Friday, October 23, 2026

Dasara Wishes

Happy Dasara
Home Front Page ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಕ್ಕೆ ಪ್ರಧಾನಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ: ಸಿಎಂ ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿದ್ದಕ್ಕೆ ಪ್ರಧಾನಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ: ಸಿಎಂ ಡಿ.ಕೆ ಶಿವಕುಮಾರ್

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು, ಅಕ್ಟೋಬರ್,23,2026 (www.justkannada.in): “ಕಾಂಗ್ರೆಸ್ ಪಕ್ಷ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಕೊಟ್ಟಿರುವುದರಿಂದಲೇ  ಇಂದು ಪ್ರಧಾನಮಂತ್ರಿಗಳು ಆ ಸ್ಥಾನದಲ್ಲಿ ಕೂತಿದ್ದಾರೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ತಾಜ್ ವೆಸ್ಟ್ ಎಂಡ್ ನಲ್ಲಿ ಮಾಧ್ಯಮಗಳ  ಜೊತೆ ಮಾತನಾಡಿದ ಸಿಎಂ ಡಿಕೆ  ಶಿವಕುಮಾರ್, ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ಮೇಲೆತ್ತಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಟೀಕೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಕಾಂಗ್ರೆಸ್ ಇಲ್ಲವಾಗಿದ್ದರೆ ಈ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ವಿಚಾರ ಪ್ರಧಾನಮಂತ್ರಿಗಳಿಗೂ ಗೊತ್ತು. ನಾವು ನಮ್ಮ ಮೂಲ ಮರೆಯಬಾರದು. ನಮ್ಮ ಮೂಲವನ್ನು ಮರೆತರೆ ನಾವು ಯಶಸ್ವಿಯಾಗುವುದಿಲ್ಲ” ಎಂದು ತಿಳಿಸಿದರು.Prime Minister dks dks 7

ರಾಹುಲ್ ಗಾಂಧಿ ಅವರು ಇಡೀ ವಿಶ್ವ ಎದುರು ನೋಡುತ್ತಿರುವ ನಾಯಕ

ರಾಹುಲ್ ಗಾಂಧಿ ಅವರು ಪದೇ ಪದೆ ವಿದೇಶಕ್ಕೆ ಹೋಗಿ ಬರುತ್ತಿರುವುದರ ಬಗ್ಗೆ ಬಿಜೆಪಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕೇಳಿದಾಗ, “ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರು. ಅನೇಕ ವಿದೇಶದ ನಾಯಕರು, ವಿಶ್ವವಿದ್ಯಾಲಯಗಳು ರಾಹುಲ್ ಗಾಂಧಿ ಅವರಿಗೆ ಆಮಂತ್ರಣ ನೀಡುತ್ತಾರೆ. ರಾಹುಲ್ ಗಾಂಧಿ ಅವರು ಇಡೀ ವಿಶ್ವ ಎದುರು ನೋಡುತ್ತಿರುವ ನಾಯಕ” ಎಂದು ತಿಳಿಸಿದರು.Prime Minister jk02_new jk02 new

 

English Summary
Title

D.K. Shivakumar Says PM Modis Position Is Thanks to Congress Democracy | Latest India Politics

Short Description
Karnataka Deputy Chief Minister D.K. Shivakumar stated that the Prime Minister occupies his position today because the Congress Party established India's democratic system. Speaking on the nation's political history, Shivakumar emphasised that the Congress laid the foundation for constitutional rights, enabling current leadership to govern. Cautioning leaders against forgetting these historical roots, he asserted that without the party's legacy, India would not have its current democratic structure. This statement reinforces the party’s stand on safeguarding Indian democracy.
Keywords
Prime Minister, occupies, position, because, Congress, provided, democratic system, CM D.K. Shivakumar