ಮೈಸೂರು,ಅಕ್ಟೋಬರ್,22,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಿನ್ನೆ ಜಂಬೂಸವಾರಿ ಮೆರವಣಿಗೆ ತೆರೆ ಬಿದ್ದಿದೆ. ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಪ್ರಶಾಂತ ಹೆಜ್ಜೆ ಹಾಕಿ ಮೈಸೂರು ದಸರಾ ಯಶಸ್ವಿಗೊಳಿಸಿದ್ದಾನೆ. ಈ ನಡುವೆ ದಸರಾದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳ ತೂಕ ಹೆಚ್ಚಳವಾಗಿದೆ.
ಹೌದು, ನಿನ್ನೆ ನಡೆದ ಜಂಬೂಸವಾರಿ ಬಳಿಕ ಇದೀಗ ದಸರಾ ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಮೈಸೂರಿನ ಧನ್ವಂತರಿ ರಸ್ತೆಯ ಸಾಯಿರಾಂ ಅಂಡ್ ಕಂನಲ್ಲಿ ತೂಕಪರೀಕ್ಷೆ ನಡೆಸಲಾಗಿದ್ದು ಆನೆಗಳ ತೂಕ ಹೆಚ್ಚಾಗಿದೆ.
ಇಂದೇ ಅರಮನೆಯಿಂದ ಗಜಪಡೆ ಕಾಡಿನತ್ತ ತೆರಳಲಿದ್ದು 12 ಗಂಟೆಗೆ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಲಿದೆ. ಬೀಳ್ಕೊಡುಗೆ ಕಾರ್ಯಕ್ರಮಕ್ಕೂ ಮುನ್ನ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದ್ದು ತೂಕದ ವಿವರ ಹೀಗಿದೆ.
ಅಭಿಮನ್ಯು – 5585
ರೂಪ-3290
ಮಹೇಂದ್ರ -5620
ಗೋಪಿ-5415
ಸುಗ್ರೀವ-6105
ಶ್ರೀರಾಮ-5150 ಕೆಜಿ
ಚೈತ್ರಾ-3520
ಶ್ರೀಕಂಠ – 6040 ಕೆಜಿ
ಏಕಲವ್ಯ – 5915
ಕಾವೇರಿ -3285
ಪ್ರಶಾಂತ -5425
ಲಕ್ಷ್ಮೀ -4010
ಧನಂಜಯ -5570
ನಾಡಹಬ್ಬ ದಸರಾ ಯಶಸ್ವಿಗೆ ಪ್ರಶಾಂತ ಆನೆ ಕಾರಣ- ಅರಣ್ಯಾಧಿಕಾರಿ ಪ್ರಭುಗೌಡ
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಅರಣ್ಯಾಧಿಕಾರಿ ಪ್ರಭುಗೌಡ ಹೇಳಿಕೆ ನಾಡಹಬ್ಬ ದಸರಾ ಯಶಸ್ವಿಯಾಗಿ ಮುಗಿದಿದೆ. ಪ್ರಶಾಂತ ಆನೆ ಯಶಸ್ಸಿಗೆ ಕಾರಣರಾಗಿದ್ದಾನೆ. ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಎಲ್ಲಾ ಆನೆಗಳ ಹೆಲ್ತ್ ಮೆಂಟೈನ್ ಮಾಡಿದ್ದೀವಿ. ಪ್ರಶಾಂತ ಆನೆ ಸೌಮ್ಯ ಸ್ವಭಾವದ ಆನೆ. ಪ್ರಶಾಂತನಿಗೆ ಉತ್ತಮ ಟ್ರೈನಿಂಗ್ ಮಾಡಲಾಗಿತ್ತು. ದಸರಾ ಯಶಸ್ಸಿಗೆ ಶ್ರಮಿಸಿದವರೆಲ್ಲರಿಗೂ ಕೃತಜ್ಞತೆಗಳು ಎಂದರು.
ಇಂದೇ ಕಾಡಿಗೆ ಮರಳುತ್ತಿರುವ ವಿಚಾರ, ಈ ಕುರಿತು ಹೈ ಪವರ್ ಕಮಿಟಿ ಮೀಟಿಂಗ್ ನಲ್ಲೇ ತೀರ್ಮಾನ ಆಗಿತ್ತು. ಸಾಮಾನ್ಯವಾಗಿ ದಸರಾ ಮುಗಿದ ಮರುದಿನ ಆನೆಗಳು ರಿಲ್ಯಾಕ್ಸ್ ನಲ್ಲಿ ಇರುತ್ತಿದ್ದವು. ಈ ಬಾರಿ ನಾಳೆ ಶುಕ್ರವಾರ ಇದೆ. ಈ ಕಾರಣಕ್ಕೆ ಇಂದೇ ಗಜಪಡೆ ಕಳುಹಿಸುವ ತೀರ್ಮಾನ ಮಾಡಲಾಗಿದೆ ಎಂದರು.










