ಗದಗ, ಅಕ್ಟೋಬರ್,19,2026 (www.justkannada.in): ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಸಂಬಂಧ ತನಿಖೆಯಿಂದ ಹಿಂಜರಿಯುವ ಪೊಲೀಸರನ್ನ ವಜಾಮಾಡಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಕೆ ಪಾಟೀಲ್, ಸ್ಟಿಂಗ್ ಅಪರೆಷನ್ ಅನ್ನೋದು ಅಸಹ್ಯಕರ ಶಬ್ದವಾಗಿದೆ. ಹೆಚ್ ಕೆ ಪಾಟೀಲ್ ಜನರಲ್ಲಿ ಕೀಳು ಅಭಿರುಚಿ ಉಂಟು ಮಾಡುವಂತಹ ಶಬ್ದವಾಗಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಕೆಲವು ನಾಯಕರ ಚಾರಿತ್ರಿಕ ತೆಜೋವಧೆ ಮಾಡುತ್ತಿದ್ದಾರೆ ಇದರಿಂದ ಸಮಾಜಕ್ಕೆ ಏನು ಲಾಭ ಇಲ್ಲ ಎಂದರು.
ತನಿಖೆಯಿಂದ ಹಿಂಜರಿಯುವ ಪೊಲೀಸರನ್ನ ವಜಾ ಮಾಡಬೇಕು. ಅವರ ಬದಲಿಗೆ ಬೇರೆಯವರನ್ನ ತನಿಖೆಗೆ ನೇಮಿಸಬೇಕು. 200 ಅಧಿಕಾರಿಗಳು ಟ್ರ್ಯಾಪ್ ಆಗಿರೋದಕ್ಕೆ ಸಾಕ್ಷಿ ಏನಿದೆ? ಸುಳ್ಳುಸುದ್ದಿಗೆ ಕಿವಿಗೊಡಬೇಡಿ ಎಂದು ಹೆಚ್ ಕೆಪಾಟೀಲ್ ತಿಳಿಸಿದರು.
Key words: Sting Operation:, investigation, Former Minister, H. K. Patil






