೀಕರಿಸುವುದು ಅಗತ್ಯವಾಗಿರುವುದರಿಂದ, OTP ದೃಢೀಕರಣ ಪೂರ್ಣಗೊಂಡ ನಂತರವೇ ಮುಂದಿನ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ.

ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ಒಂಬತ್ತು ವಲಯಗಳ ವ್ಯಾಪ್ತಿಯಲ್ಲಿರುವ  ಆಸ್ತಿ ಮಾಲೀಕರು ಅಗತ್ಯ ದಾಖಲೆಗಳು ಮತ್ತು ಆಧಾರ್‌ ಗೆ ಲಿಂಕ್ ಆಗಿರುವ ಮೊಬೈಲ್ ಫೋನ್‌ನೊಂದಿಗೆ ಆಗಮಿಸಿ ಈ ವಿಶೇಷ ಆಂದೋಲನದ ಸದುಪಯೋಗ ಪಡೆದುಕೊಳ್ಳಲು ಕೋರಿದೆದಸರಾ ವೇಳೆ ಸ್ವಚ್ಛತೆ, ನಿರ್ವಹಣೆಗೆ ಅಪಾರ ಮೆಚ್ಚುಗೆ: ಪಾಲಿಕೆ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಆಯುಕ್ತೆ MK ಸವಿತಾ ಧನ್ಯವಾದ

ಅರ್ಜಿ ವಿಧಾನ ಮತ್ತು ಹೆಚ್ಚಿನ ಮಾಹಿತಿಗಾಗಿ 24-10-2026ರಿಂದ ಪಾಲಿಕೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: http://www.mysurucity.mrc.gov.in/ ನೀಡಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ ಸವಿತಾ ಅವರು ತಿಳಿಸಿದ್ದಾರೆ.

Mysore  City Corporation, Praja Seva Special E-Khata Campaign, Oct 28

English Summary
Title

Mysuru E-Khata Campaign 2026: Get Your Digital Property Card in 72 Hours

Short Description
The Mysuru City Corporation (MCC) is hosting a Special Praja Seva e-Aasthi (e-Khata) campaign on October 28, 2026, from 10:00 AM to 1:00 PM at the Old Council Hall, MCC Head Office. Aimed at digitising 2.3 lakh properties to eliminate fraud, this drive offers a quick 72-hour turnaround. Eligible property owners can collect finalized digital property cards on October 31 at 4:00 PM for a ₹175 fee. Bring ownership deeds, EC, current tax receipts, Aadhaar, photos, and the Aadhaar-linked mobile for mandatory OTP verification. Similar camps will run every Friday based on demand.
Keywords
Mysore City Corporation, Praja Seva Special E-Khata Campaign, Oct 28