ಬೆಳಗಾವಿ,ಅಕ್ಟೋಬರ್,10,2026 (www.justkannada.in): ನಿಮ್ಮ ಮೇಲೆ ಸ್ಟಿಂಗ್ ಅಪರೇಷನ್ ಆಗಬಹುದು ಹುಷಾರಾಗಿರಿ ಎಂದು ಸಿಎಂ ಎಚ್ಚರಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಸ್ಟಿಂಗ್ ಆಗಬಹುದು ಹುಷಾರಾಗಿರಿ ಎಂದು ಸಿಎಂ ಹೇಳಿದ್ದಾರೆ. ಬೇರೆ ಬೇರೆ ವೇಷದಲ್ಲಿ ಬರುತ್ತಾರೆ. ಅಟ್ರ್ಯಾಕ್ಟ್ ಮಾಡುತ್ತಾರೆ. ಟ್ರ್ಯಾಫ್ ಮಾಡುತ್ತಾರೆ ಹುಷಾರಾಗಿರಿ ಎಂದಿದ್ದಾರೆ ಎಂದರು.
ಸಿದ್ದರಾಮಯ್ಯರನ್ನ ಕೆಳಗಿಳಿಸಲು ಸ್ಟಿಂಗ್ ಕಾರಣ ಎಂಬ ಹೆಚ್ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅದರ ಬಗ್ಗೆ ನಮಗೆ ಗೊತ್ತಿಲ್ಲ. ಸ್ಟಿಂಗ್ ಆಗಬಹುದು ಹುಷಾರಾಗಿರಿ ಎಂದು ಹೇಳಿದ್ದಾರೆ ಅಷ್ಟೆ ಎಂದರು.
ಸಿದ್ದರಾಮಯ್ಯರನ್ನ ರಹಸ್ಯವಾಗಿ ಭೇಟಿಯಾಗುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ನಮ್ಮ ನಾಯಕ ಯಾವಾಗಲಾದ್ರೂ ಭೇಟಿ ಆಗಬಹುದು. ಜಮೀರ್ 3 ಬಾರಿ ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ನಾವು ಕಡಿಮೆ ಭೇಟಿಯಾಗಿದ್ದವು ಎಂದರು.
Key words: .






