Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ, ಸಿಎಂ ಡಿಕೆಶಿ ನುಡಿದಂತೆ ನಡೆದಿದ್ದಾರೆ-ಸಚಿವ ಯತೀಂದ್ರ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಸಿದ್ದರಾಮಯ್ಯ, ಸಿಎಂ ಡಿಕೆಶಿ ನುಡಿದಂತೆ ನಡೆದಿದ್ದಾರೆ-ಸಚಿವ ಯತೀಂದ್ರ

ಮೈಸೂರು,ಅಕ್ಟೋಬರ್,5,2026 (www.justkannada.in): ನಾವು ನುಡಿದಂತೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ.  ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡರು. ಸಿದ್ದರಾಮಯ್ಯರಂತೆ ಸಿಎಂ ಡಿಕೆ ಶಿವಕುಮಾರ್ ಸಹ ಕೆಲಸ ಮಾಡುತ್ತಿದ್ದಾರೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಂಜನಗೂಡು ತಾಲೂಕಿನ ದಾಸನೂರು ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ವರುಣಾ ವ್ಯಾಪ್ತಿಯಲ್ಲಿ 146 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕೊಟ್ಟಿದ್ದೇವೆ. 56 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ನೂತನವಾಗಿ ನಿರ್ಮಾಣಗೊಂಡಿದೆ. ಈ ಸರ್ಕಾರದಲ್ಲಿ ಹಣ ಇಲ್ಲ ಅಂತಾರೆ. ಹಣ ಇಲ್ಲದೆ ಇಷ್ಟೆಲ್ಲ ಕೆಲಸನ್ನು ಮಾಡಲು ಆಗತ್ತಾ? ಗ್ಯಾರಂಟಿ ಕೊಡಲ್ಲ ನಿಲ್ಲಿಸುತ್ತಾರೆ ಅಂದರು. ನಾವು ನುಡಿದಂತೆ ಗ್ಯಾರೆಂಟಿಗಳನ್ನು ಕೊಟ್ಟವು . ನುಡಿದಂತೆ ನಿಮ್ಮ ಸಿದ್ದರಾಮಯ್ಯ ನಡೆದುಕೊಂಡರು. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದರು.Launch yathindra siddaramaiah

ಮಹಿಳೆಯರಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ ಕೊಟ್ಟಿದ್ದೇವೆ, ಗೃಹಜ್ಯೋತಿ ಕೊಟ್ಟಿದ್ದೇವೆ. ಇದು ನೀವು ನಮ್ಮನ್ನು ನಂಬಿ ಮತ ಹಾಕಿದಕ್ಕೆ ನಾವು ಹೇಳಿದಂತೆ ನಡೆದುಕೊಂಡಿದ್ದೇವೆ. ಸರ್ಕಾರದ ಹಣ ಅಂದರೆ ಜನರ ಹಣ. ನಿಮ್ಮ ಹಣ ನಿಮಗೆ ನಾವು ಯೋಜನೆಗಳ ಮುಖಾಂತರ ಕೊಡುತ್ತಿದ್ದೇವೆ. ಜನರ ಅಭಿವೃದ್ಧಿ ನಮ್ಮ ಪಕ್ಷದ ಆದ್ಯತೆ ಎಂದರು.

ಸಿಎಂ ಡಿಕೆಶಿಯನ್ನು ಹೊಗಳಿದ ಯತೀಂದ್ರ ಸಿದ್ದರಾಮಯ್ಯ

ವರುಣಾ ಕ್ಷೇತ್ರದ ಜನರ ಆಶೀರ್ವಾದದಿಂದ ನಮ್ಮ ತಂದೆ ಸಿಎಂ ಆದರು. ನಾನು ಕೂಡ ನಿಮ್ಮಿಂದ ಎಂ.ಎಲ್. ಎ ಆಗಿದ್ದೇನೆ. ಈಹಗ ಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಇದಕ್ಕೆಲ್ಲ ಕಾರಣ ವರುಣಾ ಕ್ಷೇತ್ರದ ಜನರು. ಈಗ ಡಿಕೆಶಿ ಸಿಎಂ ಆಗಿದ್ದಾರೆ. ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ. ನೇಗಿಲು ಯೋಜನೆ ಜಾರಿಗೆ ತಂದಿದ್ದಾರೆ. ರೈತರ ಹೊಲವನ್ನು ಉಚಿತವಾಗಿ ಉಳುವ ವ್ಯವಸ್ಥೆ ಮಾಡಿದ್ದೇವೆ. ಸಿದ್ದರಾಮಯ್ಯರಂತೆ ಡಿಕೆಶಿಯು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಡಿ ಹೊಗಳಿದರು.Launch jk02_new jk02 new

 

English Summary
Title

Siddaramaiah Launches Massive Development Works in Varuna with Dr. Yathindra

Short Description
Karnataka Chief Minister Siddaramaiah launched a series of major development works in the Varuna constituency alongside his son, Dr. Yathindra Siddaramaiah. The high-impact infrastructure projects, valued at hundreds of crores, focus heavily on improving rural drinking water pipelines, advancing minor irrigation, and boosting local educational infrastructure. As a key political stronghold, the Varuna assembly segment continues to see aggressive state-backed growth and strategic welfare implementation. Dr. Yathindra remains at the forefront of monitoring these grassroots grievances and ensuring swift project execution across Mysuru.
Keywords
Launch, development works, Varuna, Minister Yathindra Siddaramaiah