ಬೆಂಗಳೂರು,ಅಕ್ಟೋಬರ್,17,2026 (www.justkannada.in): ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸ್ಟಿಂಗ್ ಆಪರೇಷನ್ ಒಳ್ಳೆಯ ಬೆಳವಣಗೆ ಅಲ್ಲ. ಒಬ್ಬ ವ್ಯಕ್ತಿಯನ್ನ ಚುನಾವಣೆಯಲ್ಲಿ ಸೋಲಿಸಬೇಕು ಸ್ಟಿಂಗ್ ಆಪರೇಷನ್ ಮಾಡಿ ಹಿಂದೆ ಸರಿಸೋದು ಅಲ್ಲ ಎಂದರು.
ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಣೆ ಸಂಬಂಧ, ಸಿಎಂ ಸ್ಟಿಂಗ್ ಅಪರೇಷನ್ ಬಗ್ಗೆ ಪ್ರಸ್ತಾಪ ಮಾಡಿ ಸುಮ್ಮನಾಗಿದ್ದಾರೆ. ಆ ಐವರು ಸಚಿವರು ಯಾರು ಅಂತಾ ಹೇಳಲಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.







