ಮೈಸೂರು, ಅ.೧೫,೨೦೨೬: ಕಳೆದ ವರ್ಷ ದಸರಾ ಮಹೋತ್ಸವದ ಸಂಭ್ರಮ ಮುಗಿದ ಕೆಲ ದಿನಗಳಲ್ಲೇ 9 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಾಗರಿಕರನ್ನು ಬೆಚ್ಚಿ ಬೀಳಿಸಿತ್ತು.
ಪೊಲೀಸರ ಕಾರ್ಯಕ್ಷಮತೆಯಿಂದ ಘಟನೆ ನಡೆದ ೨೪ ಗಂಟೆಯಲ್ಲೇ ಆರೋಪಿಯ ಬಂಧನವಾಯ್ತು. ಇದೀಗ ವರ್ಷದ ಬಳಿಕ ಆರೋಪಿಯ ಕೃತ್ಯ ಸಾಬೀತಾಗಿದೆ. ಆತನಿಗೆ ಜೀವಾವಧಿ ಅಥವಾ ಮರಣ ದಂಡನೆ ಶಿಕ್ಷೆ ಖಚಿತವಾಗಿದೆ.
ಆರೋಪಿ ಕೃತ್ಯ ಸಾಬೀತಿಗೆ ನೆರವಾದ ಅಂಶಗಳು…
ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ DNA ಪರೀಕ್ಷಾ ವರದಿ ಮತ್ತು ಪೊಲೀಸರು ಸಂಗ್ರಹಿಸಿರುವ ಹಲವು ಸಾಕ್ಷ್ಯಗಳು. ಇವೆಲ್ಲವೂ ಪ್ರಕರಣದ ತನಿಖೆಯಲ್ಲಿ ಪ್ರಮುಖ ದಾಖಲೆಗಳಾಗಿವೆ.
ನಜರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾದ್ದ ಈ ಪ್ರಕರಣದಲ್ಲಿ, ಬಾಲಕಿಯ ಸಾವಿನ ಕುರಿತು ತೀರ್ಪು ಹೊರ ಬಿದ್ದ ಬೆನ್ನಲ್ಲೇ ಪೊಲೀಸರ ತನಿಖೆಯಲ್ಲಿನ ದಾಖಲೆಗಳಲ್ಲಿರುವ ಪ್ರಮುಖ ಅಂಶಗಳು ಇದೀಗ ಗಮನ ಸೆಳೆದಿವೆ.

ಮರಣೋತ್ತರ ಪರೀಕ್ಷೆಯಲ್ಲಿ ಏನಿದೆ?
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿಧಿವಿಜ್ಞಾನ ವಿಭಾಗದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವೇಳೆ ಬಾಲಕಿಯ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳು ಪತ್ತೆಯಾಗಿವೆ. ತಲೆ, ಮುಖ, ಕುತ್ತಿಗೆ, ಎದೆ, ಹೊಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಕತ್ತರಿಸಿದ, ಚುಚ್ಚಿದ ಹಾಗೂ ಹರಿತವಾದ ಗಾಯಗಳ ಗುರುತುಗಳು ದಾಖಲಾಗಿವೆ.
