Saturday, October 24, 2026

Dasara Wishes

ಆಸ್ತಿ ವಿವಾದಕ್ಕೆ ಹರಿದ ನೆತ್ತರು: ಗುಂಡಿಕ್ಕಿ ಆರು ಮಂದಿಯ ಹತ್ಯೆ DasraWishes_JK DasraWishes JK
Happy Dasara
Home Front Page ಸ್ಟಿಂಗ್ ಪ್ರಕರಣ: ಓರ್ವ ಪತ್ರಕರ್ತ ಸೇರಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ-ಸಚಿವ ಯತೀಂದ್ರ ಸಿದ್ದರಾಮಯ್ಯ

ಸ್ಟಿಂಗ್ ಪ್ರಕರಣ: ಓರ್ವ ಪತ್ರಕರ್ತ ಸೇರಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ-ಸಚಿವ ಯತೀಂದ್ರ ಸಿದ್ದರಾಮಯ್ಯ

ಸ್ಟಿಂಗ್ ಪ್ರಕರಣ:ಓರ್ವ ಪತ್ರಕರ್ತ ಸೇರಿ ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ-ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,23,2026 (www.justkannada.in): ಸ್ಟಿಂಗ್ ಆಪರೇಷನ್  ಪ್ರಕರಣದ ತನಿಖೆ ವಿಚಾರ .ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು ಈ ಬಗ್ಗೆ ತಂದೆಗೆ ಮಾಹಿತಿ ಬಂದಿದೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಪತ್ರಕರ್ತ ರಾಕೇಶ್ ಶೆಟ್ಟಿ ಸೇರಿ ಇಬ್ಬರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಯಾರೇ ಇದ್ದರೂ ಅರೆಸ್ಟ್ ಮಾಡಲು ತಂದೆ ಹೇಳಿದ್ದಾರೆ. ನಮ್ಮ ಸರ್ಕಾರದ ತನಿಖೆ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾಗಿ ನಡೆಯುತ್ತಿದೆ. ಅಕಸ್ಮಾತ್ ತನಿಖೆ ಸರಿಯಾಗಿ ನಡೆಯಲಿಲ್ಲ ಅಂದರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.

ಪ್ರತಿ ಬಾರಿ ಉಸ್ತುವಾರಿ ಸಚಿವರ ಫೋಟೊ ಹಾಕಲ್ಲ.

ದಸರಾ ಸರ್ಕಾರಿ ಜಾಹಿರಾತಿನಲ್ಲಿ  ಉಸ್ತುವಾರಿ ಸಚಿವರಾಗಿರುವ ತಮ್ಮ ಫೋಟೊ ಹಾಕದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಪ್ರತಿ ಭಾರಿ ಉಸ್ತುವಾರಿ ಸಚಿವರ ಫೋಟೊ ಹಾಕಲ್ಲ. ನಾನು ಇದನ್ನ ಪರಿಶೀಲನೆ ಮಾಡಿದ್ದೇನೆ. ಆದರೆ ಈ ಬಾರಿ ಮಹಾರಾಜರ ಫೋಟೊ ಹಾಕಿದ್ದಾರೆ. ಮಹಾರಾಜರು ಒಂದು ಪಕ್ಷದಲ್ಲಿದ್ದಾರೆ. ಹೀಗಾಗಿ ಕಾರ್ಯಕರ್ತರು ಉಸ್ತುವಾರಿ ಸಚಿವರ ಫೋಟೋ ಯಾಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.Sting operation yathindra.jpg1

ಸಿಎಂ ಪತ್ನಿ ಪುಷ್ಪಾರ್ಚನೆ ಶಿಷ್ಟಾಚಾರ ಉಲ್ಲಂಘನೆಯಾದರೂ ತಪ್ಪೇನಿಲ್ಲ.

ದಸರಾ ಜಂಬೂಸವಾರಿ ಮೆರವಣಿಗೆ ಚಾಲನೆ ವೇಳೆ ತಾಯಿ ಚಾಮುಂಡೇಶ್ವರಿಗೆ ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಶಿಷ್ಟಾಚಾರದಲ್ಲಿ ಸಿಎಂ ಪತ್ನಿ ಹಾಗೂ ಇಬ್ಬರು ಸಿಎಂಗಳು ಹೆಸರು ಇರಲಿಲ್ಲ. ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿರುವುದು ತಪ್ಪೇನಿಲ್ಲ. ಅವರು ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಅಷ್ಟೇ. ಸಿಎಂ ಪತ್ನಿ ಸರ್ಕಾರದ ಕೆಲಸವನ್ನೇನು ಮಾಡಿಲ್ಲವಲ್ಲ. ಹೀಗಾಗಿ ಪುಷ್ಪಾರ್ಚನೆ ಮಾಡಿದ್ದು ಶಿಷ್ಟಾಚಾರ ಉಲ್ಲಂಘನೆಯಾದರೂ ತಪ್ಪೇನಿಲ್ಲ ಎಂದು ಹೇಳಿದರು.Sting operation jk02_new jk02 new

 

English Summary
Title

Yathindra Siddaramaiah Backs Police Probe Into Sting Operation Case

Short Description
Karnataka Minister Yathindra Siddaramaiah has strongly backed the state police investigation into a controversial sting operation targeting his father, former Chief Minister Siddaramaiah. The Central Crime Branch (CCB) cybercrime cell recently detained two people, including a journalist, for questioning regarding the source of alleged defamatory videos. While opposition leaders claim political targeting, Minister Yathindra emphasized that a rigorous probe is necessary to expose the truth, stating that anyone involved must face justice. A Bengaluru court has already issued an injunction against broadcasting the videos.
Keywords
Sting operation, Two people, journalist, custody, Minister, Yathindra Siddaramaiah