Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಲಲಿತ ಕಲೆ ಮತ್ತು ಕರಕುಶಲ ಶಿಬಿರಕ್ಕೆ ಸಚಿವರಿಂದ ಚಾಲನೆ

ಲಲಿತ ಕಲೆ ಮತ್ತು ಕರಕುಶಲ ಶಿಬಿರಕ್ಕೆ ಸಚಿವರಿಂದ ಚಾಲನೆ

ಮೈಸೂರು: ಅ.11,2026 (www.justkannada.in): ಮೈಸೂರು ದಸರಾ ಮಹೋತ್ಸವ 2026ರ ಲಲಿತ ಕಲೆ ಮತ್ತು ಕರಕುಶಲ ಶಿಬಿರವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಚಾಲನೆ ನೀಡಿದರು.

ಇಂದು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ವತಿಯಿಂದ ಆಯೋಜಿಸಿದ ಲಲಿತ ಕಲೆ ಮತ್ತು ಕರಕುಶಲ ಕಾರ್ಯಕ್ರಮಗಳ  ಶಿಬಿರ  ಹಾಗೂ ರಾಷ್ಟ್ರ ಮಟ್ಟದ ಕರಕುಶಲ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಅಧಿಕಾರಿಗಳೊಡನೆ ವೀಕ್ಷಿಸಿದರು.

ನಂತರ ಅವರು ಮಾತನಾಡಿ 1913  ರಲ್ಲಿ ತಾಂತ್ರಿಕ ಶಿಕ್ಷಣ ಶಾಲೆ ಹಾಗೂ ಸಂಸ್ಥೆಯಾಗಿ ಪ್ರಾರಂಭಗೊಂಡು, ಸ್ವಾತಂತ್ರ್ಯದ ನಂತರ ದೃಶ್ಯಕಲೆ ಮತ್ತು ಶಿಕ್ಷಣವನ್ನು ಉನ್ನತೀಕರಿಸಿ, 1989 ರಲ್ಲಿ ಶ್ರೀ ಜಯಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ ಪ್ರಾರಂಭವಾಯಿತು. ಲಲಿತಕಲೆ ಮತ್ತು ಕರಕುಶಲ ಕಲಾವಿದರಿಗೆ, ಕಲೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಾ ಬಂದಿದೆ ಎಂದರು.Mysore shivaraj

ವಿದ್ಯಾರ್ಥಿಗಳಿಗೆ ಕನಿಷ್ಠ  750 ಹಾಗೂ ಸ್ನಾತಕೋತ್ತರ  ವಿದ್ಯಾರ್ಥಿಗಳಿಗೆ 1000  ಮಾಸಿಕ ಸಹಾಯಧನ ಭರಿಸುವ ಕೆಲಸ ಮಾಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರ ಹಾಗೂ ವನ್ಯಜೀವಿ ಛಾಯಾಗ್ರಹಣ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರು

ಈ ಸಂಸ್ಥೆಯಲ್ಲಿ ಹುದ್ದೆಗಳ ನೇಮಕಾತಿಯ ಅಗತ್ಯವಿದೆ ಸರ್ಕಾರದ ಮೀಸಲಾತಿಗೆ ಸಂಬಂಧಿಸಿದ ಕೆಲವು ಗೊಂದಲಗಳಿದ್ದವು, ಅವುಗಳಿಗೆ ಈಗ ಪರಿಹಾರ ಕಂಡುಕೊಳ್ಳಲಾಗಿದೆ.ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿ, ಆದಷ್ಟು ಬೇಗ ಡಿಪಿಆರ್ ಮೂಲಕ ಹುದ್ದೆಗಳ ಸೃಷ್ಟಿ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಭರವಸೆಯಿಂದ ತ್ವರಿತಗೊಳಿಸಲಾಗುವುದು ಎಂದು ಹೇಳಿದರು.Mysore jk02_new jk02 new

 

English Summary
Title

Mysuru Dasara: State-Level Fine Arts & Handicrafts Camp Inaugurated

Short Description
The vibrant Mysuru Dasara cultural festivities scaled up as Karnataka's Kannada and Culture Minister inaugurated the prestigious state-level fine arts and handicrafts camps at the CAVA premises in Mysuru. Organized by the Dasara Sub-Committee, this interactive event showcases a spectacular blend of traditional and contemporary regional artwork, featuring a unique Togalu Gombe (leather puppetry) wall art camp and an exclusive traditional Mysuru painting exhibition. This cultural hub celebrates India's rich heritage, offering a platform for regional artisans and art lovers visiting the iconic festival.
Keywords
Mysore, dasara, Minister, inaugurates, fine arts, handicrafts camp