Friday, October 2, 2026

BDA Apartments

Home Front Page ‘ಸರ್ವಧರ್ಮ ಪ್ರಾರ್ಥನಾ’ ಸಭೆಯಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭಾಗಿ

‘ಸರ್ವಧರ್ಮ ಪ್ರಾರ್ಥನಾ’ ಸಭೆಯಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಭಾಗಿ

ಮೈಸೂರು,ಅಕ್ಟೋಬರ್,2,2026 (www.justkannada.in):  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಇಂದು ಮೈಸೂರು ನಗರದ ಪುರಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸರ್ವಧರ್ಮ ಪ್ರಾರ್ಥನಾ’ ಸಭೆಯಲ್ಲಿ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವಡಾ. ಯತೀಂದ್ರ ಸಿದ್ದರಾಮಯ್ಯ ಭಾಗವಹಿಸಿದರು.

ಜಿಲ್ಲಾಡಳಿತ, ಮೈಸೂರು ಮಹಾನಗರ ಪಾಲಿಕೆ ಮತ್ತು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ಸಹಯೋಗದೊಂದಿಗೆ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ನಮನಗಳನ್ನು ಅರ್ಪಿಸಿದರು.Minister yathindra siddaramaiah.jpg12

ವಿವಿಧ ಧರ್ಮಗಳ ಪೂಜ್ಯ ಧರ್ಮಗುರುಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಸರ್ವಧರ್ಮ ಪ್ರಾರ್ಥನಾ ಸಭೆಯಲ್ಲಿ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಲಾಯಿತು.Minister yathindra siddaramaiah123

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.Dr. Yathindra Siddaramaiah jk02_new jk02 new

 

English Summary
Title

Dr Yathindra Siddaramaiah Inaugurates Gandhi Jayanti Sarvadharma Prarthana Meeting in Mysuru

Short Description
On October 2, 2026, Karnataka Minister Dr. Yathindra Siddaramaiah inaugurated the Gandhi Jayanti Prayer Meeting (Sarvadharma Prarthana) at the Mysuru Town Hall. Jointly organised by the Mysuru District Administration, the MCC, and the Department of Information & Public Relations, the event commenced at 8:30 AM with MLA K. Harishgowda presiding. Minister Siddaramaiah offered floral tributes (Pushparchane) to Mahatma Gandhi's statue, promoting peace, truth, and communal harmony.
Keywords
Minister, Dr. Yathindra Siddaramaiah, 'Sarvadharma Prarthana, meeting, Gandhi jayanthi