ಮೈಸೂರು, ಅಕ್ಟೋಬರ್, 2,2026 (www.justkannada.in): ನಾಡಹಬ್ಬವಾದ ದಸರಾ ಮಹೋತ್ಸವದ-2026ರ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಸಂಜೆ 7.00 ರಿಂದ 8.00 ಗಂಟೆಯವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಅಕ್ಟೋಬರ್ 05 ರಿಂದ ನವೆಂಬರ್ 01 ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿರುತ್ತದೆ.
ಮುಂದುವರೆದು ನವೆಂಬರ್ 02 ರಿಂದ ಎಂದಿನಂತೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ನಡೆಸಲಾಗುವುದೆಂಬ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






