Friday, October 23, 2026

Dasara Wishes

Minister S.T. Somashekar releases Yuva Dasara posters DasraWishes_JK DasraWishes JK
Happy Dasara
Home Front Page ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು, ಅಕ್ಟೋಬರ್, 23,2026 (www.justkannada.in):  ತಮ್ಮ ವಿರುದ್ಧ ನಡೆದಿರುವ ಸ್ಟಿಂಗ್ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮೊದಲ ಬಾರಿಗೆ ಸುದೀರ್ಘವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,  ತಮ್ಮನ್ನು ಬ್ಲ್ಯಾಕ್‌ ಮೇಲ್ ಮಾಡಲು ಪ್ರಯತ್ನಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಪ್ರಕರಣದ ವಿಚಾರ ತಿಳಿದಿದ್ದು, ಒಬ್ಬ ಪತ್ರಕರ್ತ ಹಾಗೂ ಮತ್ತೊಬ್ಬ ಮಹಿಳೆ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ, ಇದರ ಹಿಂದೆ ಯಾರಿದ್ದಾರೆ ಎಂಬ ಸತ್ಯ ಹೊರಬರಬೇಕು ಎಂದು ಆಗ್ರಹಿಸಿದರು.

“ಇದು ಸಂಪೂರ್ಣ ಸುಳ್ಳು ಆರೋಪ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನನ್ನ ಎಂಟು ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಇಂತಹ ಪ್ರಯತ್ನ ನಡೆದಿರಲಿಲ್ಲ. ಆದರೆ ಈಗ ಇಂತಹ ಘಟನೆ ನಡೆದಿದೆ. ಸ್ಟಿಂಗ್ ಮಾಡಿದವರ ಉದ್ದೇಶ ಸಫಲವಾಗುವುದಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

ಪ್ರಕರಣದ ವಿಚಾರ ತಿಳಿದ ಕೂಡಲೇ ತಾವೇ ಸ್ವಯಂಪ್ರೇರಿತವಾಗಿ ದೂರು ನೀಡಿದ್ದಾಗಿ ತಿಳಿಸಿದ ಅವರು, “ಜನರಿಗೆ ಸತ್ಯ ತಿಳಿಯಬೇಕು ಎಂಬ ಉದ್ದೇಶದಿಂದ ದೂರು ಕೊಟ್ಟಿದ್ದೇನೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅದು ತನಿಖೆಯಿಂದ ಬಹಿರಂಗವಾಗಬೇಕು. ನನ್ನ ಮೇಲೆ ಈ ಹಿಂದೆ ಇಂತಹ ಆರೋಪ ಬಂದಿರಲಿಲ್ಲ” ಎಂದರು.

“ನಾನು ತಪ್ಪೇ ಮಾಡಿಲ್ಲ; ಬೆಂಬಲದ ಅಗತ್ಯವಿಲ್ಲ”

ತಮ್ಮ ಪರವಾಗಿ ಯಾರೂ ನಿಲ್ಲಬೇಕಿಲ್ಲ, ಯಾರ ನೈತಿಕ ಬೆಂಬಲವೂ ಅಗತ್ಯವಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, “ನಾನು ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ತಪ್ಪೇ ಮಾಡದ ಮೇಲೆ ಬೆಂಬಲ ಯಾಕೆ ಬೇಕು? ರಾಜಕೀಯ ಕಾರಣಗಳಿಗಾಗಿ ಕೆಲವರು ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಅದಕ್ಕಿಂತ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರದ ತನಿಖೆಯ ಮೇಲೆ ತಮಗೆ ನಂಬಿಕೆಯಿದೆ ಎಂದು ಹೇಳಿದರು. ಈ ಮೂಲಕ ಪ್ರಕರಣದ ತನಿಖೆ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ದಸರಾ ಉಸ್ತುವಾರಿ ನೇಮಕದ ಬಗ್ಗೆ ಅಸಮಾಧಾನ

ಇದೇ ವೇಳೆ, ಮೈಸೂರು ದಸರಾ ಉಸ್ತುವಾರಿ ವಿಚಾರದಲ್ಲಿಯೂ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದಸರಾ ಉಸ್ತುವಾರಿಗಾಗಿ ಒಂದೇ ದಿನಕ್ಕೆ ಮೂವರು ಮೇಲುಸ್ತುವಾರಿಗಳನ್ನು ನೇಮಿಸುವ ಅಗತ್ಯವೇ ಇರಲಿಲ್ಲ ಎಂದು ಅಭಿಪ್ರಾಯಪಟ್ಟರು.ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

“ಮೇಲುಸ್ತುವಾರಿ ವಹಿಸಿಕೊಂಡಿದ್ದ ಯಾರೊಬ್ಬರೂ ಸ್ಥಳಕ್ಕೆ ಬರಲಿಲ್ಲ. ಆದರೂ ಸರ್ಕಾರ ಮೇಲುಸ್ತುವಾರಿಗಳನ್ನು ನೇಮಿಸಿತ್ತು. ಯಾಕೆ ನೇಮಿಸಿದರು ಎಂಬುದು ನನಗೆ ಗೊತ್ತಿಲ್ಲ. ಇದು ನನ್ನ ಸರ್ಕಾರವಲ್ಲ, ಬೇರೆ ಸರ್ಕಾರ. ಅದು ಮುಖ್ಯಮಂತ್ರಿಗಳ ನಿರ್ಧಾರ. ನಾನೇನು ಮಾಡಲಿ?” ಎಂದು ಪ್ರಶ್ನಿಸಿದರು.ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

ಸ್ಟಿಂಗ್ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಬೇಕು ಎಂದು ಒತ್ತಾಯಿಸಿರುವ ಸಿದ್ದರಾಮಯ್ಯ, ಪ್ರಕರಣದಲ್ಲಿ ತಮ್ಮ ತಪ್ಪಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು jk02_new jk02 new

Attempt,  blackmail,  me, Need,  find out, who, behind,  this, Former CM, Siddaramaiah

English Summary
Title

Siddaramaiah Sting Operation Controversy: Fake Video & Blackmail Row

Short Description
Former Chief Minister Siddaramaiah has, for the first time, responded at length in Mysuru regarding the 'sting' operation conducted against him. Speaking on the matter, former CM Siddaramaiah stated that an attempt was made to blackmail him. He noted that he became aware of the incident in September of this year, adding that a journalist and a woman were involved in the act. He demanded that the truth regarding who is behind this must be brought to light.