Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ನಾಳೆಯಿಂದ ದಸರಾ ಸಂಭ್ರಮ: 11ದಿನ ನಿತ್ಯವೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ- ಪ್ರಧಾನ ಅರ್ಚಕ ಶಶಿಶೇಖರ್...

ನಾಳೆಯಿಂದ ದಸರಾ ಸಂಭ್ರಮ: 11ದಿನ ನಿತ್ಯವೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ- ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್

ಮೈಸೂರು, ಅಕ್ಟೋಬರ್,10,2026 (www.justkannada.in): ನಾಳೆ  ಶುಭ ಧನುರ್ ಲಗ್ನದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದ್ದು, 11ದಿನ ನಿತ್ಯವೂ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾತನಾಡಿ ಮಾಹಿತಿ ನೀಡಿದ  ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ನಾಳೆ ಮುಂಜಾನೆ 5.30ಕ್ಕೆ ತಾಯಿಗೆ ಮಹಾ ರುದ್ರಾಭಿಷೇಕ, ಪಂಚಾಭಿಷೇಕ ನಡೆಯುತ್ತದೆ. ತಾಯಿಗೆ ಹಂಸ ವಾಹಿನಿ ಅಲಂಕಾರ ಮಾಡಲಾಗುತ್ತದೆ. ಬೆಳಿಗ್ಗೆ 11.50 ರಿಂದ 12.05 ಶುಭ ಮುಹೂರ್ತದಲ್ಲಿ ದಸರಾಗೆ ಗಣ್ಯರು ಚಾಲನೆ ನೀಡುತ್ತಾರೆ. 9 ದಿನ 9 ದುರ್ಗೆಯರನ್ನು ಆರಾಧಿಸಿ ಪೂಜೆ ಮಾಡಲಾಗುತ್ತದೆ. ನವರಾತ್ರಿ ನವದುರ್ಗೆಯರ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಸಪ್ತ ಮಾತೃಕೆ ಅಲಂಕಾರವನ್ನೂ ಕೂಡ ಮಾಡಲಾಗುತ್ತದೆ. ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.Dasara celebrations shshishekar deekshith

ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ಶುಚಿಗೊಳಿಸುವ ಕಾರ್ಯ ನೆರವೇರಿಸಲಾಗಿದ್ದು, ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಸಿದ್ಧತೆಗಳು ಆಗಿದೆ. ಶುಭ ಧನುರ್ ಲಗ್ನದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.. 11ದಿನ ನಿತ್ಯವೂ ಚಾಮುಂಡೇಶ್ವರಿಗೆ ವಿಶೇಷ ಪೂಜೆ  ಸಲ್ಲಿಸಲಾಗುತ್ತದೆ. ಅರಮನೆಗೂ ಚಾಮುಂಡಿ ಬೆಟ್ಟಕ್ಕೂ ಅವಿನಾಭಾವ ಸಂಬಂಧವಿದ್ದು ಅರಮನೆಯಲ್ಲಿ ಮಹಾರಾಜರು ಖಾಸಗಿ ದರ್ಬಾರ್ ಮಾಡುತ್ತಾರೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೂ ದರ್ಬಾರ್ ನೆರವೇರುತ್ತದೆ. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಎಲ್ಲರು ಪ್ರಾರ್ಥಿಸೋಣ ಎಂದು ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.Dasara celebrations jk02_new jk02 new

Key words: Dasara celebrations, Special, daily prayers, Goddess Chamundeshwari, Chief Priest, Shashishekhar Dikshit.

English Summary
Title

Mysuru Dasara: Chamundeshwari Temple Special Daily Prayers & Rituals

Short Description
During the grand Mysuru Dasara celebrations, the Sri Chamundeshwari Temple becomes the spiritual epicenter of the festival. Led by Chief Priest Dr. N. Shashishekar Dikshit, sacred special daily prayers and elaborate Navaratri pujas are performed to honor Goddess Chamundeshwari. The daily rituals begin at dawn with powerful chants, including the Mahanyasa Poorvaka Rudrabhishekha and Kalasa Puja. A major highlight for devotees is the daily transformation of the deity's idol, beautifully adorned in the nine distinct forms of Navadurga. This holy season draws thousands to Chamundi Hill to witness these timeless traditions.
Keywords
Dasara celebrations, Special, daily prayers, Goddess Chamundeshwari, Chief Priest, Shashishekhar Dikshit.