ತಲೆಯ ಪರೀಕ್ಷೆಯಲ್ಲಿ ಎಡ ಪ್ಯಾರಿಯಟಲ್ ಭಾಗದಲ್ಲಿ ಸುಮಾರು 2.5 x 1.5 ಸೆಂಟಿಮೀಟರ್ ಗಾತ್ರದ ಖಿನ್ನ ತಲೆಬುರುಡೆ ಮುರಿತ ಕಂಡುಬಂದಿದೆ. ಇದರ ಜೊತೆಗೆ, ಮೆದುಳಿನ ಎಡ ಭಾಗದಲ್ಲಿ ಸಬ್ಡ್ಯೂರಲ್ ಮತ್ತು ಸಬ್ಅರಾಕ್ನಾಯ್ಡ್ ರಕ್ತಸ್ರಾವ ಕಂಡುಬಂದಿರುವುದಾಗಿ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನನಾಂಗ ಭಾಗದಲ್ಲೂ ಗಾಯಗಳ ದಾಖಲೆ
ಮರಣೋತ್ತರ ಪರೀಕ್ಷೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಬಾಲಕಿಯ ಜನನಾಂಗ ಭಾಗದಲ್ಲಿ ಹಲವು ಗಾಯಗಳು ಪತ್ತೆಯಾಗಿರುವುದು. ಮುಂಭಾಗದ ಯೋನಿ ಗೋಡೆ, ಲ್ಯಾಬಿಯಾ, ಹಿಂಭಾಗದ ಯೋನಿ ಭಾಗ ಹಾಗೂ ಪೆರಿನಿಯಲ್ ಮತ್ತು ಪೆರಿಯಾನಲ್ ಪ್ರದೇಶಗಳಲ್ಲಿ ಗಾಯಗಳಿರುವುದಾಗಿ ವರದಿಯಲ್ಲಿ ದಾಖಲಿಸಲಾಗಿದೆ. ಹೈಮನ್ ಕೂಡ ಗಾಯಗೊಂಡಿರುವುದಾಗಿ ಮರಣೋತ್ತರ ಪರೀಕ್ಷಾ ದಾಖಲೆ ತಿಳಿಸುತ್ತದೆ.
ಈ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ಪರೀಕ್ಷೆಗಾಗಿ ಯೋನಿ ಸ್ವ್ಯಾಬ್, ಯೋನಿ ಸ್ಮಿಯರ್, ಅನಲ್ ಸ್ವ್ಯಾಬ್ ಮತ್ತು ಅನಲ್ ಸ್ಮಿಯರ್ ಸೇರಿದಂತೆ ಹಲವು ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ಈಗ ಗಮನ ಸೆಳೆದಿರುವುದು DNA ವರದಿ
ಬೆಂಗಳೂರು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಸ್ತುಗಳ DNA ಪರೀಕ್ಷೆ ನಡೆಸಲಾಗಿದೆ.
ಮೃತ ಬಾಲಕಿಯ ರಕ್ತದ ಮಾದರಿ, ರಕ್ತದ ಕಲೆಗಳು, ಕೂದಲು, ದೇಹದಿಂದ ಸಂಗ್ರಹಿಸಿದ ಮಾದರಿಗಳು ಹಾಗೂ ಬಟ್ಟೆ ಸೇರಿದಂತೆ ಹಲವು ಸಾಕ್ಷ್ಯಗಳನ್ನು ಪರೀಕ್ಷಿಸಲಾಗಿದೆ. FSL ವರದಿಯ ಪ್ರಕಾರ, ಕೆಲವು ವಸ್ತುಗಳ ಮೇಲಿನ ರಕ್ತದ ಕಲೆಗಳು ಮಾನವ ಮೂಲದವು ಮತ್ತು ಮಹಿಳಾ ಲಿಂಗಕ್ಕೆ ಸಂಬಂಧಿಸಿದವು ಎಂದು ಪತ್ತೆಯಾಗಿದೆ. ಅದೇ ವೇಳೆ, ಕೆಲವು ಇತರ ವಸ್ತುಗಳ ಮೇಲಿನ ರಕ್ತದ ಕಲೆಗಳು ಮಾನವ ಮೂಲದವು ಮತ್ತು ಪುರುಷ ಲಿಂಗಕ್ಕೆ ಸಂಬಂಧಿಸಿದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೀರ್ಯ ಕಲೆ ಬಗ್ಗೆ FSL ವರದಿಯಲ್ಲಿ ಏನಿದೆ?
ಪ್ರಕರಣದ ಅತ್ಯಂತ ಪ್ರಮುಖ ಅಂಶಗಳಲ್ಲಿ ಒಂದಾಗಿ, ಐಟಂ ನಂಬರ್ 5Bನಲ್ಲಿ ಪತ್ತೆಯಾದ ವೀರ್ಯ ಕಲೆ ಮಾನವ ಮೂಲದ್ದಾಗಿದೆ ಎಂದು FSL ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದಾದ ಬಳಿಕ ನಡೆಸಿದ DNA ಪರೀಕ್ಷೆಯಲ್ಲಿ, ಪ್ರಕರಣದ ಆರೋಪಿ ಎಂದು ಉಲ್ಲೇಖಿಸಲಾಗಿರುವ ಕಾರ್ತಿಕ್ s/o ಕುಮಾರ ಅವರ ಮಾದರಿಯ DNAಯನ್ನು ಹಲವು ಸಾಕ್ಷ್ಯಗಳೊಂದಿಗೆ ಹೋಲಿಕೆ ಮಾಡಲಾಗಿದೆ.
