Thursday, October 22, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Front Page ದಸರಾ ಉತ್ಸವಗಳಲ್ಲಿ ಯಾಂತ್ರಿಕ ಆನೆ ಬಳಕೆಗೆ ಪೇಟಾ ಇಂಡಿಯಾ ಮನವಿ

ದಸರಾ ಉತ್ಸವಗಳಲ್ಲಿ ಯಾಂತ್ರಿಕ ಆನೆ ಬಳಕೆಗೆ ಪೇಟಾ ಇಂಡಿಯಾ ಮನವಿ

ದಸರಾ ಉತ್ಸವಗಳಲ್ಲಿ ಯಾಂತ್ರಿಕ ಆನೆ ಬಳಕೆಗೆ ಪೇಟಾ ಇಂಡಿಯಾ ಮನವಿ

ಶಿವಮೊಗ್ಗ,ಅಕ್ಟೋಬರ್,22,2026(www.justkannada.in):  ದಸರಾ ಮೆರವಣಿಗೆಯಲ್ಲಿ ಆನೆಯೊಂದು ಬೆದರಿ ಪುಂಡಾಟ ನಡೆಸಿ, ಮಾವುತನಿಗೆ ಗಾಯವಾಗಿರುವ ಹಾಗೂ ವಾಹನಗಳಿಗೆ ಹಾನಿಯಾಗಿರುವ ಘಟನೆ ಬೆನ್ನಲ್ಲೇ, ರಾಜ್ಯದ ದಸರಾ ಉತ್ಸವಗಳಲ್ಲಿ ಜೀವಂತ ಆನೆಗಳ ಬಳಕೆಯನ್ನು ನಿಲ್ಲಿಸಿ ಯಾಂತ್ರಿಕ ಆನೆಗಳನ್ನು ಬಳಸುವಂತೆ ಪೇಟಾ ಇಂಡಿಯಾ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಸಂಸ್ಥೆ, ಮುಂದಿನ ದಸರಾ ಉತ್ಸವಗಳಿಗೆ ಯಾಂತ್ರಿಕ ಆನೆಗಳನ್ನು ಒದಗಿಸಲು ಸಹಕರಿಸುವುದಾಗಿ ತಿಳಿಸಿದೆ. ಅಕ್ಟೋಬರ್ 21ರಂದು ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸುಮಾರು 650 ಕೆ.ಜಿ. ತೂಕದ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಓಡಾಟ ನಡೆಸಿದ ಪರಿಣಾಮ ಅಂಬಾರಿ ಕೆಳಗೆ ಬಿದ್ದಿದ್ದು, ವಾಹನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅವಘಡ: ದಿಕ್ಕಾಪಾಲಾಗಿ ಓಡಾಡಿದ ಅಂಬಾರಿ ಆನೆ

ಮಂಡ್ಯದ ಡಿಎಂಎಸ್ ಚಂದ್ರವನ ಆಶ್ರಮಕ್ಕೆ ಪೇಟಾ ಇಂಡಿಯಾ ಮತ್ತು CUPA ಸಂಸ್ಥೆಗಳು ಇತ್ತೀಚೆಗೆ ‘ಶಿವಯೋಗೀಶ್ವರ’ ಎಂಬ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಿವೆ. ಇದು ಕರ್ನಾಟಕದಲ್ಲಿ ಈ ಸಂಸ್ಥೆಗಳ ಸಹಯೋಗದಲ್ಲಿ ನೀಡಲಾದ 11ನೇ ಯಾಂತ್ರಿಕ ಆನೆಯಾಗಿದೆ.PETA India jk02_new jk02 new

ಆನೆಗಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಜೀವಂತ ಆನೆಗಳ ಬದಲಿಗೆ ಯಾಂತ್ರಿಕ ಆನೆಗಳನ್ನು ಬಳಸಬೇಕು. ಬಂಧನದಲ್ಲಿರುವ ಆನೆಗಳನ್ನು ಅಭಯಾರಣ್ಯಗಳಿಗೆ ಸ್ಥಳಾಂತರಿಸಿ, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಬೇಕು ಎಂದು ಪೇಟಾ ಇಂಡಿಯಾ ಆಗ್ರಹಿಸಿದೆ.

 

English Summary
Title

PETA Urges Mechanical Elephants for Cruelty-Free Dasara Festivities

Short Description
Following recent safety incidents and animal welfare concerns, PETA India is urging Karnataka to adopt lifelike mechanical elephants for the annual Dasara festivities. Captive festival elephants often face severe psychological stress from loud crowds, fireworks, and heavy ceremonial gear, posing public safety risks. PETA India offers cruelty-free robotic alternatives that replicate real elephant movements like flapping ears and moving trunks. Over 30 temples across India already use these mechanical replicas, allowing traditions to thrive safely while ensuring real elephants stay in their natural habitats.
Keywords
PETA India, urges, use, mechanical elephants, during, Dasara festivities