ಬೆಂಗಳೂರು,ಅಕ್ಟೋಬರ್,8,2026 (www.justkannada.in): ಸಚಿವರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಗೊಂದಲವಿಲ್ಲ. ಸಿಎಂ ಸಕ್ರಿಯವಾಗಿ ಜನರ ಮಧ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಬಂದ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಲಾಗುತ್ತಿದೆ. ರಾಜ್ಯ ಸರ್ಕಾರವನ್ನ ಕೆಡವಲು ಕೇಂದ್ರದಿಂದ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.
ಕೆಪಿಎಸ್ ಸಿಯಲ್ಲಿ ಎಲ್ಲಾ ಪಕ್ಷದವರ ಹಸ್ತಕ್ಷೇಪವಿದೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಿವಶಂಕರಪ್ಪ ಸಾಹುಕಾರ್ ಪ್ರಮುಖ ಆರೋಪಿ ಎಂದು ಹೇಳುತ್ತಿದ್ದೇವೆ. ಬಿಜೆಪಿ ಜೆಡಿಎಸ್ ನವರು ಶಿವಶಂಕರಪ್ಪ ಬಗ್ಗೆ ಮಾತನಾಡುತ್ತಾರಾ? ಎಷ್ಟು ಸಾರಿ ಡಿಕೆಶಿ, ಪ್ರಿಯಾಕ್ ಖರ್ಗೆ ಅಂತಾರೆ. ಒಮ್ಮೆಯಾದರೂ ಶಿವಶಂಕರಪ್ಪ ಸಾಹುಕಾರ್ ಹೆಸರು ಹೇಳಿದ್ದಾರಾ? ಸಾಹುಕಾರ್ ಬಗ್ಗೆ ಯಾವತ್ತೂ ಮಾತಾಡಿಲ್ಲ ಯಾಕೆ ಸಾಹುಕಾರ್ ರನ್ನು ಕೆಪಿಎಸ್ ಸಿ ಅಧ್ಯಕ್ಷ ಮಾಡಿದ್ದು ಯಾರು? ಬಿಜೆಪಿ-ಜೆಡಿಎಸ್ ದುಡ್ಡು ಕೊಟ್ಟು ಶಿವಶಂಕರಪ್ಪ ಸಾಹುಕಾರ್ ನೇಮಿಸಿರುವುದು. ಕೆಪಿಎಸ್ ಸಿ ಸದಸ್ಯರನ್ನು ನೇಮಕಾತಿ ಮಾಡಿದ್ದವರು ಯಾರು? ಇಂದು ಜೈಲಿನಲ್ಲಿರುವವರನ್ನು ಅಪಾಯಿಂಟ್ ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು.