FSL ವರದಿಯ ಪ್ರಕಾರ, ಕಾರ್ತಿಕ್ ಅವರ Y-ಕ್ರೋಮೋಸೋಮಲ್ DNA ಪ್ರೊಫೈಲ್, ಐಟಂ ನಂಬರ್ 5Bನಲ್ಲಿ ಪತ್ತೆಯಾದ ವೀರ್ಯ ಕಲೆ ಸೇರಿದಂತೆ 18C, 21 ಮತ್ತು 23B ಐಟಂಗಳಲ್ಲಿನ DNAಗೆ ಹೊಂದಿಕೆಯಾಗಿದೆ.
ರಕ್ತದ ಕಲೆಗಳಿಗೂ DNA ಹೊಂದಾಣಿಕೆ
ಕಾರ್ತಿಕ್ ಅವರ DNA ಪ್ರೊಫೈಲ್ ಕೆಲವು ರಕ್ತದ ಕಲೆಗಳಿಗೂ ಹೊಂದಿಕೆಯಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ, ಐಟಂ ನಂಬರ್ 16B, 17, 19 ಮತ್ತು 20 ಸೇರಿದಂತೆ ಕೆಲವು ವಸ್ತುಗಳ ಮೇಲಿನ ರಕ್ತದ ಕಲೆಗಳೊಂದಿಗೆ DNA ಹೋಲಿಕೆ ಮಾಡಲಾಗಿದೆ. FSL ವರದಿಯ ಅಂತಿಮ ಅಭಿಪ್ರಾಯದಲ್ಲಿ, ಕಾರ್ತಿಕ್ ಅವರ ಮಾದರಿ ಸಂಬಂಧಿತ ರಕ್ತದ ಕಲೆಗಳು ಮತ್ತು ವೀರ್ಯ ಕಲೆಗಳಿಗೆ ಕೊಡುಗೆ ನೀಡಿರುವ ಸಾಧ್ಯತೆಯನ್ನು ಬೆಂಬಲಿಸುವ ಫಲಿತಾಂಶ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಅಂಶ
ತನಿಖೆಯ ಭಾಗವಾಗಿ ಕಾರ್ತಿಕ್ ಅವರಿಂದ ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ಬಟ್ಟೆ, ಪ್ಯಾಂಟ್, ಒಳ ಉಡುಪು, ಪ್ಯೂಬಿಕ್ ಹೇರ್ ಹಾಗೂ ಇತರ ಮಾದರಿಗಳನ್ನೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದೇ ರೀತಿ, ಮೃತ ಬಾಲಕಿಯಿಂದ ಸಂಗ್ರಹಿಸಲಾದ ರಕ್ತ, ಕೂದಲು, ಯೋನಿ ಮತ್ತು ಅನಲ್ ಮಾದರಿಗಳನ್ನೂ ಪರೀಕ್ಷಿಸಲಾಗಿದೆ.
ಅಂದರೆ, ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ + ವೈದ್ಯಕೀಯ ಸಾಕ್ಷ್ಯ + DNA ಸಾಕ್ಷ್ಯ + ಘಟನಾ ಸ್ಥಳದಿಂದ ಸಂಗ್ರಹಿಸಿದ ಮಾದರಿಗಳು — ಇವೆಲ್ಲವನ್ನೂ ತನಿಖೆಯ ಭಾಗವಾಗಿ ಪರಿಗಣಿಸಲಾಗಿದೆ.

KEY WORDS:
Mysuru girl rape and murder case, Mysuru crime news, Digital evidence in rape case, DNA report evidence, Nazarbad Police Station, Mysuru Dasara crime, Karnataka crime news, POCSO court verdict








