Wednesday, October 21, 2026

Dasara Wishes

ಮೈಸೂರು ದಸರಾ: ಪ್ರಶಾಂತನಿಗೆ ಅಂಬಾರಿ ಕಟ್ಟುವ ಕಾರ್ಯ DasraWishes_JK DasraWishes JK
Happy Dasara
Home Front Page ರಾಜವಂಶಸ್ಥ ಯದುವೀರ್‌ ರಿಂದ ಕಂಕಣ ವಿಸರ್ಜನೆ: ನವರಾತ್ರಿ ಆಚರಣೆ ಸಂಪನ್ನ

ರಾಜವಂಶಸ್ಥ ಯದುವೀರ್‌ ರಿಂದ ಕಂಕಣ ವಿಸರ್ಜನೆ: ನವರಾತ್ರಿ ಆಚರಣೆ ಸಂಪನ್ನ

ರಾಜವಂಶಸ್ಥ ಯದುವೀರ್‌ ರಿಂದ ಕಂಕಣ ವಿಸರ್ಜನೆ: ನವರಾತ್ರಿ ಆಚರಣೆ ಸಂಪನ್ನ

ಮೈಸೂರು ದಸರಾ,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಗೊಳ್ಳುತ್ತಿದ್ದು   ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಖಾಸಗಿ ನವರಾತ್ರಿ ಪೂಜಾ ಕೈಂಕರ್ಯಗಳು ಇಂದು ವಿಜಯದಶಮಿಯಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರರಿಂದ ಕಂಕಣ ವಿಸರ್ಜನೆಯೊಂದಿಗೆ ಧಾರ್ಮಿಕವಾಗಿ ಸಂಪೂರ್ಣಗೊಂಡಿತು.

ಮೈಸೂರು ಅರಮನೆಯಲ್ಲಿ ಇಂದು ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು ಆರಂಭವಾಗಿ ಬಾಗಿಲಿಗೆ ಆಗಮಿಸಿದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ  ಸಲ್ಲಿಸಲಾಯಿತು.ರಾಜವಂಶಸ್ಥ ಯದುವೀರ್‌ ರಿಂದ ಕಂಕಣ ವಿಸರ್ಜನೆ: ನವರಾತ್ರಿ ಆಚರಣೆ ಸಂಪನ್ನ

ಬಳಿಕ ವಿಜಯಯಾತ್ರೆ ಹೊರಟು, ಅರಮನೆ ಮುಂಭಾಗದ ಭುವನೇಶ್ವರಿ ದೇವಾಲಯದ ಒಳಗಡೆ ಇರುವ ಬನ್ನಿ ಮರಕ್ಕೆ (ಶಮಿ ವೃಕ್ಷ) ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ  ಸಲ್ಲಿಸಿ ಬಳಿಕ ವಾಪಸ್ ಅರಮನೆಗೆ ರಾಜವಂಶಸ್ಥರು ಮರಳಿದರು. ಈ ವಿಜಯಯಾತ್ರೆ ಮುಗಿದ ಬಳಿಕ ಅರಮನೆಯ ಶರನ್ನವರಾತ್ರಿ ಪೂಜಾಕಾರ್ಯಗಳು ಸಂಪೂರ್ಣಗೊಂಡವು.Royal family jk02_new jk02 new

 

English Summary
Title

Mysuru Dasara: Royal Navratri Traditions & Vijayadashami Rituals by Yaduveer Wadiyar

Short Description
Celebrate the grand traditions of the Mysuru royal family during Navratri! Led by Yaduveer Krishnadatta Chamaraja Wadiyar, the Wadiyar dynasty observes age-old private rituals during Mysuru Dasara. The festivities begin with the majestic Khasgi Durbar on the gem-encrusted Golden Throne. On Mahanavami, the spectacular Ayudha Puja honors ancestral weapons, royal elephants, and horses. The grand celebrations culminate on the auspicious day of Vijayadashami with the Vijaya Yatra procession and the sacred Banni Puja. Experience India's rich cultural heritage through this magnificent royal festival.
Keywords
Royal family, Yaduveer, Navratri celebrations, auspicious