Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಅ.4 ರಂದು ಪ್ರತಿಷ್ಠಿತ ‘L-Etape Mysuru-2026’ ಸೈಕ್ಲಿಂಗ್ ಸರಣಿ: ಸಂಚಾರ ಬದಲಾವಣೆ  

ಅ.4 ರಂದು ಪ್ರತಿಷ್ಠಿತ ‘L-Etape Mysuru-2026’ ಸೈಕ್ಲಿಂಗ್ ಸರಣಿ: ಸಂಚಾರ ಬದಲಾವಣೆ  

ಮೈಸೂರು, ಅಕ್ಟೋಬರ್,2,2026 (www.justkannada.in) :  ಭಾರತೀಯ ಆವೃತ್ತಿಯಾದ ಸೈಕ್ಲಿಂಗ್ ಸೀರೀಸ್ L-Etape Mysuru-2026 ನ್ನು ಅಕ್ಟೋಬರ್ 04 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 6.00 ಗಂಟೆಯಿಂದ 10.30 ಗಂಟೆಯವರೆಗೆ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನ, ಮೈಸೂರು ಇಲ್ಲಿಂದ ಆಯೋಜಿಸಲು ಉದ್ದೇಶಿಸಲಾಗಿದ್ದು, ಸದರಿ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಸುಮಾರು 1500 ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಮೈಸೂರು ಅರಮನೆ, ಡಿ.ಡಿ. ಅರಸ್ ರಸ್ತೆ, ರಾಮಸ್ವಾಮಿ ವೃತ್ತ, 100 ಅಡಿ ರಸ್ತೆ, ಗನ್ ಹೌಸ್ ವೃತ್ತ, ನಂಜನಗೂಡು ರಸ್ತೆ, ರಾಜಹಂಸ ಜಂಕ್ಷನ್, ಲಾರಿ ಟರ್ಮಿನಲ್, ಚಾಮಾಪ್ಪಜಿ ರಸ್ತೆ, CAR ಜಂಕ್ಷನ್, ತಾವರಕಟ್ಟೆ, ಚಾಮುಂಡಿಬೆಟ್ಟ ಮೇಲೆ ತಲುಪಿ, ಉತ್ತನಹಳ್ಳಿ ಮೂಲಕ ಹೊಸಹುಂಡಿಯಿಂದ ರಿಂಗ್ ರಸ್ತೆ ಮೂಲಕ ಟಿ. ನರಸೀಪುರ ಜಿಂಕ್ಷನ್ ತಲುಪಿ, ಅಲ್ಲಿಂದ ಟಿ. ನರಸೀಪುರ, ಸುತ್ತೂರು, ವರುಣ ಮತ್ತು ಹೊಸಹಳ್ಳಿ ಕಡೆಗೆ ಸಾಗಲಿದೆ. ನಂತರ ಡಾಕ್ಸರ್ಸ್ ಕಮ್ಯುನಿಟಿ ಹಾಲ್, ಲಲಿತ್ ಮಹಲ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, MRC ಸಿಗ್ನಲ್ ಮತ್ತು ಕಾರಂಜಿ ಕೆರೆ ಬಂಡ್ ರಸ್ತೆ ಮಾರ್ಗವಾಗಿ ಹಿಂದಿರುಗಿ, ಎಂ. ಕೆ. ಇರಾನಿ ರಸ್ತೆಯಲ್ಲಿ ರೇಸ್ ಅಂತ್ಯಗೊಳ್ಳಲಿದೆ.

ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು, ಸಾಧ್ಯವಾದಲ್ಲಿ ಪರ್ಯಾಯ ಮಾರ್ಗಗಳನ್ನು ಬಳಸಲು ಹಾಗೂ ರೇಸ್ ಸಮಯದಲ್ಲಿ ಸಂಚಾರ ಪೊಲೀಸರು ನೀಡುವ ಸೂಚನೆ ಮತ್ತು ಮಾರ್ಗ ಬದಲಾವಣೆ ಫಲಕಗಳನ್ನು ಪಾಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಅವರ ಮೊ: 9902588176 ಹಾಗೂ ಸಂಚಾಲಕ ಲೋಕೇಶ್ ಅವರ  ಮೊ: 9986973280 ನ್ನು  ಸಂಪರ್ಕಿಸಬಹುದೆಂದು ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ  ಭಾಸ್ಕರ್ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘L-Etape Mysuru-2026, cycling series, Oct. 4, Traffic changes

English Summary
Title

L’Etape Mysuru 2026 Traffic Changes: Road Closures & Timing

Short Description
Planning to travel during L'Etape Mysuru 2026? The inaugural Tour de France cycling event on Sunday, October 4, 2026, brings major Mysuru traffic changes and road closures. Over 2,500 riders will flag off from the Mysuru Palace starting at 6:00 AM. Expect total vehicle bans and Chamundi Hills road closures until 10:40 AM for the "King of the Mountain" climb. Peripheral routes toward the KRS region and Devaraj Urs Road will also face severe diversions. Commuters are advised to avoid outer ring segments before midday and use alternate public transit routes. Check official Mysuru traffic police advisories to plan your weekend commute.
Keywords
‘L-Etape Mysuru-2026, cycling series, Oct. 4, Traffic changes